ಅಮೇರಿಕಾದಲ್ಲಿನ ಪಜ್ಯೂ ವಿದ್ಯಾಪೀಠದಲ್ಲಿ ಭಾರತೀಯ ವಂಶದ ವಿದ್ಯಾರ್ಥಿಗಳ ಹತ್ಯೆ !
ಅಮೇರಿಕಾದಲ್ಲಿನ ಇಂಡಿಯಾನಾ ಭಾಗದಲ್ಲಿರುವ ಪಜ್ಯೂ ವಿದ್ಯಾಪೀಠದಲ್ಲಿನ ಕಲಿಯುತ್ತಿರುವ ಭಾರತೀಯ ವಂಶದ ವಿದ್ಯಾರ್ಥಿಯ ಅಕ್ಟೋಬರ್ ೪ರ ರಾತ್ರಿ ವಿದ್ಯಾಪೀಠದ ವಸತೀಗೃಹದಲ್ಲಿ ಹತ್ಯೆ ಮಾಡಲಾಗಿದೆ. ವರುಣ ಮನೀಷ ಛೆಡಾ ಎಂಬುದು ಈ ೨೦ ವರ್ಷದ ವಿದ್ಯಾರ್ಥಿಯ ಹೆಸರಾಗಿದ್ದು ಪೊಲೀಸರು ಆತನ ಕೋಣೆಯಲ್ಲಿರುವ ಕೋರಿಯನ್ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ.