ನ್ಯೂಯಾರ್ಕ್‌ನ ಹಿಂದೂ ದೇವಾಲಯದ ಆವರಣದಲ್ಲಿ ಮ. ಗಾಂಧಿ ಪುತ್ಥಳಿ ಧ್ವಂಸ

ಇನ್ನೂ ಯಾರನ್ನೂ ಬಂಧಿಸಿಲ್ಲ !

ನ್ಯೂಯಾರ್ಕ್ (ಅಂಮೇರಿಕಾ) – ಆಗಸ್ಟ್ ೧೮ ರ ಮಧ್ಯರಾತ್ರಿ, ದಕ್ಷಿಣ ರಿಚ್ಮಂಡ್ ಹಿಲ್‌ನಲ್ಲಿರುವ ಕ್ವೀನ್ಸ್ ಕೌಂಟಿ ಎಂಬಲ್ಲಿನ ಶ್ರೀ ತುಳಸಿ ದೇವಸ್ಥಾನದ ಪ್ರದೇಶದಲ್ಲಿರುವ ಮ.ಗಾಂಧಿಯವರ ಪುತ್ಥಳಿಯನ್ನು ಅಜ್ಞಾತರು ಧ್ವಂಸ ಮಾಡಿದ್ದಾರೆ. ಅದಾದ ನಂತರ ಅಲ್ಲಿನ ರಸ್ತೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ‘ಗ್ರಾಂಡಪಿ’ ಮತ್ತು ‘ಡಾಗ್’ ಎಂದು ಬರೆದು ಹಿಂದೂಗಳ ವಿರುದ್ಧ ದ್ವೇಷ ಸಾಧಿಸಿದರು. ಈ ವಿಧ್ವಂಸಕ ಕೃತ್ಯದ ನಂತರ ೬ ಜನರು ಪರಾರಿಯಾದರು. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ. ಕಳೆದ ಎರಡು ವಾರಗಳಲ್ಲಿ ಧ್ವಂಸ ನಡೆದಿರುವ ಎರಡನೇ ಘಟನೆ ಇದಾಗಿದೆ. ‘ದಾಳಿಕೋರರು ಧ್ವಂಸ ಮಾಡುವಾಗ ಹಿಂದಿಯಲ್ಲಿ ಮಾತನಾಡುತ್ತಿದ್ದರು’, ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ನಿರಂತರ ಗಾಂಧಿ ಪುತ್ಥಳಿ ಧ್ವಂಸ

ಈ ಮೊದಲು ಜೂನ್ ೨೦೨೦ ರಲ್ಲಿ, ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಗಾಂಧಿಯವರ ಪುತ್ಥಳಿಯ ಮೇಲೆ ‘ಸ್ಪ್ರೇ ಪೇಂಟಿಂಗ್’ ಮಾಡಲಾಗಿತ್ತು. ಅದರ ನಂತರ ಡಿಸೆಂಬರನಲ್ಲಿ ಪುನಃ ಈ ಪುತ್ಥಳಿಯನ್ನು ಧ್ವಂಸಗೊಳಿಸಲಾಗಿತ್ತು. ಜನವರಿ ೨೦೨೧ ರಲ್ಲಿ, ಕ್ಯಾಲಿಫೋರ್ನಿಯಾದ ಸೆಂಟ್ರಲ್ ಪಾರ್ಕ್‌ನಲ್ಲಿ ಗಾಂಧಿಯವರ ಪುತ್ಥಳಿಯನ್ನು ಧ್ವಂಸಗೊಳಿಸಲಾಯಿತು. ಈ ವರ್ಷ ಜನವರಿ ೨೬ ರಂದು, ಖಲಿಸ್ತಾನಿವಾದಿಗಳು ವಾಷಿಂಗ್ಟನ್‌ನಲ್ಲಿ ಗಾಂಧಿಯವರ ಪುತ್ಥಳಿಯ ಮೇಲೆ ತಮ್ಮ ಧ್ವಜವನ್ನು ಹಾರಿಸಿದ್ದರು.