ಜಿಹಾದಿ ಭಯೋತ್ಪಾದನೆಗಾಗಿ ಚಿಕ್ಕ ಮಕ್ಕಳನ್ನು ಉಪಯೋಗಿಸುವುದು ಖೇದಕರ !

ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತದ ಪ್ರತಿಪಾದನೆ

ನ್ಯೂಯಾರ್ಕ್ (ಅಮೇರಿಕಾ) – ಭಾರತವು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡುವಾಗ ಜಿಹಾದಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ಸಹಭಾಗದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ. ಈ ಸಭೆಯಲ್ಲಿ ಮಂಡಳಿಯು ಒಂದು ವರದಿ ಪ್ರಸ್ತುತಪಡಿಸಿತು. ವರದಿಯಲ್ಲಿ, ಶೇಕಡ ೨೫ ರಷ್ಟು ಮಕ್ಕಳು ಭೂ ಸುರಂಗ, ಸ್ಪೋಟಕ ಉಪಕರಣಗಳು ಮತ್ತು ಯುದ್ಧದ ಸಮಯದಲ್ಲಿ ಉಳಿದಿರುವ ಸ್ಪೋಟಕ ಅವಶೇಷಗಳ ಸ್ಪೋಟದಿಂದ ಸಾವನ್ನಪ್ಪುತ್ತಿದ್ದಾರೆ.

ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ಉಚ್ಛಮಟ್ಟದ ಸಭೆಯಲ್ಲಿ ಭಾರತದ ರಾಯಭಾರಿ ಆರ್ ರವೀಂದ್ರ ಇವರು, ಜಾಗತಿಕ ಮಹಾಮಾರಿಯಿಂದ ಶಾಲೆಗಳು ಮುಚ್ಚಲ್ಪಟ್ಟಿವೆ. ಆದ್ದರಿಂದ ಭಯೋತ್ಪಾದಕ ಸಂಘಟನೆಗಳು ಅವರ ಕಾರ್ಯಾಚರಣೆಗಾಗಿ ಚಿಕ್ಕ ಮಕ್ಕಳ ದಾರಿ ತಪ್ಪಿಸಿ ಅವರನ್ನು ಉಪಯೋಗಿಸಿ ಭಯೋತ್ಪಾದಕರ ರಕ್ಷಣೆಗಾಗಿ ಗುರಾಣಿ ಹಾಗೆ ಉಪಯೋಗಿಸುತ್ತಿದ್ದಾರೆ. ಮಕ್ಕಳ ರಕ್ಷಣೆ ಮತ್ತು ಭಯೋತ್ಪಾದನೆಗೆ ವಿರೋಧ ಮಾಡುವುದಕ್ಕಾಗಿ ಸದಸ್ಯ ದೇಶಗಳು ಅವರ ದಾಯಿತ್ವ ನಿಭಾಯಿಸುವ ಇಚ್ಛಾಶಕ್ತಿ ತೋರಬೇಕು.