ಪ್ರತಿ ವರ್ಷ ನಾಗರಿಕತ್ವ ತ್ಯಜಿಸುತ್ತಿರುವ ಒಂದೂವರೆ ಲಕ್ಷ ಭಾರತೀಯರು

ಎಲ್ಲಕ್ಕಿಂತ ಹೆಚ್ಚಿನ ಜನರ ಮೊದಲ ಆಯ್ಕೆ ಅಮೇರಿಕಾ !

ಹೊಸ ದೆಹಲಿ – ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ ಇವರು ಸಂಸತ್ತಿನಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ಸರಾಸರಿ ಒಂದೂವರೆ ಲಕ್ಷ ನಾಗರಿಕರು ಭಾರತದ ನಾಗರಿಕತ್ವವನ್ನು ತ್ಯಜಿಸುತ್ತಿದ್ದಾರೆ. ಇಂತಹವರಿಗೆ ನೆಲಸಲು ಮೊದಲನೇ ಆಯ್ಕೆ ಅಮೇರಿಕಾ ಆಗಿದೆ.

೧. ರಾಯ್ ಇವರು ಮಾಹಿತಿ ನೀಡುವಾಗ ೨೦೨೧ ರಲ್ಲಿ ೧ ಲಕ್ಷ ೬೩ ಸಾವಿರ ೩೭೦ ಜನರು ಭಾರತದ ನಾಗರಿಕತ್ವ ತ್ಯಜಿಸಿ ವಿದೇಶಗಳಲ್ಲಿ ನೆಲಸಿದ್ದಾರೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ೭೮ ಸಾವಿರ ೨೮೪ ಜನರು ಅಮೇರಿಕಾದ ನಾಗರಿಕತ್ವ ಸ್ವೀಕರಿಸಿದ್ದಾರೆ. ಅದೇ ೨೦೧೯ ರಲ್ಲಿ ೬೧ ಸಾವಿರ ೬೮೩ ನಾಗರಿಕರು ಅಮೇರಿಕಾದ ನಾಗರಿಕತ್ವ ಸ್ವೀಕರಿಸಿದ್ದಾರೆ.

೨. ೨೦೧೯ ರಲ್ಲಿ ಯಾವುದೇ ಭಾರತೀಯ ನಾಗರಿಕನು ಪಾಕಿಸ್ತಾನದ ನಾಗರಿಕತ್ವ ಸ್ವೀಕರಿಸಿರಲಿಲ್ಲ. ೨೦೨೦ ರಲ್ಲಿ ೭, ಹಾಗೂ ೨೦೨೧ ರಲ್ಲಿ ೪೧ ಜನರು ಪಾಕಿಸ್ತಾನದ ನಾಗರಿಕತ್ವ ಸ್ವೀಕರಿಸಿದ್ದಾರೆ. ೨೦೨೧ ರಲ್ಲಿ ಓರ್ವ ವ್ಯಕ್ತಿ ಬಾಂಗ್ಲಾದೇಶದ ನಾಗರಿಕತ್ವ ಸ್ವೀಕರಿಸಿದ್ದಾನೆ.