ಅಮೇರಿಕಾದಲ್ಲಿನ ಪಜ್ಯೂ ವಿದ್ಯಾಪೀಠದಲ್ಲಿ ಭಾರತೀಯ ವಂಶದ ವಿದ್ಯಾರ್ಥಿಗಳ ಹತ್ಯೆ !

ಅಮೇರಿಕಾದಲ್ಲಿನ ಭಾರತೀಯರ ಮೇಲೆ ಹೆಚ್ಚುತ್ತಿರುವ ಹಲ್ಲೆಗಳು

ವಾಶಿಂಗ್ಟನ್‌ – ಅಮೇರಿಕಾದಲ್ಲಿನ ಇಂಡಿಯಾನಾ ಭಾಗದಲ್ಲಿರುವ ಪಜ್ಯೂ ವಿದ್ಯಾಪೀಠದಲ್ಲಿನ ಕಲಿಯುತ್ತಿರುವ ಭಾರತೀಯ ವಂಶದ ವಿದ್ಯಾರ್ಥಿಯ ಅಕ್ಟೋಬರ್‌ ೪ರ ರಾತ್ರಿ ವಿದ್ಯಾಪೀಠದ ವಸತೀಗೃಹದಲ್ಲಿ ಹತ್ಯೆ ಮಾಡಲಾಗಿದೆ. ವರುಣ ಮನೀಷ ಛೆಡಾ ಎಂಬುದು ಈ ೨೦ ವರ್ಷದ ವಿದ್ಯಾರ್ಥಿಯ ಹೆಸರಾಗಿದ್ದು ಪೊಲೀಸರು ಆತನ ಕೋಣೆಯಲ್ಲಿರುವ ಕೋರಿಯನ್‌ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ. ಇನ್ನೂ ಒಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವರುಣನು ಮೂಲತಃ ಇಂಡಿಯಾನಾ ಪೊಲಿಸನಲ್ಲಿ ವಾಸಿಸುತ್ತಿದ್ದು ಪಜ್ಯೂ ವಿದ್ಯಾಪೀಠದಲ್ಲಿ ‘ಡೇಟಾ ಸಾಯನ್ಸ್‌’ನ ಅಧ್ಯಯನ ಮಾಡುತ್ತಿದ್ದನು. ವರುಣನ ಮೃತದೇಹ ದೊರೆತಿರುವ ಮಾಹಿತಿಯನ್ನು ಆತನ ಕೊರಿಯನ್‌ ಮಿತ್ರನೇ ಪೊಲೀಸರಿಗೆ ನೀಡಿದ್ದನು. ಪ್ರಾಥಮಿಕ ವೈದ್ಯಕೀಯ ವರದಿಯ ಅನುಸಾರ ವರುಣನ ಮೇಲೆ ಹರಿತವಾದ ಆಯುಧಗಳಿಂದ ಅನೇಕ ಬಾರಿ ಹಲ್ಲೆಯಾಗಿದ್ದರಿಂದ ಅವನ ಸಾವು ಸಂಭವಿಸಿದೆ. ವಿದ್ಯಾಪೀಠದ ಅಧ್ಯಕ್ಷರಾದ ಮಿಚ ಡೆನಿಯಲ್ಸರವರು ಈ ಪ್ರಕರಣದಲ್ಲಿ, ವರುಣ ಹತ್ಯೆಯು ಕಲ್ಪನೆಯ ಆಚೆಗಿದ್ದು ಅತ್ಯಂತ ದುರದೃಷ್ಟಕರವಾಗಿದೆ. ನಮ್ಮ ವಿಚಾರ ಮತ್ತು ಮನಸ್ಸು ಅವನ ಕುಟುಂಬ ಹಾಗೂ ಮಿತ್ರರೊಂದಿಗೆ ಇದೆ, ಎಂದು ಹೇಳಿದರು.