ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ ಇವರಿಗೆ ಬೆದರಿಕೆ

ಅಮೇರಿಕಾದಲ್ಲಿ ಭಾರತೀಯರ ಬಗ್ಗೆ ದ್ವೇಷದಲ್ಲಿ ಏರಿಕೆ !

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ

ವಾಷಿಂಗ್ಟನ – ಅಮೇರಿಕಾದಲ್ಲಿನ ಭಾರತೀಯರ ಬಗ್ಗೆ ದ್ವೇಷ ಹೆಚ್ಚುತ್ತಿದೆ. ಅಮೇರಿಕಾದಲ್ಲಿನ ಭಾರತೀಯ ಮೂಲದ ಸಾಮಾನ್ಯ ಪ್ರಜೆಗಳಿಗೂ ಬೆದರಿಕೆ ನೀಡಲಾಗುತ್ತಿರುವಾಗ ಈಗ ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜೈಪಾಲ (ವಯಸ್ಸು ೫೫ ವರ್ಷ) ಇವರಿಗೆ ದೂರವಾಣಿಯ ಮೂಲಕ ಬೆದರಿಕೆ ನೀಡಲಾಗಿದೆ. ಒಬ್ಬ ವ್ಯಕ್ತಿ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಪದಗಳನ್ನು ಉಪಯೋಗಿಸಿ ಭಾರತಕ್ಕೆ ಹಿಂತಿರುಗುವಂತೆ ಎಚ್ಚರಿಕೆ ನೀಡಲಾಯಿತು.

೧. ಚೆನ್ನೈನಲ್ಲಿ ಹುಟ್ಟಿದ ಸಂಸದೆ ಜಯಪಾಲ ಇವರು ಇತ್ತಿಚೆಗೆ ಅವರಿಗೆ ಕಳುಹಿಸಲಾದ ಬೆದರಿಕೆಯ ಆಡಿಯೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸಿದ್ದಾರೆ. ಈ ಬೆದರಿಕೆಯ ಸಂದೇಶದಲ್ಲಿ ಒಬ್ಬ ವ್ಯಕ್ತಿ ಅವರಿಗೆ ಗಂಭೀರ ಪರಿಣಾಮ ಅನುಭವಿಸಿರಿ ಮತ್ತು ಭಾರತಕ್ಕೆ ಹಿಂತಿರುಗಿ ಹೋಗುವಂತೆ ಬೆದರಿಕೆ ನೀಡುವುದು ಕೇಳುತ್ತಿದೆ.

೨. ‘ಹಿಂಸಾಚಾರ ಇದು ಸಾಮಾನ್ಯ ವಿಷಯ’, ಇದು ನಾವು ಸ್ವೀಕರಿಸಲು ಸಾಧ್ಯವಿಲ್ಲ. ಈ ಹಿಂಸಾಚಾರದ ಮೂಲದಲ್ಲಿ ಇರುವುದು ವರ್ಣ ದ್ವೇಷ ಮತ್ತು ಲಿಂಗಭೇದ ಇದನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ’, ಎಂದು ಪ್ರಮೀಳಾ ಜಯಾಪಾಲ್ ಇವರು ಟ್ವೀಟ ಮೂಲಕ ಹೇಳಿದ್ದಾರೆ.

೩. ಪ್ರಮೀಳಾ ಜಯಪಾಲ ಇವರು ಅಮೆರಿಕಾದ ‘ಹೌಸ್ ಆಫ್ ರಿಪ್ರೆಸೆಂಟೇಟಿವ್’ನಲ್ಲಿ ಸಿಯೇಟಲನ ಪ್ರತಿನಿಧಿ ಮಾಡುವ ಮೊದಲ ಭಾರತೀಯ ಅಮೆರಿಕನ್ ಸಂಸದರಾಗಿದ್ದಾರೆ.

ಅಮೆರಿಕಾದಲ್ಲಿನ ಭಾರತೀಯರು ವರ್ಣದ್ವೇಷಕ್ಕೆ ಗುರಿ ಆಗುತ್ತಿದ್ದರೆ.

೧. ಸೆಪ್ಟೆಂಬರ್ ೧, ೨೦೨೨ ರಂದು ಕ್ಯಾಲಿಫೋರ್ನಿಯಾದಲ್ಲಿ ಒಬ್ಬ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಟಿಕೆ ಮಾಡಿ ಆಕೆಗೆ ಅವಾಚ್ಯ ಪದಗಳನ್ನು ಉಪಯೋಗಿಸಲಾಗಿತ್ತು.

೨. ಈ ಮೊದಲು ಅಗಸ್ಟ ೨೬, ೨೦೨೨ ರಂದು ಟೆಕ್ಸಸ್ ನಲ್ಲಿ ಭಾರತೀಯ ಮೂಲದ ಅಮೆರಿಕನ್ ಮಹಿಳೆಯ ಮೇಲೆ ಅಮೆರಿಕ ಮಹಿಳೆ ದಾಳಿ ನಡೆಸಿ ಅವಾಚ್ಯ ಪದಗಳನ್ನು ಉಪಯೋಗಿಸಿದ್ದರು.

ಸಂಪಾದಕೀಯ ನಿಲುವು

‘ಭಾರತದಲ್ಲಿ ಮಾನವಾಧಿಕಾರ ಕಾಲಡಿಯಲ್ಲಿ ತುಳಿಯಲಾಗುತ್ತದೆ’, ಎಂದು ಹೇಳುವ ಅಮೆರಿಕಾಗೆ ಈ ವಿಷಯವಾಗಿ ಏನು ಹೇಳುವುದಿದೆ ? ತನ್ನ ಸ್ವಂತ ದೇಶದಲ್ಲಿ ವರ್ಣ ದ್ವೇಷದ ದಾಳಿ ತಡೆಯುವುದಕ್ಕಾಗಿ ಏನನ್ನು ಮಾಡದೇ ಇರುವ ಅಮೆರಿಕಾ ಭಾರತದಲ್ಲಿನ ಮಾನವಾಧಿಕಾರದ ಬಗ್ಗೆ ಮಾತನಾಡುಲು ಯಾವ ಅಧಿಕಾರ ಇದೆ ?