ಪಾಕಿಸ್ತಾನ ಸೈನ್ಯವು ಜವಾಹಿರಿಯನ್ನು ಕೊಲ್ಲಲು ತಮ್ಮ ಆಕಾಶ ಮಾರ್ಗವನ್ನು ಉಪಯೋಗಿಸಲು ಕೊಟ್ಟರು ! – ತಾಲಿಬಾನ್ ಆರೋಪ

ಆರೋಪವನ್ನು ತಳ್ಳಿಹಾಕಿದ ಪಾಕಿಸ್ತಾನ

ಕಾಬೂಲ (ಅಫಘಾನಿಸ್ತಾನ) – ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್-ಕಾಯ್ದಾ ಪ್ರಮುಖ ಅಯಮಾನ ಅಲ್- ಜವಾಹಿರಿಯನ್ನು ಕಾಬೂಲನಲ್ಲಿ ಕೊಲ್ಲಲು ಅಮೇರಿಕಾವು ಪಾಕಿಸ್ತಾನದ ಆಕಾಶ ಮಾರ್ಗವನ್ನು ಉಪಯೋಗಿಸಿತು. ಇದಕ್ಕಾಗಿ ಪಾಕಿಸ್ತಾನ ಸೈನ್ಯವು ಅನುಮತಿ ನೀಡಿತ್ತು ಎಂದು ಅಫಘಾನಿಸ್ತಾನದ ತಾಲಿಬಾನ ಸರಕಾರ ಹೇಳಿಕೆ ನೀಡಿದೆ. ಆದರೆ ಪಾಕಿಸ್ತಾನವು ಈ ಹೇಳಿಕೆಯನ್ನು ತಳ್ಳಿಹಾಕಿದೆ. ಅಮೇರಿಕಾವು ಡ್ರೋನ್ ಮೂಲಕ ಕ್ಷಿಪಣಿಯ ಮೂಲಕ ಗುರಿ ಸಾಧಿಸಿ ಜವಾಹಿರಿಯನ್ನು ಹತ್ಯೆ ಮಾಡಿತ್ತು ಎಂದು ಹೇಳಿದೆ.

ಅಫಘಾನಿಸ್ತಾನದ ರಕ್ಷಣಾ ಸಚಿವ ಮುಲ್ಲಾ ಯಾಕೂಬ ಮಾತನಾಡುತ್ತಾ, ‘ಅಫಘಾನಿಸ್ತಾನದಲ್ಲಿ ಅನಧಿಕೃತವಾಗಿ ನಡೆಸಿದ ಡ್ರೋನ ಉಪಯೋಗವು ದೇಶದ ವಾಯು ಮಾರ್ಗದ ಗಡಿಯನ್ನು ಉಲ್ಲಂಘಿಸಿದೆ’ ಎಂದು ಹೇಳಿದಾಗ, ಅದಕ್ಕೆ ‘ಈ ಡ್ರೋನ ಎಲ್ಲಿಂದ ಬರುತ್ತಿದೆ ?’, ಎಂದು ಕೇಳಿದಾಗ ಅವರು ‘ಪಾಕಿಸ್ತಾನದಿಂದ ಅಫಘಾನಿಸ್ತಾನದಲ್ಲಿ ಬರುತ್ತಿದೆ’ ಎಂದು ಹೇಳಿದರು.