ಜಗತ್ತಿನಾದ್ಯಂತ ಇರುವ ಹಿಂದೂಗಳ ಮೇಲಿನ ಆಕ್ರಮಣಗಳಲ್ಲಿ ೧ ಸಾವಿರ ಪಟ್ಟು ಹೆಚ್ಚಳ ! – ಅಮೇರಿಕದಲ್ಲಿನ ಸಂಸ್ಥೆಯ ಮಾಹಿತಿ

ಅಮೇರಿಕಾದಲ್ಲಿ ೨೦೨೦ರಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ. ೫೦೦ರಷ್ಟು ಹೆಚ್ಚಳ !

ನ್ಯೂಯಾರ್ಕ (ಅಮೇರಿಕಾ) – ಸಂಪೂರ್ಣ ಜಗತ್ತಿನಾದ್ಯಂತ ಹಿಂದೂಗಳ ಮೇಲಿನ ಆಕ್ರಮಣಗಳಲ್ಲಿ ಹೆಚ್ಚಳವಾಗಿದೆ. ಈ ಪ್ರಮಾಣವು ೧೦೦೦ ಪಟ್ಟು ಹೆಚ್ಚಾಗಿರುವ ಬಗ್ಗೆ ಅಮೇರಿಕಾದಲ್ಲಿನ ಸಂಸ್ಥೆಯಾದ ‘ನೆಟವರ್ಕ ಕೆಂಟೆಜಿಯನ ರಿಸರ್ಚ ಇನ್ಸ್ಟಿಟ್ಯೂಟ’ನ ವರದಿಯಿಂದ ಬಹಿರಂಗವಾಗಿದೆ.

ಈ ಸಂಸ್ಥೆಯ ಸಹಸಂಸ್ಥಾಪಕರಾದ ಜೊಯಲ ಫಿಂಕೆಲಸ್ಟಾಯಿನರವರು ಮಾತನಾಡುತ್ತ, ‘ಹಿಂದೂಗಳ ವಿರುದ್ಧ ಪೋಸ್ಟಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅಮೇರಿಕಾದಲ್ಲಿ ಕಳೆದ ಕೆಲವು ತಿಂಗಳಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲಿನ ಆಕ್ರಮಣಗಳಲ್ಲಿ ಹೆಚ್ಚಳವಾಗಿದೆ. ಕೆನಡಾದಲ್ಲಿಯೂ ಇಂತಹ ಘಟನೆಗಳು ಹೆಚ್ಚಾಗಿವೆ. ಇಂಗ್ಲೆಂಡಿನಲ್ಲಿಯೂ ಉದ್ದೇಶಪೂರ್ವಕವಾಗಿ ಆಕ್ರಮಣಗಳನ್ನು ಮಾಡಲಾಗುತ್ತಿದೆ. ಅಮೇರಿಕಾದಲ್ಲಿ ೨೦೨೦ರಲ್ಲಿ ಭಾರತೀಯ ವಂಶದ ಅಮೇರಿಕಾದ ನಾಗರೀಕರ ಮೇಲಿನ ಆಕ್ರಮಣಗಳಲ್ಲಿ ಶೇ. ೫೦೦ರಷ್ಟು ಹೆಚ್ಚಳವಾಗಿದೆ’, ಎಂದು ಹೇಳಿದರು.


ಬ್ರಿಟನನಲ್ಲಿ ಪಾಕಿಸ್ತಾನಿ ಜಿಹಾದಿ ಗುಂಪುಗಳಿಂದ ನಡೆಯುತ್ತಿರುವ ಹಿಂದೂಗಳ ದೇವಸ್ಥಾನಗಳ ಮೇಲಾಗುತ್ತಿರುವ ಆಕ್ರಮಣಗಳು !

ಬ್ರಿಟೀಷ ತನಿಖಾ ಸಂಸ್ಥೆಯು ಹೇಳುವಂತೆ ೨೦೨೦ರಲ್ಲಿ ಬ್ರಿಟನ್ನಿನ ಲಿಸೆಸ್ಟರ ಹಾಗೂ ಬರ್ಮಿಂಗಹ್ಯಾಮಿನ ಸ್ಮಾಡೆಕನಲ್ಲಿ ನಡೆದ ಹಿಂದೂ ದೇವಸ್ಥಾನಗಳ ಮೇಲಾದ ಆಕ್ರಮಣದಲ್ಲಿ ಪಾಕಿಸ್ತಾನಿ ಜಿಹಾದಿ ಗುಂಪಿನ ಕೈವಾಡವಿರುವುದು ಬಹಿರಂಗವಾಗಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳು ಬ್ರಿಟನ್ನಿನಲ್ಲಿ ಜಿಹಾದನ್ನು ಹರಡಲು ಪ್ರಯತ್ನಿಸುತ್ತಿವೆ. ಭಯೋತ್ಪಾದಕರನ್ನು ಬ್ರಿಟನ್ನಿನ ಆಶ್ರಯಗೃಹಗಳಲ್ಲಿ ಇಡಲಾಗುತ್ತದೆ. ಈ ಆಶ್ರಯಗೃಹಗಳನ್ನು ಮುಸಲ್ಮಾನರ ಮದರಸಾಗಳು ನಡೆಸುತ್ತಿವೆ. ಎಡಿನಬರಾದಲ್ಲಿ ಕಳೆದ ಕೆಲವು ದಿನಗಳಲ್ಲಿ ಇಂತಹ ಕಡೆಗಳಲ್ಲಿ ನಡೆಸಲಾದ ದಾಳಿಯಲ್ಲಿ ಕೆಲವು ಸಂದೇಹಾಸ್ಪದರನ್ನು ಬಂಧಿಸಲಾಗಿದೆ.

ಬ್ರಿಟನ್ನಿನಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಜೈಲಿನಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದಾರೆ !

ಬ್ರಿಟನ್ನಿನ ಸಂಸತ್ತಿನಲ್ಲಿ ಮಂಡಿಸಲಾದ ಒಂದು ವರದಿಯ ಪ್ರಕರಾರ ಬ್ರಿಟನ್ನಿನಲ್ಲಿರುವ ಸುಮಾರು ೭ ಕೋಟಿಗಿಂತಲೂ ಹೆಚ್ಚು ಇರುವ ಜನಸಂಖ್ಯೆಯಲ್ಲಿ ಶೇ. ೪ರಷ್ಟು ಮುಸಲ್ಮಾನರಿದ್ದಾರೆ. ಮುಸಲ್ಮಾನರಲ್ಲಿ ಅಪರಾಧದ ಪ್ರಮಾಣ ಹೆಚ್ಚಿದೆ. ಬ್ರಿಟನ್ನಿನನ ಜೈಲಿನಲ್ಲಿರುವ ಕೈದಿಗಳ ಪೈಕಿ ಶೇ. ೧೮ರಷ್ಟು ಜನರು ಮುಸಲ್ಮಾನರಾಗಿದ್ದಾರೆ. ಅದರಂತೆಯೇ ಇಂಗ್ಲೆಂಡ್ ಹಾಗೂ ವೆಲ್ಸ್‌ನಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ. ೨ರಷ್ಟು ಹಿಂದೂಗಳಿದ್ದಾರೆ; ಆದರೆ ಯಾವುದೇ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಅಪರಾಧಕ್ಕಾಗಿ ಬಂಧನಕ್ಕೊಳಗಾಗಿಲ್ಲ.

ಬ್ರಿಟನ್ನಿನಲ್ಲಿ ೧೪ ಲಕ್ಷ ಹಿಂದೂಗಳಿದ್ದರೆ, ೧೧ ಲಕ್ಷ ಪಾಕಿಸ್ತಾನಿ ಮುಸಲ್ಮಾನರಿದ್ದಾರೆ !

ಬ್ರಿಟನ್ನಿನಲ್ಲಿ ಸುಮಾರು ೧೪ ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳಿದ್ದರೆ, ಸುಮಾರು ೧೧ ಲಕ್ಷ ಪಾಕಿಸ್ತಾನಿ ಮುಸಲ್ಮಾನರಿದ್ದಾರೆ. ಬ್ರಿಟನ್ನಿನಲ್ಲಿ ಮುಸಲ್ಮಾನರ ಜನಸಂಖ್ಯೆಯು ಒಟ್ಟೂ ೨೮ ಲಕ್ಷದಷ್ಟಿದೆ. ಅದರಲ್ಲಿ ಅಫಘಾನಿಸ್ತಾನ, ಇರಾಕ, ಸಿರಿಯಾ, ಮೊರೊಕ್ಕೊ ಹಾಗೂ ಅಲ್ಜೇರಿಯಾ ದೇಶಗಳ ಮುಸಲ್ಮಾನರಿದ್ದಾರೆ. ಪಾಕಿಸ್ತಾನದ ಜಿಹಾದಿ ಗುಂಪು ಇವರಲ್ಲಿನ ಕೆಲವು ಮುಸಲ್ಮಾನರ ಸಹಾಯದಿಂದ ದೇವಸ್ಥಾನಗಳ ಮೇಲೆ ಆಕ್ರಮಣ ಮಾಡುತ್ತವೆ.

ಸಂಪಾದಕೀಯ ನಿಲುವು

  • ಅಮೇರಿಕಾದಲ್ಲಿನ ಸಂಸ್ಥೆಗೆ ಈ ಮಾಹಿತಿ ಸಿಗುತ್ತದೆ, ಆದರೆ ಇದು ಭಾರತದಲ್ಲಿನ ಅಥವಾ ಜಗತ್ತಿನಾದ್ಯಂತ ಇರುವ ಒಂದೇ ಒಂದು ಹಿಂದೂ ಸಂಸ್ಥೆಗೆ ಅಥವಾ ಭಾರತ ಸರಕಾರಕ್ಕೆ ದೊರೆಯುವುದಿಲ್ಲ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! ‘ಈ ಘಟನೆಗಳನ್ನು ತಡೆಯಲು ಹಿಂದೂಗಳ ಸಂಘಟನೆಗಳು ಹಾಗೂ ಭಾರತ ಸರಕಾರ ಯಾವ ಕ್ರಮಕೈಗೊಳ್ಳುವವು ?’ ಎಂಬುದನ್ನು ಅವರು ಹೇಳಬೇಕು !
  • ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತವೆ, ಹೀಗಿರುವಾಗ ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ ?