ದೇಶದ ನ್ಯಾಯಾಲಯದಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಮಹಿಳೆಯ ಮೂರ್ತಿ ತೆರವುಗೊಳಿಸಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಿ !

  • ಉತ್ತರಪ್ರದೇಶದ ಜಂಟಿ ವಕೀಲರ ಒಕ್ಕೂಟದಿಂದ ಪ್ರಧಾನಿಯವರಲ್ಲಿ ಬೇಡಿಕೆ

  • ಕೈಯಲ್ಲಿ ತಕ್ಕಡಿ ಹಿಡಿದಿರುವ ಮಹಿಳೆಯ ಮೂರ್ತಿ ಇದು ವಿದೇಶಿ ಸಂಕಲ್ಪನೆ !

ಸೋನಭದ್ರ (ಉತ್ತರಪ್ರದೇಶ) – ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಹಾಗೂ ಕಣ್ಣಿನ ಮೇಲೆ ಕಪ್ಪುಪಟ್ಟಿ ಕಟ್ಟಿರುವ ಮಹಿಳೆಯ ಮೂರ್ತಿ ಇರುತ್ತದೆ. ಈ ಮೂರ್ತಿ ಗ್ರೀಕ್ ಸಮಾಜ ಸೇವಕಿ ಡಿಕಿ ಇವರದ್ದಾಗಿದೆ. ಈ ಮೂರ್ತಿ ತೆರವುಗೊಳಿಸಿ ಆ ಸ್ಥಾನದಲ್ಲಿ ಹಿಂದೂಗಳ ದೇವತೆ ಭಗವಾನ್ ಚಿತ್ರಗುಪ್ತ ಇವರ ಮೂರ್ತಿ ಸ್ಥಾಪಿಸಬೇಕು, ಎಂಬ ಬೇಡಿಕೆಯನ್ನು ಉತ್ತರ ಪ್ರದೇಶದ ಜಂಟಿ ವಕೀಲರ ಒಕ್ಕೂಟ ದ ಪ್ರದೇಶಾಧ್ಯಕ್ಷ ರಾಕೇಶ ಶರಣ ಮಿಶ್ರಾ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದ ತಲಾ ಒಂದು ಪ್ರತಿಯನ್ನು ರಶ್ಟ್ರಪತಿ, ಉಪರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮುಂತಾದವರಿಗೆ ಕಳುಹಿಸಲಾಗಿದೆ.

ಈ ಪತ್ರದಲ್ಲಿ ಮಿಶ್ರಾ ಅವರು, ಡಿಕಿ ಹಾಗೂ ಭಾರತೀಯ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲ. ಈ ಮೂರ್ತಿ ಕೇವಲ ಬ್ರಿಟಿಷರ ಗುಲಾಮಗಿರಿಯ ಪ್ರತೀಕವಾಗಿ ಅದು ನೋಡಿದರೆ ಸತತ ಅದರ ಅರಿವಾಗುತ್ತದೆ.

ಭಾರತೀಯ ಹಿಂದೂ ಧರ್ಮದ ಪ್ರಕಾರ ಮತ್ತು ಶಾಸ್ತ್ರಗಳಲ್ಲಿ ಬರೆದಿರುವ ಪ್ರಕಾರ ಭಗವಾನ್ ಚಿತ್ರಗುಪ್ತ ಪರಮ ನ್ಯಾಯಾಧೀಶರಾಗಿದ್ದಾರೆ. ಆದ್ದರಿಂದ ಡಿಕಿಯ ಮೂರ್ತಿ ತೆರವುಗೊಳಿಸಿ ಅದರ ಜಾಗದಲ್ಲಿ ಚಿತ್ರಗುಪ್ತರ ಮೂರ್ತಿ ಸ್ಥಾಪಿಸಬೇಕು.

ಸಂಪಾದಕೀಯ ನಿಲುವು

ಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರ ತಾನಾಗಿ ಈ ರೀತಿ ವಿಚಾರ ಮಾಡಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಬೇಕು !