ಆಯುಷ್ಯದ ಕೊನೆಯ ವರ್ಷಗಳನ್ನು ಆರೋಗ್ಯ ಕ್ಷೇತ್ರಕ್ಕಾಗಿ ಸಮರ್ಪಿಸುವೆನು! – ಉದ್ಯಮಿ ರತನ ಟಾಟಾ

ದಿಬುಗಡ (ಅಸ್ಸಾಂ) – ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಅರ್ಬುದ ರೋಗ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನೆರವೇರಿತು. ಈ ಕೇಂದ್ರವು ಆಸ್ಸಾಂ ಕ್ಯಾನ್ಸರ ಕೇರ ಫೌಂಡೇಶನ, ಟಾಟಾ ಟ್ರಸ್ಟ ಮತ್ತು ಆಸ್ಸಾಂ ಸರಕಾರದ ಜಂಟಿ ಸಹಯೋಗದಿಂದ ನಿರ್ಮಿಸಲ್ಪಟ್ಟಿದೆ. ಕಾರ್ಯಕ್ರಮದಲ್ಲಿ ಉದ್ಯಮಿ ರತನ ಟಾಟಾ ಅವರು ತಮ್ಮ ಜೀವನದ ಕೊನೆಯ ವರ್ಷಗಳನ್ನು ಅರೋಗ್ಯ ಕ್ಷೇತ್ರಕ್ಕೆ ಮೀಸಲಿಡುವುದಾಗಿ ಘೋಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರ ದೇಹ ದಣಿದಂತಿತ್ತು. ಮಾತನಾಡುವಾಗ ಅವರ ಧ್ವನಿ ನಡುಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೂ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

(ಸೌಜನ್ಯ : TV9 Bharatvarsh)