ಉತ್ತರಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲಿರುವ ೧೧ ಸಾವಿರ ಧ್ವನಿವರ್ಧಕಗಳು ತೆರವು !

೩೫ ಸಾವಿರ ದೇವಸ್ಥಾನಗಳು ಮತ್ತು ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಇರುವ ೧೧ ಸಾವಿರ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಯಿತು. ಹಾಗೂ ೩೫ ಸಾವಿರ ಧಾರ್ಮಿಕ ಸ್ಥಳಗಳ ಮೇಲೆ ಧ್ವನಿವರ್ಧಕದ ಧ್ವನಿಯ ಮಾಪನ ನಿಶ್ಚಯಿಸಿಕೊಡಲಾಗಿದೆ. ಕಳೆದ ೪ ದಿನಗಳಿಂದ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜ್ಯ ಸರಕಾರ ಏಪ್ರಿಲ್ ೩೦ ವರೆಗೆ ಧ್ವನಿವರ್ಧಕದ ಧ್ವನಿಯ ಸಂದರ್ಭದಲ್ಲಿ ತತ್ಕಾಲ ಕ್ರಮಕೈಗೊಳ್ಳುವ ಸಂದರ್ಭದಲ್ಲಿ ಆದೇಶ ಜಿಲ್ಲಾಮಟ್ಟದ ಆಡಳಿತಕ್ಕೆ ನೀಡಿದ ನಂತರ ರಾಜ್ಯದಲ್ಲಿ ಧ್ವನಿವರ್ಧಕಗಳ ವಿರುದ್ಧ ಅಭಿಯಾನ ನಡೆಸಲಾಯಿತು.

೧. ಕಳೆದ ವಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಈ ವಿಷಯವಾಗಿ ವರಿಷ್ಠಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವರ ಧಾರ್ಮಿಕ ನಂಬಿಕೆ ಪಾಲಿಸುವ ಅಧಿಕಾರವಿದೆ, ಆದರೆ ಅದರಿಂದ ಬೇರೆಯವರಿಗೂ ತೊಂದರೆ ಆಗದಂತೆ ಕಾಳಜಿವಹಿಸಬೇಕು. ಧ್ವನಿವರ್ಧಕಗಳು ಉಪಯೋಗಿಸುವಲ್ಲಿ ತೊಂದರೆ ಇಲ್ಲ, ಆದರೆ ಧ್ವನಿವರ್ಧಕದ ಧ್ವನಿ ಆ ಧಾರ್ಮಿಕ ಸ್ಥಳದ ಪರಿಸರದ ಮಟ್ಟಿಗೆ ಸೀಮಿತವಾಗಿರಬೇಕು. ಇದನ್ನು ಗಮನಿಸುವ ಆವಶ್ಯಕತೆ ಇದೆ. ಇದರಿಂದ ಬೇರೆ ಜನರಿಗೆ ಯಾವುದೇ ತೊಂದರೆ ಆಗಬಾರದು, ಎಂದು ಹೇಳಿದ್ದರು. ಅದರ ನಂತರ ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಹಿಂದೂ ಮತ್ತು ಮುಸಲ್ಮಾನ ಧಾರ್ಮಿಕ ನಾಯಕರು ಚರ್ಚೆ ನಡೆಸಿದ್ದರು. ಈ ಚರ್ಚೆಯ ಸಮಯದಲ್ಲಿ ಅವರು ಧಾರ್ಮಿಕ ಸ್ಥಳಗಳ ಮೇಲಿನ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಲು ಒಪ್ಪಿದ್ದರು.

೨. ಲಕ್ಷ್ಮಣಪುರಿಯಲ್ಲಿರುವ ಈದ್ಗಾಹದ ಇಮಾಮ್ ಆಗಿರುವ ಮೌಲಾನಾ ಖಾಲಿದ ರಾಶಿದ ಫಿರಂಗಿ ಮಹಾಲಿ ಇವರು ‘ಎಲ್ಲಾ ಸುನ್ನಿ ಮಸೀದಿಗಳ ಧ್ವನಿವರ್ಧಕಗಳ ಧ್ವನಿಯನ್ನು ಕಡಿಮೆ ಮಾಡುವ ಆದೇಶ ನೀಡಿ ಧ್ವನಿ ಮಸೀದಿಯ ಹೊರಗೆ ಹೋಗದೇ ಇರುವ ಹಾಗೆ ಕಾಳಜಿವಹಿಸಲು ಹೇಳಲಾಗಿದೆ’ ಎಂಬ ಮಾಹಿತಿ ನೀಡಿದರು.

ಸಂಪಾದಕರ ನಿಲುವು

ಭಾಜಪ ಅಧಿಕಾರದಲ್ಲಿರುವ ಉತ್ತರಪ್ರದೇಶದಲ್ಲಿ ಇದು ಸಾಧ್ಯವಾಗುತ್ತದೆ ಎಂದರೆ ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಾಗುವುದಿಲ್ಲ ?

ಶಬ್ದ ಮಾಲಿನ್ಯದ ಸಮಸ್ಯೆ ದೇಶದ ಪ್ರತಿಯೊಂದು ನಾಗರಿಕರಿಗೆ ಆಗುತ್ತಿರುವಾಗ ಅಧಿಕಾರದಲ್ಲಿರುವವರು ಯಾವುದು ಸಾಧ್ಯವಿದೆ, ಅದನ್ನು ಮಾಡುವ ಧೈರ್ಯ ಏಕೆ ತೋರುವುದಿಲ್ಲ ? ಜನರು ಇನ್ನ ಮುಂದೆ ಪ್ರತಿಯೊಂದು ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಈ ವಿಷಯವಾಗಿ ಪ್ರಶ್ನೆ ಕೇಳಬೇಕು ?