ನ್ಯೂಯಾರ್ಕ್‌ನ ಹಿಂದೂ ದೇವಾಲಯದ ಆವರಣದಲ್ಲಿ ಮ. ಗಾಂಧಿ ಪುತ್ಥಳಿ ಧ್ವಂಸ
ಆಗಸ್ಟ್ ೧೮ ರ ಮಧ್ಯರಾತ್ರಿ, ದಕ್ಷಿಣ ರಿಚ್ಮಂಡ್ ಹಿಲ್‌ನಲ್ಲಿರುವ ಕ್ವೀನ್ಸ್ ಕೌಂಟಿ ಎಂಬಲ್ಲಿನ ಶ್ರೀ ತುಳಸಿ ದೇವಸ್ಥಾನದ ಪ್ರದೇಶದಲ್ಲಿರುವ ಮ.ಗಾಂಧಿಯವರ ಪುತ್ಥಳಿಯನ್ನು ಅಜ್ಞಾತರು ಧ್ವಂಸ ಮಾಡಿದ್ದಾರೆ. ಅದಾದ ನಂತರ ಅಲ್ಲಿನ ರಸ್ತೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ‘ಗ್ರಾಂಡಪಿ’ ಮತ್ತು ‘ಡಾಗ್’ ಎಂದು ಬರೆದು ಹಿಂದೂಗಳ ವಿರುದ್ಧ ದ್ವೇಷ ಸಾಧಿಸಿದರು.