ಅಪರಾಧ ದಾಖಲಿಸಿದ ಪೊಲೀಸರು
ಕೇದಾರನಾಥ (ಉತ್ತರಾಖಂಡ) – ಇಲ್ಲಿನ ಕೇದಾರನಾಥ ಧಾಮದಲ್ಲಿರುವ ಭುಕುಂಟ ಭೈರವನಾಥ ದೇವಸ್ಥಾನದೊಳಗೆ ಬೂಟು ಧರಿಸಿರುವ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆಗಿದೆ. ಅದರಲ್ಲಿ ಅವನು ಪಾದರಕ್ಷೆಗಳನ್ನು ಧರಿಸಿ ವಿಗ್ರಹವನ್ನು ಸ್ಪರ್ಶಿಸುವುದು ಮತ್ತು ಕಾಣಿಕೆ ಪೆಟ್ಟಿಗೆಯನ್ನು ಹಾಳು ಮಾಡುತ್ತಿರುವುದು ಕಾಣುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯನ್ನು ಹಾಗೂ ಗುತ್ತಿಗೆದಾರರ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರುದ್ರಪ್ರಯಾಗದ ಪೊಲೀಸ್ ಉಪಾಧ್ಯಕ್ಷ ಪ್ರಬೋಧ ಕುಮಾರ್ ಗಿಲ್ಡಿಯಾಲ್ ಮಾತನಾಡಿ, ಈ ಪ್ರಕರಣದಲ್ಲಿ ಪೊಲೀಸರು ಸಂಬಂಧಪಟ್ಟ ವ್ಯಕ್ತಿಯನ್ನು ಕಾರ್ಮಿಕ ಎಂದು ಗುರುತಿಸಿದ್ದಾರೆ. ಅವನು ಧಾಮ್‌ನಲ್ಲಿ ನಡೆಯುತ್ತಿರುವ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕ’, ಎಂದು ಹೇಳಿದ್ದಾರೆ.