ನಿರಂಜನಿ ಆಖಾಡದ ಮಹಾಮಂಡಲೇಶ್ವರ ಡಾ. ಸುಮನ ಆನಂದ ಗಿರಿ ಇವರಿಗೆ ಕೊಲೆ ಬೆದರಿಕೆ !

ಉಜ್ಜೈನಿ (ಮಧ್ಯಪ್ರದೇಶ) – ಇಲ್ಲಿನ ನಿರಂಜನಿ ಆಖಾಡದ ಮಹಾಮಂಡಲೇಶ್ವರ ಡಾ. ಸುಮನ ಆನಂದ ಗಿರಿ ಅವರಿಗೆ ಬೆದರಿಕೆ ಪತ್ರ ಸಿಕ್ಕಿದೆ. ‘ನೀವು ಪದೇ ಪದೇ ಪೈಗಂಬರರನ್ನು ಅವಮಾನಿಸುತ್ತಿದ್ದೀರಿ. ತಲೆ ಮತ್ತು ಶರೀರವನ್ನು ಬೇರ್ಪಡಿಸುವುದು ಇದೇ ಏಕೈಕ ಶಿಕ್ಷೆ’, ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಬೆದರಿಕೆಯ ಪತ್ರ ಸಗೀರ್ ಅಹ್ಮದ್ ಹೆಸರಿನ ವ್ಯಕ್ತಿಯು ನವಾಬ್‌ನಗರ, ಕರೇಲಿ, ಪ್ರಯಾಗ್‌ರಾಜ್ ಈ ವಿಳಾಸದಿಂದ ಕಳುಹಿಸಿದ್ದಾನೆ. ಈ ಪತ್ರವನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ.

ಮಹಾಮಂಡಲೇಶ್ವರ ಇವರಿಗೆ ಜೀವ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. 2023ರ ಹಿಂದೆ ಆಖಾಡ ಪರಿಷತ್ತಿನ ಸಭೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಉರ್ದು ಭಾಷೆಯಲ್ಲಿ ಪತ್ರ ಬರೆದು ಬೆದರಿಕೆ ಹಾಕಿದ್ದನು. ಮಹಾಮಂಡಲೇಶ್ವರರು ಮುಸ್ಲಿಂ ಹೆಣ್ಣು ಮಕ್ಕಳನ್ನು ಸನಾತನ ಧರ್ಮಕ್ಕೆ ಕರೆತಂದು ಆಶ್ರಮದಲ್ಲಿಯೇ ಸನಾತನ ವಿಧಿವಿಧಾನಗಳ ಪ್ರಕಾರ ಮದುವೆ ಮಾಡಿಸಿದ್ದರು. ‘ನಾನು ಸನಾತನದ ಕೆಲಸವನ್ನು ಮಾಡುತ್ತಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ’, ಎಂದು ಮಹಾಮಂಡಲೇಶ್ವರರು ಹೇಳಿದ್ದಾರೆ. ಈ ಪತ್ರದಲ್ಲಿ, ‘ನಾವು ನಮ್ಮ ಧರ್ಮ ಮತ್ತು ಶ್ರದ್ಧೆಯ ರಕ್ಷಣೆಗಳನ್ನು ಮಾಡಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ. ಒಂದು ದಿನ ರಾಮಮಂದಿರದಲ್ಲಿ ಅಜಾನ್ ಕೂಗಲಾಗುವುದು,’ ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಹಿಂದೂ ಸಂತರು ಮತ್ತು ಮಹಂತರನ್ನು ಕೊಂದು ಹಿಂದೂಗಳನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ. ಇದನ್ನು ತಡೆಯಲು ಪ್ರಭಾವಿ ಹಿಂದೂ ಸಂಘಟನೆ ಅಗತ್ಯ !