ಪಾಕಿಸ್ತಾನಿ ಭಯೋತ್ಪಾದಕರ ಮೇಲಿನ ನಿರ್ಬಂಧದ ಬಗ್ಗೆ ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ಪ್ರಸ್ತಾಪನೆಗೆ ಚೀನಾ ವಿರೋಧ

ನ್ಯೂಯಾರ್ಕ(ಅಮೇರಿಕಾ) – ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೇರಿಕಾಗಳು ಸೇರಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ ಅಜಹರ ಇವರ ಕಿರಿಯ ಸಹೋದರ ಅಬ್ದುಲ ರೌಫ ಅಜಹರ ಮೇಲೆ ಜಾಗತಿಕ ಸ್ತರದಲ್ಲಿ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದವು. ಈ ಪ್ರಸ್ತಾವನೆಗೆ `ನಿರ್ಬಂಧ ಸಮಿತಿ’ಯ 15 ಸದಸ್ಯರ ಸಹಮತವಿದ್ದರೆ, ಅದನ್ನು ಸಮ್ಮತಿಗೊಳಿಸಲಾಗುತ್ತಿತ್ತು; ಆದರೆ ಅದಕ್ಕೆ ಚೀನಾ ವಿರೋಧಿಸಿತು, ಅಬ್ದುಲ ರೌಫ ಅಜಹರ ಕಂದಹಾರ ವಿಮಾನ ಅಪಹರಣದ ಒಬ್ಬ ಆರೋಪಿಯಾಗಿದ್ದಾನೆ.

1. ಚೀನಾದ ವಕ್ತಾರ ಹೇಳಿರುವುದೇನೆಂದರೆ, ನಮಗೆ ಈ ಪ್ರಸ್ತಾವನೆಯ ಮೇಲೆ ವಿಚಾರ ಮತ್ತು ಅಧ್ಯಯನ ಮಾಡಲು ಮತ್ತಷ್ಟು ಕಾಲಾವಕಾಶ ಬೇಕಾಗಿದೆ. ಸಮಿತಿಯಲ್ಲಿ ಇಂತಹ ಪ್ರಸ್ತಾಪನೆಯನ್ನು ತಡೆಯುವ ನಿಯಮವಿದ್ದು ಈ ರೀತಿ ಎಷ್ಟೋ ಪ್ರಸ್ತಾಪನೆಯನ್ನು ತಡೆಯಲಾಗಿದೆ.

2. ಅಮೇರಿಕಕಾದ ವಕ್ತಾರರು ಹೇಳಿರುವುದೇನೆಂದರೆ, ಈ ವರ್ಷ ಚೀನಾ ಎರಡನೇಯ ಬಾರಿ ಪಾಕಿಸ್ತಾನಿ ಭಯೋತ್ಪಾದಕರ ಮೇಲಿನ ನಿರ್ಬಂಧವನ್ನು ವಿರೋಧಿಸಿದೆ. ಈ ಹಿಂದೆಯೂ ಲಷ್ಕರ-ಎ-ತೋಯಬಾದ ಭಯೋತ್ಪಾದಕ ಅಬ್ದುಲ ಅರ್ ರಹಮಾನ ಮಕ್ಕಿ ಇವನ ಮೇಲಿನ ನಿರ್ಬಂಧದ ಪ್ರಸ್ತಾವನೆಯನ್ನೂ ಚೀನಾವು ವಿರೋಧಿಸಿತ್ತು.

ಸಂಪಾದಕೀಯ ನಿಲುವು

ಚೀನಾ ಸ್ವತಃ ಉಘೂರ ಮುಸಲ್ಮಾನರ ಮೇಲೆ ಅತ್ಯಾಚಾರ ಮಾಡುತ್ತಿದೆ. ಹೀಗಿರುವಾಗ ಇತರ ದೇಶಗಳ ಜಿಹಾದಿ ಭಯೋತ್ಪಾದಕರನ್ನು ರಕ್ಷಿಸುತ್ತಿದೆ, ಇದು ಚೀನಾದ ದ್ವಿಮುಖ ನೀತಿಯಾಗಿದೆ.