ದೇವಾಲಯವು ಪಾಳುಬಿದ್ದಿದೆ

ಮುಜಾಫ್ಫರ್‌ನಗರ (ಉತ್ತರ ಪ್ರದೇಶ) – ಇಲ್ಲಿನ ಮುಸಲ್ಮಾನ ಪ್ರಾಬಲ್ಯವಿರುವ ಪ್ರದೇಶದಲ್ಲಿ ಶಿವನ ದೇವಾಲಯವೊಂದು ಪತ್ತೆಯಾಗಿದೆ. ಈ ಶಿವ ದೇವಾಲಯವನ್ನು 1970 ರಲ್ಲಿ ನಿರ್ಮಿಸಲಾಗಿತ್ತು; ಆದರೆ ಈ ಪ್ರದೇಶದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾದಂತೆ ಹಿಂದೂಗಳು ಓಡಿಹೋಗಬೇಕಾಯಿತು ಮತ್ತು ದೇವಾಲಯವನ್ನು ಸಂಪೂರ್ಣವಾಗಿ ನಾಶಮಾಡಲಾಯಿತು. ಇದೀಗ ಮತ್ತೆ ಆಡಳಿತವು ಈ ಶಿವನ ದೇವಸ್ಥಾನದತ್ತ ಗಮನ ಹರಿಸಿದೆ.
ಮುಜಾಫ್ಫರ್‌ನಗರ ಜಿಲ್ಲೆಯಲ್ಲಿನ ನಗರ ಕೊತ್ವಾಲಿ ಪ್ರದೇಶದ ಮೋಹನ್ ಲಾಲ್ ಲಡ್ಡಾವಾಲಾ ಪ್ರದೇಶದಲ್ಲಿ 54 ವರ್ಷಗಳ ಹಿಂದೆ ಶಿವನ ದೇವಾಲಯವನ್ನು ಸ್ಥಾಪಿಸಲಾಗಿತ್ತು. ಆ ಸಮಯದಲ್ಲಿ ಈ ಪ್ರದೇಶವು ಹಿಂದೂ ಪ್ರಾಬಲ್ಯ ಹೊಂದಿತ್ತು; ಆದರೆ ನಂತರ ಯಾವಾಗ 90 ರ ದಶಕದಲ್ಲಿ ಶ್ರೀರಾಮ ಜನ್ಮಭೂಮಿ ಚಳವಳಿ ತೀವ್ರಗೊಂಡಿತೋ ಆಗ ಇಲ್ಲಿನ ಪರಿಸ್ಥಿತಿ ಬದಲಾಯಿತು. ಗಲಭೆಗಳು ಮತ್ತು ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯಿಂದಾಗಿ ಹಿಂದೂಗಳು ಈ ಪ್ರದೇಶವನ್ನು ತೊರೆದರು. ಆ ಸಮಯದಲ್ಲಿ, ಈ ದೇವಾಲಯದಿಂದ ಶಿವನ ವಿಗ್ರಹ ಮತ್ತು ಇತರ ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕಲಾಯಿತು. ಈಗ ಈ ದೇವಾಲಯವು ಪಾಳುಬಿದ್ದಿದೆ.
ಸರಕಾರವು ಈ ದೇವಾಲಯದ ಜೀರ್ಣೋದ್ಧಾರ ಮಾಡಬೇಕು ! – ಭಾಜಪ ಮುಖಂಡ ಸುಧೀರ್ ಖಾಟಿಕ್

ಈ ಪ್ರದೇಶದಿಂದ ಸ್ಥಳಾಂತರ ಗೊಂಡಿರುವ ಭಾಜಪ ಮುಖಂಡ ಸುಧೀರ್ ಖಾಟಿಕ್ ಮಾತನಾಡಿ, 90ರ ದಶಕದಲ್ಲಿ ಈ ಪರಿಸರದಲ್ಲಿ ಮಾಂಸದ ಅಂಗಡಿಗಳು ಪ್ರಾರಂಭವಾಯಿತು ಮತ್ತು ಧಾರ್ಮಿಕ ವಾತಾವರಣ ಹದಗೆಟ್ಟಿತು. ಇಂತಹ ಪರಿಸ್ಥಿತಿಯಲ್ಲಿ ಹಿಂದೂಗಳು ದೇವಸ್ಥಾನದಿಂದ ವಿಗ್ರಹಗಳನ್ನು ತೆಗೆದು ಬೇರೆ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು. ಇಂದು ದೇವಾಲಯವನ್ನು ಸುತ್ತಮುತ್ತಲಿನ ಜನರು ಅತಿಕ್ರಮಿಸಿದ್ದಾರೆ. ಸರಕಾರವು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕು. ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಇದೇ ರಾಷ್ಟ್ರದ ಭದ್ರತೆಯ ಆಧಾರವಾಗಿದೆ ಎಂದು ಹೇಳಿದ್ದಾರೆ.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು