ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ!

  • ಸಂಚಾರವಾಣಿಯ ಜನಕ ಮಾರ್ಟಿನ ಕೂಪರ ಇವರಿಂದ ಜನರಿಗೆ ಮನವಿ

  • ಮಾರ್ಟಿನ ಕೂಪರ ಸ್ವತಃ ದಿನದ ಶೇ. ೫ ರಷ್ಟು ಮಾತ್ರ ಮೊಬೈಲ್ ಬಳಸುತ್ತಾರೆ!

  • ಮೊಬೈಲ್ ಇಂದ ಜನರ ಜೀವನದಲ್ಲಿ ನೆಮ್ಮದಿ ಕಳೆದು ಹೋಗಿದೆ ಎಂಬ ಅಬಿಪ್ರಾಯ!

ನ್ಯೂಯಾರ್ಕ – ಸಂಚಾರಿವಾಣಿಯ ಜನಕ ಮಾರ್ಟಿನ ಕೂಪರ ಅವರು ಸಂಚಾರಿವಾಣಿ (ಮೊಬೈಲ್) ಬಳಕೆಯನ್ನು ಕಡಿಮೆ ಮಾಡಲು ಜನರಿಗೆ ಕರೆ ನೀಡಿದ್ದಾರೆ. ಕೂಪರ ಸ್ವತಃ ದಿನದ ಶೇ. ೫ ಸಮಯ ಮಾತ್ರ ಮೊಬೈಲ್ ಬಳಸುತ್ತಾನೆ. ಹಗಲು ರಾತ್ರಿ ಮೊಬೈಲ ಬಳಸುವವರ ಬಗ್ಗೆ ಕೇಳಿದಾಗ ಕೂಪರ “ಅಂತಹವರು ಮೊಬೈಲ ಆಫ ಮಾಡಿ ಸ್ವಲ್ಪ ಜೀವನವನ್ನು ಅನುಭವಿಸಬೇಕು” ಎಂದರು. ಸಂಚಾರಿವಾಣಿಯನ್ನು ಕಂಡು ಹಿಡಿದ ೫೦ ವರ್ಷಗಳ ನಂತರ ’ಅವುಗಳಿಂದಾಗಿ ಜನರು ಜೀವಿಸುವ ಸಂತೋಷವನ್ನು ಕಳೆದುಕೊಂಡಿದ್ದಾರೆ’ ಎಂದು ಅನಿಸುತ್ತದೆ.

೧೯೭೩ರಲ್ಲಿ ಮೊಬೈಲ್ ನ ಆವಿಷ್ಕಾರವಾಯಿತು!

ಮಾರ್ಟಿನ ಕೂಪರ ೧೯೭೩ರಲ್ಲಿ ಸಂಚಾರಿವಾಣಿಯನ್ನು ಕಂಡು ಹಿಡಿದರು. ಮೊಟೊರೊಲಾ ಸಂಸ್ಥೆಯ ಈ ಮೊಬೈಲ್ ಸರಿಸುಮಾರು ೨ ಕಿಲೋ ತೂಕವಿತ್ತು. ಇದರಲ್ಲಿ ಶಕ್ತಿ ಸಂಚಯ ಮಾಡಲು (ಚಾರ್ಜ್) ೧೦ ಗಂಟೆಗಳು ತಗುಲಿದರೆ ಮಾತನಾಡಲು ಕೇವಲ ೨೫ ನಿಮಿಷಗಳ ಅವಕಾಶವಿತ್ತು. ಅದರ ನಂತರ ಅದರಲ್ಲಿ ಮತ್ತೊಮ್ಮೆ ಶಕ್ತಿ ಸಂಚಯ ಮಾಡಬೇಕಾಗಿತ್ತು. ಈ ಮೊಬೈಲ್ ೧೦ ಇಂಚು ಉದ್ದವಿತ್ತು.

ಸಂಪಾದಕೀಯ ನಿಲುವು

ವಿಜ್ಞಾನವು ಅನೇಕ ಅವಿಷ್ಕಾರಗಳಿಗೆ ಕಾರಣವಾಯಿತು. ಈ ಅವಿಷ್ಕಾರಗಳು ಮಾನವನ ಜೀವನವನ್ನು ಆಹ್ಲಾದಕರವಾಗಿಸುತ್ತವೆ ಎಂದು ಹೇಳಲಾಗಿದೆ; ಆದರೆ ಕೊನೆಯಲ್ಲಿ ಪರಿಣಾಮಗಳು ಸ್ಪಷ್ಟವಾಗಿವೆ. ವಿಜ್ಞಾನದಲ್ಲಿ ನಂಬಿಕೆ ಇರುವವರು ಇದನ್ನು ಗಮನದಲ್ಲಿಡಬೇಕು!