ಸಂಸದ ಜಿಯಾ ಉರ್ ರೆಹಮಾನ್ ಬರ್ಕ್ ವಿದ್ಯುತ್ ಕಳ್ಳತನ ಪ್ರಕರಣ 1 ಕೋಟಿ 91 ಲಕ್ಷ ರೂಪಾಯಿ ದಂಡ

ಸಂಭಲ್ (ಉತ್ತರ ಪ್ರದೇಶ) – ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬರ್ಕ್ ವಿರುದ್ಧ ಪ್ರಕರಣ ದಾಖಲಿಸಿದ ನಂತರ ವಿದ್ಯುತ್ ಇಲಾಖೆಯು ಅವರಿಗೆ 1 ಕೋಟಿ 91 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಅಲ್ಲದೆ ಸಂಸದ ಬರ್ಕ ಅವರ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಖಿಲೇಶ್ ಯಾದವ್ ಬರ್ಕೆಯನ್ನು ಬೆಂಬಲಿಸಿದ್ದಾರೆ. ‘ಸರಕಾರ ಮುಸಲ್ಮಾನರ ಮನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಷದ ಸಂಸದರ ಮನೆಗಳ ಮೇಲೂ ದಾಳಿ ನಡೆಸಬೇಕು’, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕೇವಲ ದಂಡ ವಿಧಿಸುವುದಷ್ಟೇ ಅಲ್ಲ, ಅವರಿಗೆ ಜೈಲಿಗಟ್ಟಬೇಕು ! ಸಂಸದರಾಗಿದ್ದಾಗಲೇ ಇಂತಹ ಅಪರಾಧ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು !