ಬಾಂಗ್ಲಾದೇಶಕ್ಕೆ ಭಾರತದ ಹಿಂದುತ್ವ ಇಷ್ಟವಾಗುವುದಿಲ್ಲವೆಂದು ಅಲ್ಲಿನ ಸರಕಾರದಲ್ಲಿರುವ ಸಲಹೆಗಾರನ ಹಿಂದೂದ್ವೇಷಿ ಹೇಳಿಕೆ !

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಮತ್ತು ಸರಕಾರದ ಸಲಹೆಗಾರ ಆಸಿಫ ಮಹಮೂದನ ಹೇಳಿಕೆ

ಢಾಕಾ (ಬಾಂಗ್ಲಾದೇಶ) – ಮಾಜಿ ಪ್ರಧಾನಿ ಶೇಖ ಹಸೀನಾ ಸರಕಾರದ ವಿರುದ್ಧದ ವಿದ್ಯಾರ್ಥಿಗಳ ಬಂಡಾಯದ ಪ್ರಮುಖ ಮುಖವಾಗಿರುವ 26 ವರ್ಷದ ವಿದ್ಯಾರ್ಥಿ ನಾಯಕ ಆಸಿಫ್ ಮಹಮೂದ ಮಾತನಾಡಿ, ‘ಭಾಜಪ ಭಾರತದಲ್ಲಿ ಸರಕಾರ ನಡೆಸುತ್ತಿದೆ. ಇದು ಹಿಂದೂಗಳ ಪ್ರಣಾಳಿಕೆಯನ್ನು ಹೊಂದಿದೆ, ಅದನ್ನು ನಾವು ವಿರೋಧಿಸುತ್ತೇವೆ. ಬಾಂಗ್ಲಾದೇಶದ ಜನರು ಹಿಂದುತ್ವವನ್ನು ಇಷ್ಟಪಡುವುದಿಲ್ಲ.’ ಎಂದು ಹೇಳಿದನು. ಆಸಿಫ್ ಪ್ರಸ್ತುತ ಬಾಂಗ್ಲಾದೇಶದ ಮಧ್ಯಂತರ ಸರಕಾರದಲ್ಲಿ ಸಲಹೆಗಾರರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಹಿಂದೂಗಳ ಮೇಲಿನ ದಾಳಿಗಳು ರಾಜಕೀಯ ಪ್ರೇರಿತವಾಗಿದೆಯೆಂದು ಆಸಿಫ್ ಹೇಳಿದ್ದನು.

ಭಾರತದಲ್ಲಿ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸಿಫ ಮಹಮೂದನು,

1. ಭಾರತದ ಅನೇಕ ನಾಯಕರು ಬಾಂಗ್ಲಾದೇಶದ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ. ನಮ್ಮ ಜನರು ಭಾರತದ ಮೇಲೆ ಅಸಮಾಧಾನಗೊಂಡಿದ್ದಾರೆ; ಏಕೆಂದರೆ ಭಾರತ ಶೇಖ್ ಹಸೀನಾಗೆ ಸಹಾಯ ಮಾಡುತ್ತಿದೆ. ಶೇಖ್ ಹಸೀನಾ ಅಲ್ಲಿಯೇ ಉಳಿದು ಭಾಷಣ ಮಾಡುತ್ತಿದ್ದಾರೆ. ಒಂದು ವೇಳೆ ಭಾರತ ಅವರನ್ನು ವಾಪಸ್ಸು ಕಳುಹಿಸಿದರೆ ಬಾಂಗ್ಲಾದೇಶದೊಂದಿಗಿನ ಸಂಬಂಧ ಸುಧಾರಿಸುತ್ತದೆ.

2. 2019 ರಲ್ಲಿ, ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ನಾವು ಅದನ್ನು ವಿರೋಧಿಸಿದೆವು. ಈ ಕಾರಣದಿಂದಾಗಿ, ಭಾರತದಿಂದ ಹೆಚ್ಚಿನ ಸಂಖ್ಯೆಯ ಮುಸ್ಲಿಂ ವಲಸಿಗರು ಬಾಂಗ್ಲಾದೇಶಕ್ಕೆ ಮರಳಬಹುದು. ಈ ನೀತಿ ಮುಸ್ಲಿಮರ ವಿರುದ್ಧವಾಗಿದೆ.

3. ಶೇಖ್ ಹಸೀನಾ ಸರಕಾರದೊಂದಿಗೆ ಇದ್ದವರ ವಿರುದ್ಧ ನಾವು ಇದ್ದೇವೆ. ಇದೇ ಭಾರತದ ದ್ವೇಷಕ್ಕೆ ಕಾರಣವಾಗಿದೆ. ಹಾಗಾಗಿ ಬಾಂಗ್ಲಾದೇಶದ ಜನರು ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರುವಂತೆ ಆಗ್ರಹಿಸುತ್ತಿದ್ದಾರೆ. ಶೇಖ್ ಹಸೀನಾ ಅಧಿಕಾರಕ್ಕೆ ಬಂದ ನಂತರ, ಅವಾಮಿ ಲೀಗ್‌ನ 10 ಸಾವಿರ ಜನರನ್ನು ಜೈಲಿಗೆ ಹಾಕಲಾಯಿತು. (ಇದಕ್ಕೆ ದೌರ್ಜನ್ಯ ಎನ್ನುತ್ತಾರೆ ! ಇದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಸರ್ವಾಧಿಕಾರವೇ ಆಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

‘ಭಾರತಕ್ಕೆ ಬಾಂಗ್ಲಾದೇಶದ ಜಿಹಾದಿಗಳು ಇಷ್ಟವಿಲ್ಲ’, ಎಂದು ಹೇಳಿದರೆ, ತಪ್ಪೆಂದು ತಿಳಿಯಬಾರದು !