ಕೇವಲ ಒಂದು ತಪ್ಪು ಜಗತ್ತನ್ನು ವಿನಾಶದ ಕಡೆಗೆ ಕೊಂಡೊಯ್ಯಬಹುದು ! – ವಿಶ್ವ ಸಂಸ್ಥೆಯ ಮಹಾಸಚಿವ ಆಂಟೊನಿಯೊ ಗುಟೆರೆಸ್

ವಿಶ್ವ ಸಂಸ್ಥೆಯ ಮಹಾ ಸಚಿವರಾದ ಆಟೋನಿಯೊ ಗೂಟೆರೆಸ್

ನ್ಯೂಯಾರ್ಕ್ (ಅಮೇರಿಕಾ) – ಕೇವಲ ಒಂದು ತಪ್ಪು ಜಗತ್ತನ್ನು ವಿನಾಶದ ಕಡೆಗೆ ತೆಗೆದುಕೊಂಡು ಹೋಗಬಹುದು. ಸಂಪೂರ್ಣ ಜಗತ್ತಿನಲ್ಲಿ ಎಲ್ಲಾ ದೇಶಗಳಿಂದ ನಿರಂತರವಾಗಿ ಪರಮಾಣು ಶಸ್ತ್ರಾಸ್ತ್ರಗಳ ಬೇಡಿಕೆ ಮತ್ತು ಕ್ಷಮತೆ ಹೆಚ್ಚಿಸಲಾಗುತ್ತಿದೆ. ಇದನ್ನು ತಕ್ಷಣ ತಡೆಯುವ ಅವಶ್ಯಕತೆ ಇದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ಮತ್ತು ಅದನ್ನು ಇಟ್ಟುಕೊಳ್ಳುವ ದೇಶಗಳು ಈಗ ಒಂದು ಹೆಜ್ಜೆ ಹಿಂದೆ ಹೋಗುವ ಅವಶ್ಯಕತೆ ಇದೆ, ಎಂದು ವಿಶ್ವ ಸಂಸ್ಥೆಯ ಮಹಾ ಸಚಿವರಾದ ಆಟೋನಿಯೊ ಗೂಟೆರೆಸ್ ಇವರು ಕರೆ ನೀಡಿದ್ದಾರೆ. ‘ಟ್ರೀಟಿ ಆನ್ ದ-ನಾನ್-ಪ್ರೋಲಿಫಿರೇಶನ್ ಆಫ್ ನ್ಯೂಕ್ಲಿಯರ್ ವೆಪನ್ಸ್’ನ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಗುಟೆರೆಸ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ೧೯೭೦ ರ ನಂತರ ಇಲ್ಲಿಯವರೆಗೆ ಅನೇಕ ದೇಶಗಳು ಪರಮಾಣು ಒಪ್ಪಂದದ ಕರಾರಿನ ಮೇಲೆ ಸಹಿ ಮಾಡಿದೆ; ಆದರೆ ಇಲ್ಲಿಯವರೆಗೆ ಇಸ್ರೈಲ್, ಉತ್ತರ ಕೋರಿಯಾ, ಭಾರತ ಮತ್ತು ಪಾಕಿಸ್ತಾನ ಇವುಗಳು ಈ ಒಪ್ಪಂದದ ಮೇಲೆ ಸಹಿ ಮಾಡಿಲ್ಲ. ಇವರೆಲ್ಲರ ಹತ್ತಿರ ಪರಮಾಣು ಶಸ್ತ್ರಾಸ್ತ್ರಗಳು ಇವೆ. ೧೯೪೫ ರಲ್ಲಿ ಜಪಾನ್ ಮೇಲೆ ಅಣು ಬಾಂಬ್ ಹಾಕಿದ ನಂತರ ಇಲ್ಲಿಯವರೆಗೆ ಪರಮಾಣು ಶಸ್ತ್ರಾಸ್ತ್ರಗಳ ದಾಳಿ ನಡೆದಿಲ್ಲ. ಅದಕ್ಕಾಗಿ ನಾವು ಘರ್ಷಣೆಯನ್ನು ತಡೆಯುವುದಕ್ಕಾಗಿ ಮಾಡಿರುವ ಪ್ರಯತ್ನದ ಅಲ್ಲದೆ ನಮ್ಮ ಹಣೆಬರಹಕ್ಕೆ ಆಭಾರ ಮನ್ನಿಸಬೇಕು. ಜಗತ್ತು ಹಿರೋಶಿಮಾ ಮತ್ತು ನಾಗಸಕಿಯ ಮೇಲೆ ನಡೆದಿರುವ ಅಣು ಬಾಂಬ್ ದಾಳಿಯ ಘಟನೆ ಎಂದು ಮರೆಯಬಾರದು. ನಾವೆಲ್ಲರೂ ಇದರಿಂದ ಪಾಠ ಕಲಿಯಬೇಕು. ಪ್ರಸ್ತುತ ಈ ರೀತಿಯ ಸ್ಪರ್ಧೆ ಎಲ್ಲಾ ದೇಶಗಳಲ್ಲಿ ನಡೆಯುತ್ತಿದೆ ಮತ್ತು ಸ್ನೇಹ ಕಳೆಯುತ್ತಿದೆ. ವಿಶ್ವಾಸ ಕೊನೆಯಾಗುತ್ತಿದೆ. ಚರ್ಚೆ ಕಡಿಮೆಯಾಗುತ್ತಿದೆ. ಎಲ್ಲಾ ದೇಶ ಕೋಟ್ಯಾಂತರ ರೂಪಾಯಿ ಪ್ರಳಯ ಕಾರಕ ಶಸ್ತ್ರಗಳನ್ನು ನಿರ್ಮಿಸಲು ಖರ್ಚು ಮಾಡುತ್ತಿದೆ ಎಂದು ಹೇಳಿದರು.