Terrorists Plan RSS Leaders Kill : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಇತರ ಹಿಂದೂ ಸಂಘಟನೆಗಳ ಮುಖಂಡರನ್ನು ಕೊಲ್ಲುವ ಸಂಚು ಬಹಿರಂಗ

  • ಆಸ್ಸಾಂ ಪೊಲೀಸರಿಂದ 8 ಜಿಹಾದಿ ಭಯೋತ್ಪಾದಕರ ಬಂಧನ

  • 2 ಬಾಂಗ್ಲಾದೇಶಿ ಭಯೋತ್ಪಾದಕರೂ ಸೇರಿದ್ದಾರೆ

ಗೌಹಾಟಿ (ಆಸ್ಸಾಂ) – ಆಸ್ಸಾಂ ವಿಶೇಷ ಕಾರ್ಯ ಪಡೆಯು ಬಂಗಾಳ ಪೊಲೀಸರು ಮತ್ತು ಕೇರಳ ಪೊಲೀಸರೊಂದಿಗೆ ‘ಆಪರೇಷನ್ ಪ್ರಗತ’ ಕೈಕೊಂಡು 8 ಭಯೋತ್ಪಾದಕರನ್ನು ಬಂಧಿಸಿದೆ. ಅವರು ಹಿಂದೂ ನಾಯಕರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದರು. ಮೊಹಮ್ಮದ್ ಸಾಬ್ ಶೇಖ್, ಮಿನಾರುಲ್ ಶೇಖ್, ಅಬ್ಬಾಸ್ ಅಲಿ, ನೂರ್ ಇಸ್ಲಾಂ ಮಂಡಲ್, ಅಬ್ದುಲ್ ಕರೀಂ ಮಂಡಲ್, ಮೊಜಿಬರ್ ರೆಹಮಾನ್, ಹಮೀದುಲ್ ಇಸ್ಲಾಂ ಮತ್ತು ಇನಾಮುಲ್ ಹಕ್ ಭಯೋತ್ಪಾದಕರ ಹೆಸರುಗಳಾಗಿವೆ. ಇವರೆಲ್ಲರು ದೇಶಾದ್ಯಂತ ಸ್ಥಳೀಯ ಸಹಾಯಕ ಗುಂಪುಗಳನ್ನು ನಿರ್ಮಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇವರಲ್ಲಿ ಸಾಬ್ ಶೇಖ್ ಮತ್ತು ಅಬ್ಬಾಸ್ ಅಲಿ ಬಾಂಗ್ಲಾದೇಶೀಯರಾಗಿದ್ದಾರೆ. ಈ ಹಿಂದೆ ಅಬ್ಬಾಸ್‌ನನ್ನು ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ  ಬಂಧಿಸಲಾಗಿತ್ತು.

1. ಅಸ್ಸಾಂ ಪೊಲೀಸರ ವಿಶೇಷ ಮಹಾನಿರ್ದೇಶಕ ಹರ್ಮೀತ್ ಸಿಂಗ್ ಮಾತನಾಡಿ, ‘ಇಸ್ಲಾಂ ಕಟ್ಟರವಾದಿಗಳು ಬಂಗಾಳದ ಮುರ್ಷಿದಾಬಾದ್ ಮತ್ತು ಫಲಾಕಾಟಾದಲ್ಲಿ ಪರಸ್ಪರ ಭೇಟಿಯಾಗಿದ್ದರು’, ಎಂದು ಹೇಳಿದ್ದಾರೆ.

2. ಈ ಸಭೆಗಳಲ್ಲಿ, ದೇಶದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಇತರ ಹಿಂದೂ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಿ ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡುವ ಸಂಚು ರೂಪಿಸಲಾಗಿತ್ತು; ಆದರೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಅವರು ದೇಶದ ವಿವಿಧ ಪ್ರದೇಶಗಳಿಗೆ ತಂಡಗಳನ್ನು ಕಳುಹಿಸಿ ದಾಳಿ ನಡೆಸಿ ಬಂಧಿಸಿದ್ದಾರೆ. ಅವರಿಂದ ಅನೇಕ ಆಕ್ಷೇಪಾರ್ಹ ದಾಖಲೆಗಳು ಮತ್ತು ವಸ್ತುಗಳು ಸಿಕ್ಕಿವೆ.

3. ಕೇರಳ ಮತ್ತು ಬಂಗಾಳದಲ್ಲಿ ವಾಸಿಸುವ ಭಯೋತ್ಪಾದಕ ಮಹಮ್ಮದ್ ಫರ್ಹಾನ್ ಇಸ್ರಾಕ್‌ಗಾಗಿ ಕೆಲಸ ಮಾಡುತ್ತಿದ್ದರು. ಇಸ್ರಾಕ್ ಅಲ್ ಖೈದಾ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ. ಹಾಗೂ ಆತನು `ಅನ್ಸಾರುಲ್ಲಾ ಬಾಂಗಲಾ ಟೀಮ’ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಜಸಿಮುದ್ದಿಮನ್‌ ಇವನ ಆಪ್ತನಾಗಿದ್ದಾನೆ.

ಸಂಪಾದಕೀಯ ನಿಲುವು

ದೇಶದಲ್ಲಿ ಮುಸ್ಲಿಮರಲ್ಲ, ಹಿಂದೂಗಳು ಮತ್ತು ಅವರ ನಾಯಕರು ಅಸುರಕ್ಷಿತರಾಗಿದ್ದಾರೆ. ಒಬ್ಬನೇ ಒಬ್ಬ ಮುಸ್ಲಿಂ ನಾಯಕನನ್ನು ಕೊಲ್ಲುವ ಸಂಚು ರಚಿಸಿರುವ ಪ್ರಕರಣದಲ್ಲಿ ಎಂದಾದರೂ ಯಾರನ್ನಾದರೂ ಬಂಧಿಸಲಾಗಿದೆಯೇ ?