ಅಮೇರಿಕಾದಲ್ಲಿ ನಾಲ್ವರು ಮುಸಲ್ಮಾನರ ಹತ್ಯೆಯ ಪ್ರಕರಣದಲ್ಲಿ ಆಫಘಾನಿಸ್ತಾನದ ಮುಸಲ್ಮಾನನ ಬಂಧನ

ನ್ಯೂ ಮೆಕ್ಸಿಕೋ (ಅಮೇರಿಕಾ) – ಇಲ್ಲಿನ ಅಲ್ಬಕರೀಕ ನಗರದಲ್ಲಿ ಕಳೆದ ಕೆಲವು ದಿನಗಳಲ್ಲಿ ನಾಲ್ವರು ಮುಸಲ್ಮಾನರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಅಫಘಾನಿಸ್ತಾನದ ನಾಗರೀಕನಾದ ಮಹಂಮದ ಸಯೀದನನ್ನ ಬಂಧಿಸಿದ್ದಾರೆ. ಈ ಹತ್ಯೆಯನ್ನು ಇಸ್ಲಾಮಿನ ದ್ವೇಷದಿಂದಾಗಿ ಮಾಡಲಾಗಿರುವುದಾಗಿ ಹೇಳಲಾಗುತ್ತಿತ್ತು. ಈ ಬಗ್ಗೆ ಅಮೇರಿಕಾದ ರಾಷ್ಟ್ರಾಧ್ಯಕ್ಷರಾದ ಜೋ ಬಾಯಡೆನ್‌ರವರು ಈ ಹತ್ಯೆಗಳನ್ನು ‘ಮುಸಲ್ಮಾನರ ಮೇಲಿ ಆಕ್ರಮಣ’ ಎಂದು ಸಂಬೋಧಿಸಿದ್ದರು. ಆದರೆ ಪ್ರತ್ಯಕ್ಷದಲ್ಲಿ ಓರ್ವ ಮುಸಲ್ಮಾನನಿಂದಲೇ ಈ ಹತ್ಯೆ ಮಾಡಲಾಗಿರುವುದು ಈಗ ಬಹಿರಂಗವಾಗಿದೆ. ಈ ಹತ್ಯೆಗಳಿಂದ ಇಲ್ಲಿನ ಮುಸಲ್ಮಾನರು ಹೆದರಿದ್ದಾರೆ, ಕೆಲವರು ಇಲ್ಲಿಂದ ಓಡಿ ಹೋಗಿದ್ದರೆ ಇನ್ನೂ ಕೆಲವರು ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ.

ಈ ೪ ಹತ್ಯೆಗಳಲ್ಲಿ ಮೊದಲೇ ಹತ್ಯೆಯು ನವೆಂಬರ್‌ ೨೦೨೧ರಲ್ಲಿ ಆಗಿದ್ದರೆ, ಉಳಿದ ಮೂವರ ಹತ್ಯೆಯು ಕಳೆದ ೧೫ ದಿನಗಳಲ್ಲಿ ಆಗಿದೆ. ಮೃತರಾದ ಎಲ್ಲರೂ ಅಫಘಾನಿಸ್ತಾನ ಮತ್ತು ಪಾಕಿಸ್ತಾನದವರಾಗಿದ್ದರು. ಈ ಹತ್ಯೆಯ ಮೂಲ ಕಾರಣವನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ‘ಈ ಹತ್ಯೆಗಳ ಹಿಂದೆ ಮುಸಲ್ಮಾನರ ನಡುವಿನ ಧಾರ್ಮಿಕ ವಾದವೇ ಕಾರಣವಾಗಿರಬಹುದು’ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.