ದೇವರು, ದೇಶ, ಧರ್ಮ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಮೈತ್ರಿ ಸರಕಾರ ಕಟಿಬದ್ಧವಾಗಿದೆ ಎಂದು ಜನಪ್ರತಿನಿಧಿಗಳ ಆಶ್ವಾಸನೆ !

ನಾಗಪುರದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘ ಆಯೋಜಿಸಿರುವ ಧರ್ಮಪ್ರೇಮಿ, ಜನಪ್ರತಿನಿಧಿಗಳ ಸನ್ಮಾನ ಸಮಾರಂಭ !

ಎಡದಿಂದ ಭಾಜಪದ ಶ್ರೀ. ಅನಿಲ್ ಶರ್ಮ, ನ್ಯಾಯವಾದಿ ರಮಣ ಸೇನಾಡ, ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ, ಶಿವಸೇನೆಯ ಸಚಿವ ಭರತ ಶೇಠ ಗೋಗಾವಲೆ, ಪೂ. ಭಗೀರಥಿ ಮಹಾರಾಜ, ಭಾಜಪದ ಸಚಿವ ಅತುಲ ಸಾವೆ, ಶಿವಸೇನಾ ಶಾಸಕಿ ಡಾ. ಮನಿಷಾ ಕಾಯಂದೆ, ಶಾಸಕ ನಾರಾಯಣ ಕುಚೆ, ಮಹಾಸಂಘದ ಶ್ರೀ. ಸುನಿಲ ಘನವಟ

ನಾಗಪುರ, ಡಿಸೆಂಬರ್ ೨೦(ವಾರ್ತೆ) – ಲೋಕಸಭೆಯಲ್ಲಿ ‘ವೋಟ್ ಜಿಹಾದ್’ ದ ಷಡ್ಯಂತ್ರಕ್ಕೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹಿಂದುಗಳು ‘ಏಕ್ ಹೆ, ತೋ ಸೇಫ್ ಹೆ’ (ಒಗ್ಗಟ್ಟಾಗಿದ್ದರೆ, ಸುರಕ್ಷಿತ ಇರುವೆವು) ಎಂಬ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ಹಿಂದುಗಳು ಬಹುಮತ ನೀಡಿ ನಮ್ಮನ್ನು ಆರಿಸಿ ಕಳುಹಿಸಿದ್ದಾರೆ, ಇದರ ಅರಿವು ಇಟ್ಟುಕೊಂಡು ನಾವು ಕೂಡ ಹಿಂದುತ್ವಕ್ಕಾಗಿ ಸಮರ್ಪಿತರಾಗಿ ಕಾರ್ಯ ಮಾಡುವೆವು, ಎಂದು ಎಲ್ಲಾ ಹಿಂದುಗಳಿಗೆ ಭರವಸೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘ ಆಯೋಜಿಸಿರುವ ಧರ್ಮಪ್ರೇಮಿ ಜನಪ್ರತಿನಿಧಿಗಳ ಸನ್ಮಾನ ಸಮಾರಂಭದಲ್ಲಿ ‘ದೇವರು, ದೇಶ, ಧರ್ಮ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಮೈತ್ರಿ ಸರಕಾರ ಕಟಿಬದ್ಧವಾಗಿದೆ’, ಎಂದು ಧರ್ಮ ಪ್ರೇಮಿ ಜನಪ್ರತಿನಿಧಿಗಳು ಹಿಂದುಗಳಿಗೆ ಭರವಸೆ ನೀಡುತ್ತಾ ‘ಜಯ ಶ್ರೀ ರಾಮ, ‘ಛತ್ರಪತಿ ಶಿವಾಜಿ ಮಹಾರಾಜ ಕಿ ಜಯ’ ಎಂದು ಜಯ ಘೋಷ ಮಾಡುತ್ತಾ ಹಿಂದುತ್ವದ ರಕ್ಷಣೆಗಾಗಿ ಕೊಡುಗೆ ನೀಡುವೆವು ಎಂದು ಜನಪ್ರತಿನಿಧಿಗಳು ಭರವಸೆ ನೀಡಿದರು. ಡಿಸೆಂಬರ್ ೧೯ ರಂದು ಸೀತಾಬರ್ಡಿ ಇಲ್ಲಿಯ ವಿದರ್ಭ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಧರ್ಮಪ್ರೇಮಿ ಜನಪ್ರತಿನಿಧಿಗಳ ಸನ್ಮಾನ ಸಮಾರಂಭ ಉತ್ಸಾಹದಲ್ಲಿ ನೆರವೇರಿತು. ಬಿಡುವಿಲ್ಲದ ವಿಧಿ ಮಂಡಲದ ಚಳಿಗಾಲದ ಅಧಿವೇಶನದ ಕಾರ್ಯಕಲಾಪದಂದ ಸಮಯ ನೀಡಿ ೩ ಸಚಿವರು, ೧ ರಾಜ್ಯ ಸಚಿವ ಇವರ ಜೊತೆಗೆ ೫ ಶಾಸಕರು ಈ ಸಮಾರಂಭಕ್ಕೆ ಉಪಸ್ಥಿತರಿದ್ದರು. ಭಾಜಪದ ಸಚಿವ ಶ್ರೀ. ಅತುಲ ಸಾವೆ (ಛತ್ರಪತಿ ಸಂಭಾಜಿ ನಗರ), ಶಿವಸೇನೆಯ ಸಚಿವ ಶ್ರೀ. ಭರತಶೇಠ ಗೋಗಾವಲೇ (ಮಹಾಡ), ಭಾಜಪದ ಸಚಿವ ಶ್ರೀ. ಜಯಕುಮಾರ ರಾವಲ (ದೊಂಡಾಯಿಚಾ ), ಶಿವಸೇನೆಯ ರಾಜ್ಯ ಸಚಿವ ಶ್ರೀ. ಆಶೀಶ ಜೈಸ್ವಾಲ್ (ರಾಮಟೇಕ ನಾಗಪುರ) , ಶಿವಸೇನೆಯ ಶಾಸಕಿ ಡಾ. ಮನೀಷಾ ಕಾಯಂದೆ (ವಿಧಾನ ಪರಿಷತ್, ಮುಂಬಯಿ), ಭಾಜಪದ ಶಾಸಕ ಶ್ರೀ. ನಾರಾಯಣರಾವ ಕುಚೆ (ಜಾಲನಾ) ಭಾಜಪದ ಶಾಸಕ ಶ್ರೀ. ಪ್ರತಾಪರಾವ್ ಅಡಸಡ್(ಧಾಮಣಗಾವ ರೈಲ್ವೆ, ಅಮರಾವತಿ), ಶಿವಸೇನೆಯ ಶಾಸಕ ಶ್ರೀ. ಆನಂದ ಬೋಂಡಾರಕರ (ನಾಂದೇಡ) ಮತ್ತು ಭಾಜಪದ ಶಾಸಕ ಶ್ರೀ. ರಾಮ ಭದಾಣೆ (ಧೂಳೆ) ಇವರು ಸಮಾರಂಭಕ್ಕೆ ಉಪಸ್ಥಿತ ಇದ್ದು ಸನ್ಮಾನ ಸ್ವೀಕರಿಸಿದರು ಹಾಗೂ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

ನಾಗಪುರದ ‘ಗುರು ಕೃಪಾ ಸೇವಾ ಸಂಸ್ಥಾನ’ ದ ಪೂ. ಭಗೀರಥಿ ಮಹಾರಾಜ, ಸನಾತನದ ಪೂ. ಅಶೋಕ ಪಾರ್ತಿಕರ್, ಹ.ಭ.ಪ. ಮನೋಜ ಮಹಾರಾಜ ಮಿರಕುಟೆ ಇವರ ವಂದನಿಯ ಉಪಸ್ಥಿತಿ ಲಭಿಸಿತು. ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನಿಲ ಘನವಟ, ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ, ಹಿಂದೂ ಜನಜಾಗೃತಿ ಸಮಿತಿಯ ವಿದರ್ಭ ಸಮನ್ವಯಕ ಶ್ರೀ. ಶ್ರೀಕಾಂತ ಪಿಸೋಳಕರ್ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.

‘ಹಿಂದುತ್ವ’ ಇದೇ ನನ್ನ ರಾಜಕಾರಣದ ಶಕ್ತಿ ! – ಸಚಿವ ಅತುಲ ಸಾವೆ, ಭಾಜಪ

ಭಾಜಪದ ಸಚಿವ ಅತುಲ ಸಾವೆ ಇವರ ಸನ್ಮಾನ ಮಾಡುತ್ತಿರುವಾಗ ನಾಂದೇಡ ವ್ಯಾಪಾರಿ ಸಂಘಟನೆಯ ಅಧ್ಯಕ್ಷ ಶ್ರೀ. ಗಣೇಶ ಮಹಾಜನ

‘ಛತ್ರಪತಿ ಸಂಭಾಜಿ ನಗರದಿಂದ ನನಗೆ ಹಿಂದೂ ಜನರು ಆರಿಸಿ ಕಳಿಸಿದ್ದಾರೆ’, ಇದರ ಅರಿವು ನನಗೆ ಇದೆ. ಆದ್ದರಿಂದ ನಾನು ಹಿಂದುತ್ವಕ್ಕಾಗಿಯೇ ರಾಜಕಾರಣದಲ್ಲಿ ಕಾರ್ಯನಿರತವಾಗಿದ್ದೇನೆ. ‘ಹಿಂದುತ್ವ’ ಇದು ನನ್ನ ರಾಜಕಾರಣದ ಶಕ್ತಿಯಾಗಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿಯಾದನಂತರ ಹಿಂದುಗಳ ಬಾಕಿ ಇರುವ ಸಮಸ್ಯೆಗಳನ್ನು ಅವರು ಪರಿಹರಿಸಿದರು. ನನ್ನ ತಂದೆ ಮೋರೇಶ್ವರ ಸಾವೇ ಇವರು ಪ್ರಖರ ಹಿಂದುತ್ವನಿಷ್ಠರಾಗಿದ್ದರು. ಅವರ ಪ್ರೇರಣೆಯಿಂದಲೇ ನಾನು ರಾಜಕಾರಣದಲ್ಲಿ ಹಿಂದುತ್ವಕ್ಕಾಗಿ ಕಾರ್ಯ ಮಾಡುತ್ತಿದ್ದೇನೆ. ಯಾವಾಗ ಬಾಂಗ್ಲಾದೇಶದ ನಿರ್ಮಿತಿ ಆಯಿತು, ಆಗ ಅಲ್ಲಿ ಹಿಂದುಗಳ ಸಂಖ್ಯೆ ಶೇಕಡ ೧೫ ರಷ್ಟು ಇತ್ತು, ಈಗ ಅದು ಕೇವಲ ಶೇಕಡ ೮ ರಷ್ಟು ಆಗಿದೆ. ಭಾರತದ ಈ ರೀತಿ ಸ್ಥಿತಿಯಾಗಬಾರದು. ಅದಕ್ಕಾಗಿ ಹಿಂದುಗಳು ಜಾಗೃತವಾಗಿರಬೇಕು. ಭಾರತದಲ್ಲಿ ಹಿಂದುಗಳು ಸುರಕ್ಷಿತವಾಗಿರಬೇಕು’, ಎಂದು ಹೇಳಿದರು.

ಸಂಘಟಿತವಾದಾರೆ ಹಿಂದೂಗಳನ್ನು ಎದುರಿಸುವ ಧೈರ್ಯ ಯಾರಿಗೂ ಆಗುವುದಿಲ್ಲ ! – ಭರತ ಶೇಠ ಗೋಗಾವಲೇ, ಸಚಿವರು, ಶಿವಸೇನ

ಶಿಸೇನ ಸಚಿವ ಶ್ರೀ. ಭರತಶೇಠ ಗೋಗಾವಲೆ ಇವರನ್ನು ಸತ್ಕಾರ ಮಾಡುತ್ತಿರುವ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನಿಲ ಘನವಟ

ಕಾಂಗ್ರೆಸ್ಸಿನ ನಾಯಕರು ಇಗಲು ಕೂಡ ಸ್ವಾತಂತ್ರ್ಯವೀರ ಸಾವರ್ಕರ್ ಇವರನ್ನು ಟೀಕಿಸುತ್ತಾರೆ. ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆ. ಇವುಗಳೆಲ್ಲ ಹಿಂದೂ ಧರ್ಮದ ಮೇಲಿನ ಸಂಕಷ್ಟಗಳಾಗಿವೆ. ದೇವರು, ಧರ್ಮ ಮತ್ತು ದೇಶ ಸುರಕ್ಷಿತವಾಗಿದ್ದರೆ, ನಾವು ಸುರಕ್ಷಿತವಾಗಿರ ಬಹುದು. ಹಿಂದುಗಳು ಒಟ್ಟಾದರೆ ಅವರನ್ನು ಎದುರಿಸುವ ಧೈರ್ಯ ಯಾರಿಗೂ ಆಗುವುದಿಲ್ಲ. ‘ಏಕ ಹೆ ತೋ ಸೇಫ್ ಹೆ’ (ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿ ಇರುವೆವು) ಮತ್ತು ‘ಬಟೆಂಗೆ ತೋ ಕಟೆಂಗೆ’ (ಬೇರೆ ಬೇರೆ ಆದರೆ, ನಾಶವಾಗುವುದು) ಇದರ ಶಕ್ತಿ ಚುನಾವಣೆಯಲ್ಲಿ ನೋಡಲು ಸಿಕ್ಕಿತು. ಹಿಂದೂಗಳು ನಮ್ಮನ್ನು ಅಧಿಕಾರದಲ್ಲಿ ತಂದರು. ಆದ್ದರಿಂದ ಹಿಂದುತ್ವಕಾಗಿ ಕೊಡುಗೆ ನೀಡುವುದು, ಇದು ನಮ್ಮ ಕರ್ತವ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ ಇವರಿಂದ ಹಿಂದೂ ಧರ್ಮ ಉಳಿಯಿತು. ಪ್ರತಿಯೊಬ್ಬ ಹಿಂದೂ ಮಹಾರಾಜರ ಆದರ್ಶ ಪಡೆದು ಹಿಂದುತ್ವಕ್ಕಾಗಿ ಕೊಡುಗೆ ನೀಡಬೇಕು’, ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿನ ಸರಕಾರ ಹಿಂದುತ್ವಕಾಗಿ ಕಾರ್ಯ ಮಾಡುವುದು ! – ಸಚಿವ ಜಯಕುಮಾರ ರಾವಲ, ಭಾಜಪ

ಶಾಸಕ ಜಯಕುಮಾರ ರಾವಲ ಇವರ ಸತ್ಕಾರ ಮಾಡುವಾಗ ಮಹಾರಾಷ್ಟ್ರ ಮಂದಿರ ಮಹಾಸಂಘ ನಾಗಪುರ ಜಿಲ್ಲೆಯ ಸಂಯೋಜಕ ಶ್ರೀ. ದಿಲೀಪ ಕುಕಡೆ

ಕೆಲವು ಅಲ್ಪಸಂಖ್ಯಾತರು ಈ ದೇಶದ ಮೇಲೆ ಅಧಿಕಾರ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ; ಆದರೆ ಈ ದೇಶ ಹಿಂದೂಗಳದಾಗಿತ್ತು ಮತ್ತು ಹಿಂದುಗಳದ್ದೇ ಇರುವುದು. ಹಿಂದುಗಳ ಶಕ್ತಿ ಪಣಕ್ಕಿಟ್ಟು ನಾವು ಆರಿಸಿ ಬಂದಿದ್ದೇವೆ. ಹಿಂದುಗಳ ಪ್ರಯತ್ನದಿಂದ ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ಬಂದಿದೆ. ಆದ್ದರಿಂದ ಸರಕಾರ ಹಿಂದುಗಳ ಹಿತಕ್ಕಾಗಿ ಕಾರ್ಯ ಮಾಡುವುದು. ಹಿಂದುಗಳು ಕೂಡ ಸರಕಾರದ ಬೆಂಬಲಕ್ಕೆ ದೃಢವಾಗಿ ನಿಲ್ಲಬೇಕು. ಈ ದೇಶ ಹಿಂದೂಗಳದಾಗಿತ್ತು ಮತ್ತು ಹಿಂದುಗಳದ್ದೇ ಇರುವುದು’, ಎಂದು ಹೇಳಿದರು.

ದೇವಸ್ಥಾನ ಸುರಕ್ಷಗಾಗಿ ಸರಕಾರವು ‘ಸನಾತನ ಮಂಡಳ’ದ ಸ್ಥಾಪನೆ ಮಾಡಬೇಕು ! – ಸುನೀಲ ಘನವಟ, ರಾಷ್ಟ್ರೀಯ ಸಂಘಟಕ, ಮಹಾರಾಷ್ಟ್ರ ಮಂದಿರ ಮಹಾಸಂಘ

ಭಾಜಪ ಶಾಸಕ ನಾರಾಯಣ ಕುಚೆ (ಎಡಗಡೆ) ಇವರ ಸನ್ಮಾನ ಮಾಡುತ್ತಿರುವ ನಾಗಪುರದ ಹ.ಭ.ಪ. ಮನೋಜ ಮಿರಕುಟೆ

ವಿಧಾನಸಭೆಯ ಅಧ್ಯಕ್ಷ ರಾಹುಲ್ ನಾರ್ವೆಕರ್ ಇವರು ‘ಹಿಂದುಗಳ ದೇವಸ್ಥಾನಗಳು ಏಕೆ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ, ಇತರ ಧರ್ಮದವರದ್ದು ಏಕೆ ಇಲ್ಲ ?’, ಎಂದು ಪ್ರಶ್ನಿಸಿದರು. ದೇಶದ ಒಂದೇ ಒಂದು ಮಸೀದಿ ಅಥವಾ ಚರ್ಚ್ ಸರಕಾರ ವಶಕ್ಕೆ ಪಡೆದಿಲ್ಲ. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಜಾತ್ಯಾತೀತ ಸರಕಾರ ಆಡಳಿತ ನಡೆಸುವುದಕ್ಕಾಗಿ ದೇವಸ್ಥಾನಗಳಿಂದ ಕೋಟ್ಯಾಂತರ ರೂಪಾಯಿ ಪಡೆಯುತ್ತದೆ. ಈ ಸರಕಾರ ಕೊಟ್ಯಾನಂತರ ರೂಪಾಯಿಯ ದೇವಸ್ಥಾನದ ಸಂಪತ್ತಿ ಮತ್ತು ಆಸ್ತಿ ಲೂಟಿ ಮಾಡುತ್ತಿದೆ. ಇದರ ವಿರುದ್ಧ ಹಿಂದುಗಳು ಹೋರಾಡುವುದು ಆವಶ್ಯಕವಾಗಿದೆ. ಬರುವ ವರ್ಷದಲ್ಲಿ ಸರಕಾರಿಕರಣ ಆಗಿರುವ ಹಿಂದುಗಳ ನಾಲ್ಕುವರೆ ಲಕ್ಷ ದೇವಸ್ಥಾನಗಳು ಭಕ್ತರ ವಶಕ್ಕೆ ನೀಡಲು ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿನ ಹಿಂದುತ್ವನಿಷ್ಠ ಸರಕಾರ ನಿಯೋಜನೆ ಮಾಡಬೇಕು. ಸರಕಾರವು ದೇವಸ್ಥಾನಕ್ಕಾಗಿ ‘ಸನಾತನ ಮಂಡಳ’ದ ಸ್ಥಾಪನೆ ಮಾಡಿ ದೇವಸ್ಥಾನಗಳನ್ನು ಸುರಕ್ಷಿತಗೊಳಿಸಬೇಕು’, ಎಂದು ಹೇಳಿದರು.