ಬಾಂಗ್ಲಾದೇಶದಲ್ಲಿ ಇಜ್ತಿಮಾ ಮೈದಾನ ವಶಕ್ಕೆ ಪಡೆಯಲು ಭಾರತೀಯ ಮತ್ತು ಬಾಂಗ್ಲಾದೇಶಿ ಮೌಲ್ವಿಗಳ ಬೆಂಬಲಿಗರಲ್ಲಿ ಹೊಡೆದಾಟ : ೪ ಜನರ ಸಾವು

(ಇಜ್ತಿಮಾ ಎಂದರೆ ದೊಡ್ಡ ಸಂಖ್ಯೆಯ ಜನರು ಒಗ್ಗೂಡುವುದು)
(ಮೌಲಾನಾ ಎಂದರೆ ಇಸ್ಲಾಂನ ಅಭ್ಯಾಸಕ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಟೋಂಗಿ ನಗರದಲ್ಲಿ ಡಿಸೆಂಬರ್ ೧೭ ರಂದು ಇಜ್ತಿಮಾ ಕಾರ್ಯಕ್ರಮದ ಆಯೋಜನೆಯಿಂದ ಮುಸಲ್ಮಾನರ ಎರಡು ಗುಂಪಿನಲ್ಲಿ ನಡೆದಿರುವ ಹಿಂಸಾಚಾರದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಹಾಗೂ ೧೦೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಎರಡು ಕಡೆಯ ೭ ಜನರು ಸಾವನ್ನಪ್ಪಿದ್ದಾರೆ ಎಂದು ದಾವೆ ಮಾಡಿದ್ದಾರೆ. ಈ ಗುಂಪಿನಲ್ಲಿ ಒಂದು ಗುಂಪು ಭಾರತದಲ್ಲಿನ ತಬಲಿಗಿ ಜಮಾತಿನ ಮುಖ್ಯಸ್ಥ ಮೌಲಾನಾ ಸಾದ್ ಇವರದ್ದಾಗಿದ್ದು ಇನ್ನೊಂದು ಗುಂಪು ಬಾಂಗ್ಲಾದೇಶದಲ್ಲಿನ ಮೌಲಾನಾ ಜುಬೇರ್ ಇವರದ್ದಾಗಿತ್ತು. ಆಡಳಿತವು ಇಲ್ಲಿ ಸೈನ್ಯ ನೇಮಕಗೊಳಿಸಿದೆ.

೧. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೌಲಾನಾ ಸಾದ ಇವರ ಬೆಂಬಲಿಗರು ಶುಕ್ರವಾರ ಡಿಸೆಂಬರ್ ೨೦ ರಿಂದ ಟೊಂಗಿ ಮೈದಾನದಲ್ಲಿ ೫ ದಿನದ ಇಜ್ತಿಮಾ ಆಯೋಜನೆ ಮಾಡುವವರಿದ್ದಾರೆ. ಮೌಲಾನಾ ಜುಬೇರ್ ಇವರ ಬೆಂಬಲಿಗರಿಗೆ ಜಮಾತಿದವರು ಇಲ್ಲಿ ಇಜ್ತಿಮಾ ಆಯೋಜಿಸಬಾರದು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಜುಬೇರ್ ಇವರ ಬೆಂಬಲಿಗರಿಂದ ಇಜ್ತಿಮಾ ಮೈದಾನದ ಮೇಲೆ ಮೊದಲೇ ಹಿಡಿದ ಪಡೆದಿದ್ದರು. ಡಿಸೆಂಬರ್ ೧೭ ರಂದು ಬೆಳಿಗ್ಗೆ ಮೌಲಾನ ಸಾದ ಇವರ ಬೆಂಬಲಿಗರು ಮೈದಾನಕ್ಕೆ ತಲುಪಿದ ನಂತರ ಹೊಡೆದಾಟ ಆರಂಭವಾಯಿತು.

೨. ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಇವರು ಬಾಂಗ್ಲಾದೇಶ ತೊರೆದ ನಂತರ ಜುಬೇರ್ ಬೆಂಬಲಿಗರು ಇಲ್ಲಿ ಇಜ್ತಿಮಾ ಎರಡು ಹಂತದಲ್ಲಿ ಮಾಡುವ ಬದಲು ಒಂದೇ ಹಂತದಲ್ಲಿ ಮಾಡುಲು ಆಗ್ರಹಿಸುತ್ತಿದ್ದಾರೆ. ಮುಸಲ್ಮಾನರಲ್ಲಿ ಬಿರುಕು ಮೂಡಿಸುವುದಕ್ಕಾಗಿ ಹಸಿನಾ ಇವರ ಪಕ್ಷವು ಎರಡು ಹಂತದಲ್ಲಿ ಇಜ್ತಿಮಾ ಮಾಡಲು ಆರಂಭಿಸಿದ್ದರೆಂದು ಜುಬೇರ್ ಬೆಂಬಲಿಗರು ಆರೋಪಿಸಿದ್ದಾರೆ. ಹಾಗೂ ಮೌಲಾನ ಸಾದ ಇವರ ಬೆಂಬಲಿಗರು ಭಾರತದ ದಲ್ಲಾಳಿಗಳಾಗಿದ್ದಾರೆ’, ಎಂದು ಅವರು ಆರೋಪಿಸಿದ್ದಾರೆ.