ಹಿಂದೂ ರಾಷ್ಟ್ರದ ಉದ್ಘೋಷಣೆಯೊಂದಿಗೆ ಮುಧೋಳದಲ್ಲಿ ಜರುಗಿದ ಹಿಂದೂ ರಾಷ್ಟ್ರ ಅಧಿವೇಶನ

ಮುಧೋಳ: ಸ್ವಾತಂತ್ರ್ಯಪೂರ್ವದಲ್ಲಿ ಅಖಂಡವಾಗಿದ್ದ ಭಾರತವನ್ನು ೧೯೪೭ರ ನಂತರ ಧರ್ಮದ ಆಧಾರದಲ್ಲಿ ಇಬ್ಬಾಗ ಮಾಡಿದಾಗ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಯಿತು. ಆದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲಿಲ್ಲ ಅಷ್ಟೇ ಅಲ್ಲದೇ ೧೯೭೬ ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಸಂವಿಧಾನದಲ್ಲಿ ಜಾತ್ಯತೀತವಾದ ಮತ್ತು ಸಮಾಜವಾದವೆಂಬ ಎರಡು ಶಬ್ದಗಳನ್ನು ಸೇರಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದರು.

ಈಗ ಅದೇ ಸಂವಿಧಾನದಲ್ಲಿ ಜಾತ್ಯತೀತವೆಂಬ ಶಬ್ದ ತೆಗೆದು ಹಿಂದೂ ರಾಷ್ಟ್ರದ ಶಬ್ದವನ್ನು ಸೇರಿಸಿ ಪುನಃ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ನಾವೆಲ್ಲರೂ ಕಾನೂನುಮಾರ್ಗದಲ್ಲಿ ಹೋರಾಟ ಮಾಡಬೇಕೆಂದು ನ್ಯಾಯವಾದಿ ಬಲದೇವ ಸಣ್ಣಕ್ಕಿಯವರು ಹೇಳಿದರು. ಅವರು ಡಿಸೆಂಬರ್ ೧೭ ರಂದು ಮುಧೋಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಹಿಂದೂ ರಾಷ್ಟ್ರ ಅಧಿವೇಶನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ನ್ಯಾಯವಾದಿ ಬಲದೇವ ಸಣ್ಣಕ್ಕಿ, ವೇದಮೂರ್ತಿ ಶ್ರೀ. ದುಂಡಯ್ಯ ಶಂಕರಯ್ಯ ಹೀರೆಮಠ(ಶ್ರೀ ದುರ್ಗಾಪರಮೇಶ್ವರಿ ಆಶ್ರಮ, ಹನುಮಾನ ನಗರ ಹುಲ್ಯಾಳ, ಜಮಖಂಡಿ), ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ (ವಿಶ್ವಸ್ಥರು ಚಿಂಚಲಿ ಶ್ರೀ ಮಾಯಕ್ಕ ದೇವಸ್ಥಾನ) ಮತ್ತು ಶ್ರೀ. ಗುರುಪ್ರಸಾದ ಗೌಡ (ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ) ಇವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.
ಹಿಂದೂ ರಾಷ್ಟ್ರದ ಸೂರ್ಯ ಉದಯಿಸುತ್ತಿದ್ದಾನೆಂಬುದು ಈ ಅಧಿವೇಶನದಿಂದ ಅನುಭವಕ್ಕೆ ಬರುತ್ತಿದೆ ! – ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ

ನಮ್ಮ ಧರ್ಮದಲ್ಲಿ ಪರಮೇಶ್ವರಿ ಶಕ್ತಿಯಿದೆ, ಮೆಸಪಟೋಮಿಯಾದಂತಹ ಅನೇಕ ಸಂಸ್ಕೃತಿಗಳು ಇತಿಹಾಸದ ಪುಟಗಳಿಂದಲೇ ಅಳಿಸಿ ಹೋದವು. ಜಗತ್ತಿನ ಅನೇಕ ಸಂಸ್ಕೃತಿಗಳು ನಾಶವಾದರೂ ಸಹ ನಮ್ಮ ಸಂಸ್ಕೃತಿ ಇನ್ನೂ ಜೀವಂತವಾಗಿಯೇ ಇದೆ. ಭಾರತದಲ್ಲಿ ಜಗತ್ತಿನ ಎಲ್ಲಾ ಪಂಥೀಯರು ಇದ್ದಾರೆ. ಎಲ್ಲರನ್ನು ಗೌರವಿಸುವ ನಮ್ಮ ಮೇಲೆ ಆಘಾತಗಳು ಆಗುತ್ತಿವೆ. ಅಂತಹ ಸಮಯದಲ್ಲಿ ಹಿಂದೂ ರಾಷ್ಟ್ರದ ಸೂರ್ಯ ಉದಯಿಸುತ್ತಿದ್ದಾನೆಂಬುದು ಈ ಅಧಿವೇಶನದಿಂದ ಅನುಭವಕ್ಕೆ ಬರುತ್ತಿದೆ
ನಾವು ಪ್ರತಿಷ್ಠೆಯನ್ನು ಬಿಟ್ಟು ಸ್ವಂತದ ಉಳಿವಿಗಾಗಿ ಸಂಘಟಿತರಾಗೋಣ ! – ವೇದಮೂರ್ತಿ ಶ್ರೀ. ದುಂಡಯ್ಯ ಶಂಕರಯ್ಯ ಹೀರೆಮಠ

ನಮ್ಮ ಭೂಮಿಯಲ್ಲಿ ಅಪಾರ ಸಂಪತ್ತಿದೆ. ಈ ಸಂಪತ್ತು ಮತ್ತು ಸಂಸ್ಕಾರಗಳನ್ನು ಲೂಟಿ ಮಾಡಲು ನಿರಂತರ ಪ್ರಯತ್ನಗಳಾಗುತ್ತಿವೆ. ಪ್ರಸ್ತುತ ಸಮಯದಲ್ಲಿ ನಾವೆಲ್ಲರೂ ಸಂಘಟಿತರಾಗಿರುವುದು ಬಹಳ ಮಹತ್ವದ್ದಿದೆ. ಕಾರಣ ಸಂಘಟನೆಯಲ್ಲಿ ಶಕ್ತಿಯಿದೆ. ಆದರೆ ನಮ್ಮ ಮರ್ಯಾದೆ, ಗೌರವ ಎಂಬ ಪ್ರತಿಷ್ಠೆಯನ್ನಿಟ್ಟುಕೊಂಡು ಹಿಂದೂ ರಾಷ್ಟ್ರಕ್ಕಾಗಿ ಹೋರಾಡಲು ನಾವು ಮುಂದೆ ಬರುತ್ತಿಲ್ಲ, ಅದೇ ನಮಗೆ ಮುಳುವಾಗಿದೆ. ಈಗ ನಾವು ಪ್ರತಿಷ್ಠೆಯನ್ನು ಬಿಟ್ಟು ಸ್ವಂತದ ಉಳಿವಿಗಾಗಿ ಸಂಘಟಿತರಾಗೋಣ.
ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ ! – ಶ್ರೀ. ಗುರುಪ್ರಸಾದ ಗೌಡ

ಎಲ್ಲಾ ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರದ ವಿಚಾರ ಬಂದಾಗ ತಮ್ಮ ತಮ್ಮ ಸಂಘಟನೆಯನ್ನು ಬದಿಗಿಟ್ಟು ಹಿಂದೂ ರಾ?ದ ಸ್ಥಾಪನೆಯ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಉದ್ಘೋಷಣೆಯೊಂದಿಗೆ ಕಳೆದ ೧೨ ವರ್ಷಗಳಿಂದ ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಿ ೮೦೦ ಕ್ಕೂ ಹೆಚ್ಚು ಹಿಂದೂ ಸಂಘಟನೆ ಪ್ರತಿನಿಧಿ ಮತ್ತು ಹಿಂದುತ್ವನಿಷ್ಠರನ್ನು ಒಟ್ಟಾಗಿ ರಾಷ್ಟ್ರಾದ್ಯಾಂತ ಹಿಂದೂ ರಾಷ್ಟ್ರಕ್ಕಾಗಿ ಹೋರಾಟ ಪ್ರಾರಂಭವಾಗಿದೆ. ೨೦೨೩ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಯಾವುದೇ ಧರ್ಮವನ್ನು ಹೀಯಾಳಿಸಿದವರ ಮೇಲೆ ಸುಮೋಟೋ ಕೇಸ್ ದಾಖಲಿಸಬೇಕೆಂದು ಆದೇಶಿಸಿದರೂ ರಾಜಾರೋಷವಾಗಿ ಸನಾತನ ಧರ್ಮವನ್ನು ನಾಶ ಮಾಡಬೇಕೆನ್ನುವ ಉದಯ ನಿಧಿ ಸ್ಟಾಲಿನ್ ಮತ್ತು ಅರ್ಬನ್ ನಕ್ಸಲರ ಮೇಲೆ ಯಾವುದೇ ಕಾನೂನು ಕ್ರಮ ಆಗಲಿಲ್ಲ, ದೇಶದ ಭೂಮಿಯನ್ನು ಕಬಳಿಸುವ ವಕ್ಫ್ ಮಂಡಳಿಯ ಲ್ಯಾಂಡ್ ಜಿಹಾದ್, ಹಲಾಲ ಆರ್ಥಿಕ ಷಡ್ಯಂತ್ರ, ದೇವಸ್ಥಾನಗಳ ಸರಕಾರೀಕರಣದಿಂದ ಪಾವಿತ್ರ್ಯತೆ ನಾಶವಾಗುತ್ತಿದೆ. ಇದಕ್ಕೆಲ್ಲಾ ಪರಿಹಾರ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ.

ಈ ಕಾರ್ಯಕ್ರಮದಲ್ಲಿ ವಿಜಯಪುರ, ನಿಡಗುಂದಿ, ಬಾದಾಮಿ, ಮುಧೋಳ, ಮಹಾಲಿಂಗಪೂರ, ಜಮಖಂಡಿ, ರಬಕವಿ ಬನಹಟ್ಟಿ, ರಾಯಬಾಗ, ಗೋಕಾಕ, ಕಾಗೋಡದಿಂದ ಅನೇಕ ಹಿಂದೂ ಸಂಘಟನೆಯ ಪ್ರತಿನಿಧಿಗಳು ಮತ್ತು ಹಿಂದುತ್ವನಿಷ್ಟರು, ನ್ಯಾಯವಾದಿಗಳು ಸಹಭಾಗಿಯಾಗಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”