ಬರೇಲಿ (ಉತ್ತರ ಪ್ರದೇಶ)ಯಲ್ಲಿ 250 ವರ್ಷಗಳಷ್ಟು ಪ್ರಾಚೀನ ದೇವಸ್ಥಾನವನ್ನು ಮುಸಲ್ಮಾನರಿಂದ ಅಕ್ರಮವಾಗಿ ನಿಯಂತ್ರಣ

ದೇವಸ್ಥಾನದ ಮೇಲಿನ ನಿಯಂತ್ರಣವನ್ನು ತೆಗೆದು ಹಿಂದೂಗಳ ವಶಕ್ಕೆ ನೀಡುವಂತೆ ಸ್ಥಳೀಯ ಹಿಂದೂಗಳ ಬೇಡಿಕೆ

ಬರೇಲಿ (ಉತ್ತರಪ್ರದೇಶ) – ಬರೇಲಿ ಕೋಟೆಯ ಹತ್ತಿರದ ಕಟಘರ ಪ್ರದೇಶದಲ್ಲಿ ಸುಮಾರು 250 ವರ್ಷಗಳಷ್ಟು ಹಳೆಯದಾಗಿರುವ ಗಂಗಾ ಮಹಾರಾಣಿ ದೇವಸ್ಥಾನವನ್ನು ಮುಸಲ್ಮಾನರು ಕಬಳಿಸಿದ್ದಾರೆಂದು ಹಿಂದೂಗಳು ಆರೋಪಿಸುತ್ತಿದ್ದು, ಅದರ ನಿಯಂತ್ರಣದಿಂದ ತೆಗೆದು ದೇವಸ್ಥಾನವನ್ನು ಹಿಂದೂಗಳ ವಶಕ್ಕೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

1. 250 ವರ್ಷಗಳ ಹಿಂದೆ ತಮ್ಮ ಪೂರ್ವಜರು ಗಂಗಾ ಮಹಾರಾಣಿ ದೇವಸ್ಥಾನವನ್ನು ನಿರ್ಮಿಸಿದ್ದರು ಎಂದು ಕಟಘರ ನಿವಾಸಿ ನರೇಂದ್ರ ಸಿಂಗ್ ಹೇಳಿಕೊಂಡಿದ್ದಾರೆ. 1905ರ ದಾಖಲೆಗಳಲ್ಲಿ ಈ ದೇವಸ್ಥಾನವನ್ನು ದಾಖಲಿಸಲಾಗಿದೆ. 1950ರ ವರೆಗೆ ಅಲ್ಲಿ ಪೂಜೆ ನಡೆಯುತ್ತಿತ್ತು. ಆಗಿನ ಅರ್ಚಕನು ದೇವಸ್ಥಾನದಲ್ಲಿ ಒಂದು ಕೋಣೆಯನ್ನು ಅವರು ವಾಹಿದ್ ಅಲಿ ಎಂಬ ಮುಸ್ಲಿಂನನ್ನು ದೇವಸ್ಥಾನದಲ್ಲಿ ಕಾವಲುಗಾರನೆಂದು ನೇಮಿಸಿದ ಒಂದು ಸಮಿತಿಗೆ ಬಾಡಿಗೆಯ ಮೇಲೆ ನೀಡಿದ್ದನು, ಅವನೇ ದೇವಸ್ಥಾನಕ್ಕೆ ಬರುವ ಭಕ್ತರನ್ನು ಪ್ರವೇಶಿಸದಂತೆ ತಡೆದನು. ಹಾಗೆಯೇ ದೇವಸ್ಥಾನದ ಮೂರ್ತಿಗಳನ್ನು ಅಲ್ಲಿಂದ ತೆಗೆದನು.

2. 1976ರಿಂದ ಇಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾವಲುಗಾರ ವಾಹಿದ್ ಅಲಿ ಪುತ್ರ ಸಾಜಿದ್ ಹೇಳಿಕೆ ನೀಡಿದ್ದಾನೆ. ಇಲ್ಲಿ ನನ್ನ ತಂದೆ 40 ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದರು. ಅಂದಿನಿಂದ ಅವರು ಇಲ್ಲಿ ವಾಸಿಸುತ್ತಿದ್ದರು; ಆದರೆ ಕಳೆದ 3-4 ದಿನಗಳಿಂದ ಸ್ಥಳೀಯ ನಿವಾಸಿಗಳಾದ ರಾಕೇಶ ಸಿಂಗ್, ಅವರ ಸಹೋದರ ನರೇಂದ್ರ ಮತ್ತು ಇತರ ಕುಟುಂಬ ಸದಸ್ಯರು ಆಸ್ತಿಯ ಬಗ್ಗೆ ದಾವೆ ಮಾಡುತ್ತಿದ್ದಾರೆ’, ಎಂದು ಹೇಳಿದ್ದಾನೆ.

3. ಸರಕಾರಿ ದಾಖಲೆಗಳಲ್ಲಿ ಉಲ್ಲೇಖಿಸಿದಂತೆ ವಾಹಿದ ಅಲಿ ದೇವಸ್ಥಾನವನ್ನು ವಶಕ್ಕೆ ಪಡೆದನು. ದೇವಸ್ಥಾನದಲ್ಲಿ ಶಿವಲಿಂಗ ಮತ್ತು ಶಿವ ಪರಿವಾರವನ್ನು ಪ್ರತಿಷ್ಠಾಪಿಸಲಾಗಿತ್ತು. ಕ್ರಮೇಣ ಇಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಯಿತು. ಪರಿಣಾಮವಾಗಿ, ಹಿಂದೂಗಳು ಓಡಾಟ ಕಡಿಮೆಯಾಯಿತು ಮತ್ತು ನಂತರ ಪೂಜೆಯೂ ನಿಂತು ಹೋಯಿತು.

ಸಂಪಾದಕೀಯ ನಿಲುವು

ಉತ್ತರಪ್ರದೇಶ ಸರಕಾರವು ಈಗ ಇಂತಹ ದೇವಸ್ಥಾನಗಳನ್ನು ಕಂಡು ಹಿಡಿಯಲು ಸ್ವತಂತ್ರ ಇಲಾಖೆಯನ್ನು ಸ್ಥಾಪಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !