ತಾಪಮಾನ ಹೆಚ್ಚಳದಿಂದ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಸಾಮೂಹಿಕ ಆತ್ಮಹತ್ಯೆಯ ದಾರಿಯಲ್ಲಿ ! – ಸಂಯುಕ್ತ ರಾಷ್ಟ್ರದ ಎಚ್ಚರಿಕೆ

ನ್ಯೂಯಾರ್ಕ್ (ಅಮೇರಿಕಾ) – ಜಾಗತಿಕ ತಾಪಮಾನ ಹೆಚ್ಚಿರುವುದರಿಂದ ಸಂಪೂರ್ಣ ಜಗತ್ತಿನಲ್ಲಿ ಸಂಕಷ್ಟ ನಿರ್ಮಾಣವಾಗಿದೆ. ಯುರೋಪ ಖಂಡ ಹಾಗೂ ಅಮೆರಿಕಾ, ಚೀನಾದಂತಹ ಅನೇಕ ದೇಶಗಳು ಭಯಂಕರ ತಾಪಮಾನ ಏರಿಕೆಯಿಂದ ಕಂಗಾಲಾಗಿದ್ದಾರೆ. ಫ್ರಾನ್ಸ್, ಸ್ಪೇನ್, ಪೋರ್ಚುಗಲ ಸಹಿತ ೧೦ ದೇಶಗಳಲ್ಲಿ ಕಾಡ್ಗಿಚ್ಚಿನಿಂದ ಉಷ್ಣತೆಯ ತೀವ್ರತೆಯಲ್ಲಿ ಭಯಾನಕ ಹೆಚ್ಚಳವಾಗಿದೆ. ಬ್ರಿಟನಿನ ತಾಪಮಾನ ೪೦ ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ. ಆದ್ದರಿಂದ ದೇಶದಲ್ಲಿ ಮೊದಲು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ. ಕಾಡ್ಗಿಚ್ಚಿನಿಂದ ಎಲ್ಲೆಡೆ ಹೆಚ್ಚಾಗಿರುವ ಉಷ್ಣತೆಯ ತೀವ್ರತೆಯಿಂದ ಉಸಿರು ಕಟ್ಟಿರುವ ಅರ್ಧದಷ್ಟು ಜನಸಂಖ್ಯೆ ಸಾಮೂಹಿಕ ಆತ್ಮಹತ್ಯೆಯ ದಾರಿಯಲ್ಲಿದೆ, ಎಂಬ ಗಂಭೀರ ಎಚ್ಚರಿಕೆ ಸಂಯುಕ್ತ ರಾಷ್ಟ್ರ ನೀಡಿದೆ.

ಕಳೆದ ೪೬ ವರ್ಷಗಳಲ್ಲೇ ಭಯಂಕರ ವೇಗದಿಂದ ಹೆಚ್ಚುತ್ತಿರುವ ಉಷ್ಣತೆಯ ದಾಹದಿಂದ ಜಗತ್ತು ಒದ್ದಾಡುತ್ತಿದೆ. ಹೆಚ್ಚುತ್ತಿರುವ ಉಷ್ಣತೆಗೆ ಕಾಡ್ಗಿಚ್ಚು ಒಂದು ಪ್ರಮುಖ ಕಾರಣ ಇರುವುದಾಗಿ ಹೇಳಲಾಗುತ್ತಿದೆ. ಸ್ಪೇನ್ ನಲ್ಲಿ ೩೬ ಸ್ಥಳಗಳಲ್ಲಿ ಕಾಡ್ಗಿಚ್ಚು ಹಬ್ಬಿದೆ. ಇದರಲ್ಲಿ ೨೨ ಸಾವಿರ ಹೆಕ್ಟರಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ವನಸಂಪತ್ತು ಸುಟ್ಟು ಭಸ್ಮವಾಗಿದೆ. ಪರಿಣಾಮ ದಕ್ಷಿಣ ಪಶ್ಚಿಮ ಸ್ಪೆನ್ ನಲ್ಲಿ ತಾಪಮಾನ ೪೪ ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ. ಉಷ್ಣತೆಯ ತೀವ್ರತೆಯಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ.

ಸಂಪಾದಕೀಯ ನಿಲುವು

ಪ್ರಗತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡಿರುವುದರ ಪರಿಣಾಮ ಇದು. ನಿಸರ್ಗದ ಮೇಲೆ ಆಘಾತ ಮಾಡಿದರೆ ನಿಸರ್ಗ ಅದರ ಪರಿಣಾಮ ತೋರಿಸುತ್ತದೆ ಎಂದು ಮನುಷ್ಯನ ಗಮನಕ್ಕೆ ಬಂದು ನಿಸರ್ಗಕ್ಕೆ ಅನುಕೂಲವಾಗುವಂತಹ ವರ್ತನೆ ಮಾಡಿದರೆ ಅದೇ ಸುದಿನ!