ನವದೆಹಲಿ – ಕೇಂದ್ರ ಸಚಿವ ನಿತಿನ ಗಡಕರಿ ಇವರು ‘ಲಿವ್ ಇನ್ ರಿಲೇಶನ್ ಶಿಪ್’ (ವಿವಾಹ ಮಾಡಿಕೊಳ್ಳದೇ ಒಟ್ಟಾಗಿ ಇರುವುದು) ಮತ್ತು ಸಲಿಂಗ ವಿವಾಹ ಸಮಾಜ ನಿಯಮದ ವಿರುದ್ಧವಾಗಿದೆ ಮತ್ತು ಅದರಿಂದ ಸಾಮಾಜಿಕ ವ್ಯವಸ್ಥೆ ಹದಗೆಡಬಹುದು’, ಎಂದು ಹೇಳಿದರು.
ನಿತಿನ ಗಡಕರಿ ಇವರು ಒಂದು ಸಂದರ್ಶನದಲ್ಲಿ, ಸಮಾಜಕ್ಕೆ ಕೆಲವು ನಿಯಮಗಳಿರುತ್ತವೆ ಮತ್ತು ಅದರ ಪಾಲನೆ ಮಾಡಬೇಕು. ಸಲಿಂಗ ವಿವಾಹದಿಂದ ಸಾಮಾಜಿಕ ವ್ಯವಸ್ಥೆ ಪತನವಾಗುತ್ತದೆ. ‘ಲಿವ್ ಇನ್ ರಿಲೇಶನ್ ಶಿಪ್’ ಸಂಬಂಧ ಒಳ್ಳೆಯದಲ್ಲ, ಎಂದು ಕೂಡ ಅವರು ಹೇಳಿದರು. ೨೦೨೩ ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಸಲಿಂಗ ವಿವಾಹಕ್ಕೆ ಕಾನೂನ ರೀತಿಯಲ್ಲಿ ಮಾನ್ಯತೆ ನೀಡಲು ನಿರಾಕರಿಸಿತ್ತು.