ಪೊಲೀಸರಿಂದ ಸ್ವಚ್ಛಗೊಳಿಸಿ, ಪೂಜೆ ಪ್ರಾರಂಭ !
ಅಲಿಗಢ (ಉತ್ತರ ಪ್ರದೇಶ) – ಇಲ್ಲಿನ ಮುಸ್ಲಿಂ ಬಾಹುಳ್ಯವಿರುವ ಸರಾಯ ರೆಹಮಾನ ಪ್ರದೇಶದಲ್ಲಿ ಡಿಸೆಂಬರ್ 18 ರಂದು 50 ವರ್ಷಕ್ಕೂ ಹೆಚ್ಚು ಹಳೆಯದಾದ ಶಿವನ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನ ಹಲವು ವರ್ಷಗಳಿಂದ ಮುಚ್ಚಲಾಗಿತ್ತು. ಈ ವಿಷಯ ತಿಳಿಯುತ್ತಲೇ, ಅಖಿಲ ಭಾರತೀಯ ಕರಣಿ ಸೇನಾ ಮತ್ತು ಬಜರಂಗದಳದ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ದೇವಸ್ಥಾನವನ್ನು ತೆರೆಯಲು ಪ್ರಯತ್ನಿಸಿದರು. ಈ ಮಾಹಿತಿ ಸಿಕ್ಕ ತಕ್ಷಣ ಪೊಲೀಸರೂ ಅಲ್ಲಿಗೆ ತಲುಪಿದರು. ಆ ಸಮಯದಲ್ಲಿ ಸ್ವಲ್ಪ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನವನ್ನು ತೆರೆದು ಸ್ವಚ್ಛಗೊಳಿಸಲಾಗಿದೆ ಎಂದು ಬನ್ನಾದೇವಿ ಪೊಲೀಸ್ ಠಾಣಾಧಿಕಾರಿ ಪಂಕಜ್ ಮಿಶ್ರಾ ತಿಳಿಸಿದ್ದಾರೆ. ‘ದೇವಸ್ಥಾನಕ್ಕೆ ಭದ್ರತೆ ಒದಗಿಸಲಾಗುವುದು ಮತ್ತು ಇಲ್ಲಿ ಪೂಜೆ ನಿಲ್ಲಿಸುವುದಿಲ್ಲ’ ಎಂದು ಭರವಸೆ ನೀಡಿದರು. ಅಲಿಗಢ ಪೊಲೀಸ್ ಅಧೀಕ್ಷಕರಾದ ಮೃಗಾಂಕ್ ಪಾಠಕ ಮಾತನಾಡಿ, ದೇವಸ್ಥಾನದ ಮೇಲೆ ಅಕ್ರಮ ನಿಯಂತ್ರಣ ಹೊಂದಿರುವ ಬಗ್ಗೆ ದೂರು ಸ್ವೀಕರಿಸಲಾಗಿದೆ ಈ ಬಗ್ಗೆ ತನಿಖೆ ನಡೆಸಿ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದಾರೆ.
ಶಿವಲಿಂಗ ಧ್ವಂಸ ! – ವಿಶ್ವ ಹಿಂದೂ ಪರಿಷತ್
ವಿಶ್ವ ಹಿಂದೂ ಪರಿಷತ್‌ನ ಅಲಿಗಢ ಜಿಲ್ಲಾ ಪ್ರಚಾರ ಮುಖ್ಯಸ್ಥ ಪ್ರತೀಕ ರಘುವಂಶಿ ಮಾತನಾಡಿ, ಇಲ್ಲಿನ ದೇವಸ್ಥಾನದ ಮೂರ್ತಿಯನ್ನು ಈ ಹಿಂದೆಯೇ ಧ್ವಂಸಗೊಳಿಸಿ ಶಿವಲಿಂಗವನ್ನು ಹೂಳಲಾಗಿದೆ’, ಎಂದು ಹೇಳಿದರು. ಈ ವಿಷಯ ತಿಳಿದ ತಕ್ಷಣ ಹಿಂದೂ ಸಂಘಟನೆಯ ಜನರು ದೇವಸ್ಥಾನದಲ್ಲಿನ ಕಸದ ರಾಶಿಯನ್ನು ತೆಗೆದುಹಾಕಿದಾಗ ಮತ್ತು ಅಲ್ಲಿ ಶಿವಲಿಂಗ ಪತ್ತೆಯಾಗಿದೆ. ಶುಚಿಗೊಳಿಸಿದ ನಂತರ ಇಲ್ಲಿ ವಿಧಿವತ್ತಾಗಿ ಪೂಜೆ ನೆರವೇರಿಸಲಾಯಿತು.
ಈ ಪ್ರದೇಶದಲ್ಲಿ ಹಿಂದೆ ಹಿಂದೂ ಕುಟುಂಬಗಳೂ ವಾಸವಾಗಿದ್ದವು; ಆದರೆ ಕಾಲಾಂತರದಲ್ಲಿ ಮನೆಗಳನ್ನು ಮಾರಿ ಇಲ್ಲಿಂದ ಹೊರಟು ಹೋಗಿದ್ದಾರೆ. ಅದರ ನಂತರ ಈ ದೇವಸ್ಥಾನವನ್ನು ಮುಸ್ಲಿಮರು ವಶಕ್ಕೆ ಪಡೆದರು’, ಎಂದು ಸ್ಥಳೀಯರು ಹೇಳುತ್ತಾರೆ.
ಬರೇಲಿಯಲ್ಲಿ ಮುಸ್ಲಿಮರ ಹಿಡಿತದಲ್ಲಿ ಇನ್ನೂ 15 ದೇವಸ್ಥಾನಗಳು ! – ಕರಣಿ ಸೇನಾ
ಕರಣಿ ಸೇನೆಯ ಪ್ರದೇಶಾಧ್ಯಕ್ಷ ಜ್ಞಾನೇಂದ್ರ ಸಿಂಗ ಚೌಹಾಣ ಮಾತನಾಡಿ, ಈ ದೇವಸ್ಥಾನವನ್ನು ವರ್ಷಗಟ್ಟಲೆ ಬೇರೆಯವರು ಹಿಡಿತದಲ್ಲಿಟ್ಟುಕೊಂಡಿದ್ದು ಇಲ್ಲಿ ಯಾವುದೇ ಪೂಜೆ ನಡೆಯುತ್ತಿಲ್ಲ. ದೇವಸ್ಥಾನದಲ್ಲಿರುವ ಮೂರ್ತಿಗಳಿಗೂ ಹಾನಿಯಾಗಿದೆ. ಕರಣಿ ಸೇನೆಯು ಮುಸ್ಲಿಮರ ಹಿಡಿತದಲ್ಲಿರುವ ಮಹಾನಗರದಲ್ಲಿನ ಸುಮಾರು 15 ದೇವಸ್ಥಾನಗಳನ್ನು ಗುರುತಿಸಿದೆ. ಈ ದೇವಸ್ಥಾನಗಳು ಶೀಘ್ರ ಮುಕ್ತಿ ದೊರೆಯಲಿದೆ’, ಎಂದು ಹೇಳಿದರು.