UP CM Yogi Adityanath Statement : ಸನಾತನ ಧರ್ಮದಿಂದಲೇ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ! – ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ದೇವಸ್ಥಾನಗಳನ್ನು ಧ್ವಂಸ ಮಾಡಿದವರ ಕುಟುಂಬಗಳು ನಾಶವಾದವು ಎಂದು ಉಲ್ಲೇಖಿಸಿದರು !

ಅಯೋಧ್ಯೆ (ಉತ್ತರ ಪ್ರದೇಶ) – ಕೆಲವೊಮ್ಮೆ ಕಾಶಿ ವಿಶ್ವನಾಥ, ಕೆಲವೊಮ್ಮೆ ಶ್ರೀರಾಮ ಜನ್ಮಭೂಮಿ, ಮಥುರಾ, ಸಂಭಲ್, ಹರಿಹರ ಭೂಮಿ ಮತ್ತು ಕೆಲವೊಮ್ಮೆ ಭೋಜ್‌ನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಅಪವಿತ್ರಗೊಳಿಸಲಾಗುತ್ತಿದೆ. ದೇವಸ್ಥಾನಗಳನ್ನು ಅಪವಿತ್ರಗೊಳಿಸಿದವರು, ಅವರ ಕುಟುಂಬಗಳು ನಾಶವಾದವು. ಔರಂಗಜೇಬನ ವಂಶಸ್ಥರು ಈಗ ರಿಕ್ಷಾಗಳನ್ನು ಓಡಿಸುತ್ತಿದ್ದಾರೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಸನಾತನ ಧರ್ಮದಿಂದ ಮಾತ್ರ ಸಾಧ್ಯ. ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಅದನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದರು. ಅವರು ಇಲ್ಲಿ ಒಂದು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಅದಕ್ಕೂ ಮುನ್ನ ಶ್ರೀರಾಮ ಮಂದಿರ ಹಾಗೂ ಹನುಮಾನ ಗಢಿಗೆ ತೆರಳಿ ದರ್ಶನ ಪಡೆದರು.

ಸನಾತನ ಧರ್ಮ ಸುರಕ್ಷಿತವಾಗಿದ್ದರೆ ಎಲ್ಲರೂ ಸುರಕ್ಷಿತರು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತು ಮುಂದುವರೆಸುತ್ತಾ, ವಿಶ್ವದಲ್ಲಿ ಮಾನವೀಯತೆ ಉಳಿಯಬೇಕಾದರೆ ಸನಾತನ ಧರ್ಮವನ್ನು ರಕ್ಷಿಸಬೇಕು. ಸನಾತನ ಧರ್ಮ ಸುರಕ್ಷಿತವಾಗಿದ್ದರೆ ಎಲ್ಲರೂ ಸುರಕ್ಷಿತರು. ಸನಾತನ ಧರ್ಮವು ಯಾವುದೇ ಸಮುದಾಯ ಅಥವಾ ಧರ್ಮವಲ್ಲ. ಅದರಲ್ಲಿ ಎಲ್ಲರ ಹಿತದ ಚರ್ಚೆಯಿದೆ. ಸನಾತನ ಧರ್ಮದಲ್ಲಿ ‘ವಸುಧೈವ ಕುಟುಂಬಕಂ’ (ಸಂಪೂರ್ಣ ಜಗತ್ತು ಒಂದು ಕುಟುಂಬವಾಗಿದೆ) ಎಂದು ಉಲ್ಲೇಖವಿದೆ. ಸನಾತನ ಧರ್ಮವು ಪ್ರಪಂಚದ ಪ್ರತಿಯೊಂದು ಜಾತಿ, ಮತ, ಧರ್ಮ ಮತ್ತು ಪಂಗಡದ ಜನರಿಗೆ ಆಪತ್ಕಾಲದಲ್ಲಿ ಆಶ್ರಯ ನೀಡಿದೆ’, ಎಂದು ಹೇಳಿದರು.

ಧಾರ್ಮಿಕ ಪರಂಪರೆಯನ್ನು ಮರೆಯುವುದರಿಂದ ಭೌತಿಕ ಅಭಿವೃದ್ಧಿಯಾಗಲು ಸಾಧ್ಯವಿಲ್ಲ !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡಿ, ಈ ಸೃಷ್ಟಿ ಶ್ರೀಹರಿಯ ಕೃಪೆಯಿಂದ ನಡೆಯುತ್ತಿದೆ. ಧಾರ್ಮಿಕ ಪರಂಪರೆಯನ್ನು ಮರೆಯುವುದರಿಂದ ಭೌತಿಕ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಧಾರ್ಮಿಕ ಪರಂಪರೆ ಮತ್ತು ಭೌತಿಕ ಅಭಿವೃದ್ಧಿ ಇವುಗಳಲ್ಲಿ ಸಮನ್ವಯ ಇರಬೇಕು. ಭಾರತದ ಪರಂಪರೆ ಅವರ ಇಷ್ಟ ದೇವತೆ, ಧಾರ್ಮಿಕ ಸ್ಥಳಗಳು ಹಾಗೂ ಮೌಲ್ಯಗಳನ್ನು ಆಧರಿಸಿದೆ. ಈ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದರೆ ಭಾರತ ಉಳಿಯುತ್ತದೆ’, ಎಂದು ಹೇಳಿದರು.