Supreme Court Judgement : ಮಹಿಳೆಯರಿಗಾಗಿ ಇರುವ ಕಾನೂನು ಪತಿಗೆ ಕಿರುಕುಳ ನೀಡುವುದಕ್ಕಾಗಿ ಅಲ್ಲ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಮಹಿಳೆಯರು, ಅವರಿಗಾಗಿ ರೂಪಿಸಲಾದ ಕಾನೂನು ಅವರ ಕಲ್ಯಾಣಕ್ಕಾಗಿ ಇರುವುದು ಹೊರತು ಪತಿಯನ್ನು ಬೆದರಿಸಲು, ಅವರ ಮೇಲೆ ಪ್ರಭಾವ ಬೀರಲು ಅಥವಾ ಅವರಿಗೆ ಕಿರುಕುಳ ನೀಡುವುದಕ್ಕಾಗಿ ಅಲ್ಲ, ಎಂಬುದು ಅವರು ಗಮನದಲ್ಲಿಟ್ಟುಕೊಳ್ಳಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಮನವಿಯಲ್ಲಿ ವಿಚಾರಣೆ ನಡೆಸುವಾಗ ನಿರೀಕ್ಷಣೆಯನ್ನು ಮಂಡಿಸಿದರು. ಆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಓರ್ವ ದಂಪತಿಯ ವಿಚ್ಛೇದನ ಪ್ರಕರಣದ ನಿರ್ಣಯ ನೀಡುವಾಗ ಅಂತಿಮ ಉಪಾಯ ಎಂದು ಪತಿಯು ಬೇರೆ ಆಗುವ ಪತ್ನಿಗೆ ಶಾಶ್ವತ ಜೀವನಾಂಶ ಎಂದು ೧೨ ಕೋಟಿ ರೂಪಾಯಿ ನೀಡಲು ಆದೇಶಿಸಿತು.

ಹಿಂದೂ ವಿವಾಹ ವ್ಯವಹಾರವಲ್ಲ !

ಈ ಪ್ರಕರಣದ ವಿಚಾರಣೆ ವೇಳೆ ಪತ್ನಿಯು, ಪತಿಯ ಭಾರತ ಸಹಿತ ಅಮೆರಿಕಾದಲ್ಲಿ ಕೂಡ ಅನೇಕ ವ್ಯವಸಾಯಗಳಿವೆ. ಅವರ ಬಳಿ ೫ ಸಾವಿರ ಕೋಟಿ ರೂಪಾಯಿ ಅಷ್ಟು ಆಸ್ತಿ ಇದೆ. ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡುವಾಗ ಆಕೆಗೆ ೫೦೦ ಕೋಟಿ ರೂಪಾಯಿ ಜೀವನಾಂಶ ಎಂದು ಕೊಟ್ಟಿದ್ದರು’, ಎಂದು ದಾವೆ ಮಾಡಿದ್ದರು.
ಅದಕ್ಕೆ ನ್ಯಾಯಾಲಯವು, ಪತಿ ಪತ್ನಿ ಬೇರೆ ಆಗುವುದು ಪ್ರಸ್ತುತ ಆರ್ಥಿಕ ಸ್ಥಿತಿಯ ಆಧಾರದಲ್ಲಿ ಅನಿಶ್ಚಿತ ಸಮಯಕ್ಕಾಗಿ ಆಧಾರ ನೀಡಲು ಬಾಧ್ಯವಿಲ್ಲ. ಹಿಂದೂ ವಿವಾಹ ಇದು ವ್ಯಹಾರ ಅಲ್ಲದೆ ಅದನ್ನು ಕುಟುಂಬದ ಅಡಿಪಾಯ ಎಂದು ನೋಡಲಾಗುತ್ತದೆ ಜೀವನಾಂಶ ಎಂದರೆ ಪತಿ-ಪತ್ನಿ ಇವರು ಬೇರೆ ಬೇರೆ ಆದ ನಂತರ ಆರ್ಥಿಕ ದೃಷ್ಟಿಯಿಂದ ಒಂದು ಹಂತದಲ್ಲಿ ತರುವ ಸಾಧನ ಅಲ್ಲ. ಬದಲಾಗಿ ಜೀವನಾಂಶ ವ್ಯವಸ್ಥೆಗೆ ಅವಲಂಬಿಸಿದ ಮಹಿಳೆಯು ಯೋಗ್ಯ ರೀತಿಯಲ್ಲಿ ಬದುಕು ಸಾಗಿಸುವುದಕ್ಕಾಗಿ ಮಾಡಲಾಗಿದೆ ಎಂದು ಹೇಳಿದೆ.