BJP MLC Ravi Arrested : ಭಾಜಪ ಶಾಸಕ ಸಿ.ಟಿ. ರವಿ ಬಂಧನ

  • ಮಹಿಳಾ ಸಚಿವೆಗೆ ವಿಧಾನ ಪರಿಷತ್ತಿನಲ್ಲಿ ‘ವೇಶ್ಯೆ’ ಎಂದು ಹೇಳಿದ ಆರೋಪ

  • ರವಿ ಇವರು ಆರೋಪವನ್ನು ತಳ್ಳಿ ಹಾಕುತ್ತಾ ‘ಜೈಲಿನಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ, ಅದಕ್ಕೆ ಕಾಂಗ್ರೆಸ್ ಮತ್ತು ಪೋಲಿಸರೇ ಹೊಣೆ’, ಎಂದು ಲಿಖಿತ ದೂರ ಸಲ್ಲಿಕೆ

  • ಷರತ್ತಿನ ಮೇರೆಗೆ ಸಿಟಿ ರವಿ ಇವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿನ ಮಹಿಳಾ ಮತ್ತು ಮಕ್ಕಳ ಬಾಲ ವಿಕಾಸ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಇವರನ್ನು ವಿಧಾನ ಪರಿಷತ್ತಿನ ಕಲಾಪದ ಸಮಯದಲ್ಲಿ ‘ವೇಶ್ಯೆ’ ಎಂದು ಹೇಳಿದ ಆರೋಪದಡಿಯಲ್ಲಿ ಭಾಜಪದ ವಿಧಾನ ಪರಿಷತ್ತಿನ ಶಾಸಕ ಸಿ.ಟಿ. ರವಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ರವಿ ಇವರು ತಮ್ಮ ಮೇಲಿನ ಆರೋಪ ತಿರಸ್ಕರಿಸಿದ್ದಾರೆ. ಅವರು, ‘ನಾನು ಮಹಿಳಾ ಸಚಿವರ ಬಗ್ಗೆ ಎಂದಿಗೂ ಇಂತಹ ಪದಗಳನ್ನು ಬಳಸಿಲ್ಲ’, ಎಂದು ಹೇಳಿದ್ದಾರೆ.

ರವಿ ಇವರು, ‘ಜೈಲಿನಲ್ಲಿ ನನಗೆ ಏನಾದರೂ ಆದರೆ ಅದಕ್ಕೆ ಕಾಂಗ್ರೆಸ್ ಮತ್ತು ಪೊಲೀಸರೇ ಹೊಣೆ’, ಎಂದು ಲಿಖಿತ ದೂರು ನೀಡುವಾಗ ಹೇಳಿದ್ದಾರೆ. ರವಿ ಇವರ ನ್ಯಾಯವಾದಿ ಚೇತನ್ ಇವರು, ‘ರವಿ ಇವರ ಹೇಳಿಕೆಯ ಪ್ರಕಾರ ಅವರ ಜೀವಕ್ಕೆ ಅಪಾಯವಿದೆ’, ಎಂದು ಹೇಳಿದರು.

ಷರತ್ತಿನ ಮೇರೆಗೆ ಸಿಟಿ ರವಿ ಇವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿಯಲ್ಲಿ ಬಂಧಿಸಲಾಗಿದ್ದ ಭಾಜಪದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಸಿಟಿ ರವಿ ಇವರು, ‘ಪೊಲೀಸರು ಅಕ್ರಮವಾಗಿ ಪ್ರಕರಣ ದಾಖಲಿಸಿದನ್ನು ಹಾಗೂ ಬಂಧಿಸಿದನ್ನು ಕೂಡಲೇ ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಈ ಮೇಲಿನ ಆದೇಶ ಹೊರಡಿಸಿದೆ. ಹಾಗೂ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.