ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನದ ಪೂ. ಸಂಭಾಜಿರಾವ್ ಭಿಡೆಗುರೂಜಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಮತ್ತು ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು !

ಕರಣಿ ಸೇನಾ ಮುಖ್ಯಸ್ಥ ಅಜಯಸಿಂಗ್ ಸೆಂಗರ್ ಅವರಿಂದ ಮುಖ್ಯಮಂತ್ರಿಯವರಿಗೆ ಮನವಿ ಮೂಲಕ ಆಗ್ರಹ !

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ ಅವರಿಗೆ ಮನವಿ ನೀಡುತ್ತಿರುವಾಗ ಶ್ರೀ. ಅಜಯ ಸಿಂಗ ಸೆಂಗರ

ನಾಗಪುರ, ಡಿಸೆಂಬರ 19 (ಸುದ್ದಿ.) – ಹಿಂದೂ ಧರ್ಮಜಾಗೃತಿಯ ಕಾರ್ಯ ಮಾಡುತ್ತಿರುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಸಂಸ್ಥಾಪಕ ಧರ್ಮವೀರ ಪೂ. ಸಂಭಾಜಿರಾವ ಭಿಡೆಗುರೂಜಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಮತ್ತು ‘ಭಾರತರತ್ನ’ ಪ್ರಶಸ್ತಿ ನೀಡಬೇಕು’, ಎಂದು ಮಹಾರಾಷ್ಟ್ರ ಸರಕಾರವು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕರಣಿ ಸೇನಾ ಮುಖ್ಯಸ್ಥ ಶ್ರೀ. ಅಜಯಸಿಂಗ್ ಸೆಂಗಾರ್ ಅವರು ಡಿಸೆಂಬರ್ 19 ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಮನವಿ ಸಲ್ಲಿಸಿದರು. ಅದಕ್ಕೆ ಮುಖ್ಯಮಂತ್ರಿ ಫಡ್ನವೀಸ್ ಅವರು ‘ಈ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆಂದು ಅಜಯಸಿಂಗ್ ಸೆಂಗರ್ ಅವರು ‘ಸನಾತನ ಪ್ರಭಾತ’ ದಿನಪತ್ರಿಕೆಯ ವರದಿಗಾರರೊಂದಿಗೆ ಮಾತನಾಡುತ್ತಾ. ಮಾಹಿತಿ ನೀಡಿದ್ದಾರೆ.

ಕಳೆದ 4 ದಿನಗಳಿಂದ ನಾಗಪುರದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಶ್ರೀ. ಅಜಯಸಿಂಗ ಸೆಂಗರ ಇವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಮನವಿಯನ್ನು ನೀಡಿದ್ದಾರೆ. ಶ್ರೀ. ಅಜಯಸಿಂಗ್ ಸೆಂಗರ್ ಮಾತನಾಡಿ, ‘ಹಿಂದೂ ಧರ್ಮಕ್ಕಾಗಿ ಹಗಲಿರುಳು ಶ್ರಮಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಪೂ. ಸಂಭಾಜಿರಾವ ಭಿಡೆಗುರೂಜಿ ಇಬ್ಬರೂ ಗೌರವಾನ್ವಿತ ವಂದನೀಯ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಲಕ್ಷಾಂತರ ಹಿಂದೂಗಳನ್ನು ಧರ್ಮಕಾರ್ಯ ಮಾಡಲು ಪ್ರೇರೇಪಿಸಿದರು. ಪೂ. ಸಂಭಾಜಿರಾವ ಭಿಡೆಗುರೂಜಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಮೇ 1ರಂದು ಮಹಾರಾಷ್ಟ್ರವು ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ನೀಡಬೇಕು ಹಾಗೂ ‘ಭಾರತ ರತ್ನ’ ಪ್ರಶಸ್ತಿ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು’, ಎಂದು ನಾನು ಮನವಿಯ ಮೂಲಕ ಆಗ್ರಹಿಸಿದ್ದೇನೆ ಎಂದು ಹೇಳಿದರು.