ಬಾಂಗ್ಲಾದೇಶದಲ್ಲಿ ಶಿವಮಂದಿರದಲ್ಲಿ ಶಿವನ ೨ ಮೂರ್ತಿಗಳನ್ನು ಧ್ವಂಸಗೊಳಿಸಿದ ಮತಾಂಧ ಯುವಕ !

ಮೈಜಡಿ ಮಾಸ್ಟರಪಾರಾ ಪ್ರದೇಶದ ಶಿವಮಂದಿರದ ಭಗವಾನ ಶಿವನ ಎರಡು ಮೂರ್ತಿಗಳನ್ನು ಭಗ್ನ ಮಾಡಿರುವ ಶಕೀಲ್‌ಉದ್ದಿನ್ ಎಂಬ ೧೮ ವರ್ಷದ ಮತಾಂಧನನ್ನು ಘಟನಾ ಸ್ಥಳದಲ್ಲೇ ಇಲ್ಲಿಯ ಹಿಂದುಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದರು.

ಪಾಕನಲ್ಲಿ ಶಿಯಾ ಮುಸಲ್ಮಾನರ ಮೊಹರಮ್ ನ ಮೆರವಣಿಗೆಯಲ್ಲಿ ಬಾಂಬ್ ಸ್ಫೋಟ : ೩ ಸಾವು, ಹಾಗೂ ೧೫ ಜನರಿಗೆ ಗಾಯ.

ಪಾಕ್‌ನ ಪಂಜಾಬ ಪ್ರಾಂತ್ಯದ ಬಹಾವನಗರದಲ್ಲಿ ಶಿಯಾ ಮುಸಲ್ಮಾನರು ಮೊಹರಮ್ ನಿಮಿತ್ತ ಮೆರವಣಿಗೆಯನ್ನು ನಡೆಸಿದ್ದರು, ಆ ಸಮಯದಲ್ಲಾದ ಬಾಂಬ್‌ಸ್ಫೋಟದಲ್ಲಿ ೩ ಮಂದಿ ಸಾವನ್ನಪ್ಪಿದ್ದು, ೧೫ ಮಂದಿ ಗಾಯಗೊಂಡಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತಿನ ಆಯೋಜನೆ !

‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ (ಡಿಸ್‌ಮಾಂಟಲಿಂಗ್ ಗ್ಲೋಬಲ್ ಹಿಂದುತ್ವ) ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತನ್ನು ಆಯೋಜಿಸಲಾಗಿದೆ. ಜಗತ್ತಿನಲ್ಲಿನ ೪೦ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು ಈ ಪರಿಷತ್ತನ್ನು ಆಯೋಜಿಸಲು ಮುಂದಾಳತ್ವ ವಹಿಸಿವೆ.

‘ಯೂಟ್ಯೂಬ್’ನಿಂದಲೂ ತಾಲಿಬಾನ್ ಖಾತೆಗಳ ಮೇಲೆ ನಿಷೇಧ

ಫೇಸ್‌ಬುಕ್ ನಂತರ, ಈಗ ‘ಯೂಟ್ಯೂಬ್’ ಕೂಡ ತಾಲಿಬಾನ್ ಖಾತೆಗಳನ್ನು ನಿಷೇಧಿಸಿದೆ. (‘ಫೇಸ್‌ಬುಕ್’ ಮತ್ತು ‘ಯುಟ್ಯೂಬ್’ನಲ್ಲಿ ಇನ್ನೆಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿ ನಾಯಕರ ಖಾತೆಗಳಿವೆ ಎಂಬುದು ಘೋಷಿಸುವ ಮೂಲಕ ಜಗತ್ತಿಗೆ ತಿಳಿಸಬೇಕು.

ಬಾಂಗ್ಲಾದೇಶದಿಂದಲೂ ತಾಲಿಬಾನ್ ಸರಕಾರಕ್ಕೆ ‘ಸ್ನೇಹಪರ’ ಬೆಂಬಲ !

ಅಫ್ಘಾನಿಸ್ತಾನದಲ್ಲಿನ ತಾಲಿಬಾನಿ ಸರಕಾರ ಇದು ಜನತೆಯ ಸರಕಾರವಾಗಿದೆ. ಆದ್ದರಿಂದ ಬಾಂಗ್ಲಾದೇಶವು ತಾಲಿಬಾನ್ ಸರಕಾರವನ್ನು ಸ್ವೀಕರಿಸುವುದು, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೋಮೆನ್ ಹೇಳಿದರು.

ಪಾಕಿಸ್ತಾನದಲ್ಲಿ ಜಿಹಾದಿ ಉಗ್ರಗಾಮಿ ಸಂಘಟನೆಯಿಂದ ಮಹಾರಾಜಾ ರಣಜೀತಸಿಂಹರವರ ಪ್ರತಿಮೆ ಧ್ವಂಸ

ಲಾಹೋರ ಕೋಟೆಯಲ್ಲಿರುವ ಅಶ್ವಾರೂಢ ಮಹಾರಾಜಾ ರಣಜೀತ ಸಿಂಹರ ಪ್ರತಿಮೆಯನ್ನು ಮತಾಂಧರು ಧ್ವಂಸಗೊಳಿಸಿದರು. ಪಾಕ್‌ನಲ್ಲಿ ನಿರ್ಬಂಧಕ್ಕೊಳಗಾಗಿರುವ ತಹರೀಕ-ಎ-ಲಬ್ಬೈಕ ಪಾಕಿಸ್ತಾನ ಎಂಬ ಉಗ್ರಗಾಮಿ ಸಂಘಟನೆಯು ಈ ಕೃತ್ಯವನ್ನು ಮಾಡಿದೆ.

ಕರ್ಕರೋಗ ಇದ್ದವರು ನೆಲಗಡಲೆ ಅತಿಯಾಗಿ ಸೇವಿಸುವುದರಿಂದ ಸಂಪೂರ್ಣ ಶರೀರದಲ್ಲಿ ಕರ್ಕರೋಗ ಹರಡುವ ಅಪಾಯ ಹೆಚ್ಚಾಗಬಹುದು ! – ಸಂಶೋಧಕರು

ಕರ್ಕರೋಗದ ರೋಗಿಗಳು ಅತಿಯಾಗಿ ನೆಲಗಡಲೆ ಸೇವಿಸಿದರೆ ಅವರ ಸಂಪೂರ್ಣ ಶರೀರದಲ್ಲಿ ಕರ್ಕರೋಗ ಹರಡುವ ಅಪಾಯ ಹೆಚ್ಚಾಗಬಹುದು, ಎಂದು ಇಂಗ್ಲೆಂಡಿನ ‘ಲಿವರ್‌ಪೂಲ್ ವಿಶ್ವವಿಧ್ಯಾಲಯದ ಸಂಶೋಧಕರಾದ ಲೂ-ಗ್ಯಾಂಗ್‌ಯೂರವರು ಹೇಳಿದ್ದಾರೆ.

‘ತಾಲಿಬಾನವು ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯಸ್ಥಾನವನ್ನಾಗಿ ಮಾಡಬಾರದು !’(ಅಂತೆ) – ತಾಲಿಬಾನ್ ಜೊತೆ ಸ್ನೇಹ ಸಂಬಂಧವನ್ನು ಸ್ಥಾಪಿಸಲು ಚೀನಾ ಟೊಳ್ಳು ಎಚ್ಚರಿಕೆ

ನೀವು (ತಾಲಿಬಾನ್) ಶಾಂತಿಯಿಂದ ರಾಜ್ಯ ಮಾಡಿ; ಆದರೆ ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯ ಸ್ಥಾನವನ್ನಾಗಿ ಮಾಡದಿರಿ, ಎಂದು ಟೊಳ್ಳು ಎಚ್ಚರಿಕೆಯನ್ನು ಚೀನಾವು ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿನ ಆಪತ್ಕಾಲಿನ ಸಭೆಯಲ್ಲಿ ಹೇಳಿದೆ.

‘ತಾಲಿಬಾನಿಗಳು ನಮಗೆ ಶಾಂತಿ ಮತ್ತು ಸುರಕ್ಷಿತತೆಯ ಆಶ್ವಾಸನೆಯನ್ನು ಕೊಟ್ಟಿದ್ದಾರೆ !’(ಅಂತೆ) – ಸಿಕ್ಖ ಸಮುದಾಯ

ತಾಲಿಬಾನಿಗಳ ಅಧಿಕಾರ ಬಂದಮೇಲೆ ಅಫ್ಘಾನಿಸ್ತಾನದಲ್ಲಿನ ಸಿಕ್ಖ ಸಮುದಾಯದ ಪ್ರತಿನಿಧಿಗಳು ತಾಲಿಬಾನಿಗಳ ಪ್ರತಿನಿಧಿಗಳನ್ನು ಭೇಟಿಯಾದರು. ಈ ಸಭೆಯ ನಂತರ, ‘ತಾಲಿಬಾನಿಗಳು ನಮಗೆ ಶಾಂತಿ ಮತ್ತು ಸುರಕ್ಷತೆಯ ವಿಶ್ವಾಸವನ್ನು ಕೊಟ್ಟಿದ್ದಾರೆ.

ತಾಲಿಬಾನಿಗಳು ನನ್ನನ್ನು ಕೊಂದರೂ ಪರವಾಗಿಲ್ಲ, ನಾನು ದೇವರನ್ನು ಬಿಡುವುದಿಲ್ಲ ! – ಹಿಂದೂ ಅರ್ಚಕರ ನಿರ್ಣಯ

ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಲಕ್ಷಾಂತರ ಆಫ್ಘನ್ನರು ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಅದೇ ರೀತಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.