‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತಿನ ಆಯೋಜನೆ !

  • ಜಗತ್ತಿನಲ್ಲಿ ೪೦ಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳ ಬೆಂಬಲ

  • ಹಿಂದುದ್ವೇಷಿ ವಕ್ತಾರರ ಸಹಯೋಗ

ಈ ರೀತಿ ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಹಿಂದೂ ವಿರೋಧೀ ವಿಷಕಾರಲಾಗುತ್ತದೆ. ಅದನ್ನು ತಡೆಯಲು ಹಿಂದೂಗಳು ಕಾನೂನುಬದ್ಧ ಮಾರ್ಗದಲ್ಲಿ ವಿರೋಧಿಸಿ ವೈಚಾರಿಕ ಪ್ರತಿವಾದ ಮಾಡುವುದು ಅವಶ್ಯಕ !

ಮುಂಬಯಿ – ‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ (ಡಿಸ್‌ಮಾಂಟಲಿಂಗ್ ಗ್ಲೋಬಲ್ ಹಿಂದುತ್ವ) ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತನ್ನು ಆಯೋಜಿಸಲಾಗಿದೆ. ಜಗತ್ತಿನಲ್ಲಿನ ೪೦ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು ಈ ಪರಿಷತ್ತನ್ನು ಆಯೋಜಿಸಲು ಮುಂದಾಳತ್ವ ವಹಿಸಿವೆ. ಅದರಲ್ಲಿ ಅಮೇರಿಕಾದ ಪ್ರಿನ್ಸ್‌ಟನ್, ಸ್ಟ್ಯಾನ್‌ಫೋರ್ಡ್, ಸಿಎಟಲ್, ಬೋಸ್‌ಟನ್ ಇತ್ಯಾದಿ ವಿಶ್ವವಿದ್ಯಾಲಯಗಳು ಅದರಲ್ಲಿ ಸಮಾವೇಶಗೊಂಡಿದೆ. (ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಿಂದುತ್ವದ ವಿಚಾರದ ಕಡೆ ದೊಡ್ಡ ಪ್ರಮಾಣದಲ್ಲಿ ಜನರು ಆಕರ್ಷಣೆಯಾಗುತ್ತಿದ್ದಾರೆ. ಅದಕ್ಕೆ ಸವಾಲು ನೀಡಲು ಹಿಂದುದ್ವೇಷಿಗಳು ಇಂತಹ ಪರಿಷತ್ತುಗಳನ್ನು ಆಯೋಜಿಸುತ್ತಿದ್ದಾರೆ. ವಿದೇಶದಲ್ಲಿ ಈ ರೀತಿಯ ವೈಚಾರಿಕ ಆಕ್ರಮಣವು ಕೇವಲ ಹಿಂದೂ ಧರ್ಮದ ಮೇಲಷ್ಟೇ ಅಲ್ಲ, ಅದು ಭಾರತದ ವಿರುದ್ಧವಾಗಿದೆ. ಆದ್ದರಿಂದ ಭಾರತ ಸರಕಾರವು ಇಂತಹ ವಿಶ್ವವಿದ್ಯಾಲಯಗಳನ್ನು ಸಮಯಕ್ಕೆ ಸರಿಯಾಗಿ ನಿಗ್ರಹಿಸಬೇಕು ಎಂಬುದು ಅಪೇಕ್ಷಿತವಾಗಿದೆ ! – ಸಂಪಾದಕರು) ಸೆಪ್ಟೆಂಬರ್ ೧೦ ರಿಂದ ಸೆಪ್ಟೆಂಬರ್ ೧೨ರ ಸಮಯದಲ್ಲಿ ನಡೆಯಲಿರುವ ಈ ‘ಆನ್‌ಲೈನ್ ಪರಿಷತ್ತಿನಲ್ಲಿ ಆನಂದ ಪಟವರ್ಧನ್, ಆಯೆಶಾ ಕಿಡವಯಿ, ಬಾನೂ ಸುಬ್ರಹ್ಮಣ್ಯಮ್, ಭವರ ಮೇಘವಂಶೀ, ಕ್ರಿಸ್ಟೋಫೀ ಜಾಫ್ರೆಲ್ಯಾಟ್, ಕವಿತಾ ಕೃಷ್ಣನ್, ಮೀನಾ ಕಂದಾಸಾಮೀ, ಮಹಂಮದ್ ಜುನೈದ್, ನಂದಿನೀ ಸುಂದರ, ನೇಹಾ ದೀಕ್ಷಿತ್, ರಿತಿಕಾ ಖೇರಾ ಎಂಬ ಹಿಂದುದ್ವೇಷಿಗಳನ್ನು ವಕ್ತಾರರೆಂದು ಆಮಂತ್ರಿಸಲಾಗಿದೆ.

ಈ ಪರಿಷತ್ತು ಪ್ರತಿದಿನ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೩ ಘಂಟೆಯವರೆಗೂ ನಡೆಯಲಿದೆ. ೩ ದಿನ ನಡೆಯುವ ಈ ಪರಿಷತ್ತಿನಲ್ಲಿ ‘ಜಾಗತಿಕ ಹಿಂದುತ್ವ, ‘ಹಿಂದುತ್ವದ ರಾಜಕೀಯ ಧೋರಣೆ, ‘ರಾಷ್ಟ್ರದ ರೂಪುರೇಷೆ, ‘ಹಿಂದುತ್ವದ ತೋರಿಕೆ ಹಾಗೂ ಆರೋಗ್ಯ ಸೇವೆ ಇತ್ಯಾದಿ ವಿಷಯಗಳ ಮೇಲೆ ಚರ್ಚೆ ನಡೆಸಲಾಗುವುದು.