ತಾಲಿಬಾನಿಗಳು ನನ್ನನ್ನು ಕೊಂದರೂ ಪರವಾಗಿಲ್ಲ, ನಾನು ದೇವರನ್ನು ಬಿಡುವುದಿಲ್ಲ ! – ಹಿಂದೂ ಅರ್ಚಕರ ನಿರ್ಣಯ

ಅಫ್ಘಾನಿಸ್ತಾನದ ರತನನಾಥ ದೇವಸ್ಥಾನದ ಅರ್ಚಕರು ಕಾಬೂಲ್ ಬಿಡಲು ನಿರಾಕರಿಸಿದ್ದಾರೆ !

  • ಇದರಿಂದ ಹಿಂದೂ ಅರ್ಚಕನ ಉಚ್ಛ ಕೋಟಿಯ ಧರ್ಮಾಭಿಮಾನ ಗಮನಕ್ಕೆ ಬರುತ್ತದೆ ! `ಧರ್ಮೋ ರಕ್ಷತಿ ರಕ್ಷಿತಃ ।’ ಇದು ಈಶ್ವರನ ವಚನ ಇದೆ. ಇದರ ಮೇಲೆ ದೃಢವಾದ ಶ್ರದ್ಧೆ ಇರುವ ವ್ಯಕ್ತಿಯೇ ಈ ರೀತಿಯ ಕೃತಿ ಮಾಡಬಹುದು ! – ಸಂಪಾದಕ 
  • ಆಪದ್ಧರ್ಮ ಎಂದು ಯಾವುದಾದರು ವಿಪತ್ತು ಬಂದಲ್ಲಿ ತಮ್ಮ ಸ್ಥಾನವನ್ನು ತೊರೆಯುವ ಅನುಮತಿಯನ್ನು ಧರ್ಮಶಾಸ್ತ್ರ ನೀಡುತ್ತದೆ, ಎಂಬುದು ಕೂಡ ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು ! ಸಂಪಾದಕ

ಕಾಬೂಲ್ (ಅಫ್ಘಾನಿಸ್ತಾನ) – ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಲಕ್ಷಾಂತರ ಆಫ್ಘನ್ನರು ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಅದೇ ರೀತಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ, ಕಾಬೂಲ್‌ನಲ್ಲಿರುವ ರತನನಾಥ ದೇವಾಲಯದ ಅರ್ಚಕರಾದ ಪಂಡಿತ ರಾಜೇಶ ಕುಮಾರ ಇವರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ನಿರಾಕರಿಸಿದ್ದಾರೆ.

ಪಂಡಿತ ರಾಜೇಶ ಕುಮಾರ ಅವರು, “ಕೆಲವು ಹಿಂದೂಗಳು ನನ್ನನ್ನು ಅಫ್ಘಾನಿಸ್ತಾನವನ್ನು ತೊರೆಯುವಂತೆ ಒತ್ತಾಯಿಸಿದರು.’ ‘ನನ್ನ ಪ್ರಯಾಣ ಮತ್ತು ವಸತಿಗಾಗಿ ವ್ಯವಸ್ಥೆ ಮಾಡುವೆವು’, ಎಂದೂ ಕೂಡಾ ಹೇಳಲಾಯಿತು; ಆದರೆ ನನ್ನ ಪೂರ್ವಜರು ನೂರಾರು ವರ್ಷಗಳಿಂದ ಈ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ನಾನು ಈ ದೇವಸ್ಥಾನವನ್ನು ಬಿಡುವುದಿಲ್ಲ. ತಾಲಿಬಾನಿಗಳು ನನ್ನನ್ನು ಕೊಂದರೂ ಪರವಾಗಿಲ್ಲ, ಆದರೆ ನಾನು ದೇವರು ಮತ್ತು ದೇವಸ್ಥಾನವನ್ನು ಬಿಡುವುದಿಲ್ಲ ! ಅದು ನನ್ನ ಸೇವೆಯೇ ಆಗಿರಲಿದೆ.” ಎಂದು ಹೇಳಿದರು.