ಪಾಕಿಸ್ತಾನದಲ್ಲಿ ಜಿಹಾದಿ ಉಗ್ರಗಾಮಿ ಸಂಘಟನೆಯಿಂದ ಮಹಾರಾಜಾ ರಣಜೀತಸಿಂಹರವರ ಪ್ರತಿಮೆ ಧ್ವಂಸ

ಪಾಕಿಸ್ತಾನದಲ್ಲಿ ಈ ಉಗ್ರಗಾಮಿ ಸಂಘಟನೆಗಳ ಬಗ್ಗೆ ಖಲಿಸ್ತಾನಿಗಳು ಬಾಯಿ ಬಿಟ್ಟು ಮಾತನಾಡುವರೇ? ಅಥವಾ ಅವರಿಗೆ ತಮ್ಮ ಮಹಾರಾಜರ ಅವಮಾನದ ಬಗ್ಗೆ ಏನೂ ಅನ್ನಿಸುವುದಿಲ್ಲವೇ?

ಲಾಹೋರ (ಪಾಕಿಸ್ತಾನ) – ಇಲ್ಲಿನ ಲಾಹೋರ ಕೋಟೆಯಲ್ಲಿರುವ ಅಶ್ವಾರೂಢ ಮಹಾರಾಜಾ ರಣಜೀತ ಸಿಂಹರ ಪ್ರತಿಮೆಯನ್ನು ಮತಾಂಧರು ಧ್ವಂಸಗೊಳಿಸಿದರು. ಪಾಕ್‌ನಲ್ಲಿ ನಿರ್ಬಂಧಕ್ಕೊಳಗಾಗಿರುವ ತಹರೀಕ-ಎ-ಲಬ್ಬೈಕ ಪಾಕಿಸ್ತಾನ ಎಂಬ ಉಗ್ರಗಾಮಿ ಸಂಘಟನೆಯು ಈ ಕೃತ್ಯವನ್ನು ಮಾಡಿದೆ. ಈ ಹಿಂದೆ ಎರಡು ಸಲ ಈ ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು. ಈ ಪ್ರತಿಮೆಯನ್ನು ಜೂನ್ ೨೦೧೯ರಲ್ಲಿ ಸ್ಥಾಪಿಸಲಾಗಿತ್ತು.