ಅಫ್ಘಾನಿಸ್ತಾನದಲ್ಲಿನ ಸಿಕ್ಖ ಸಮುದಾಯದ ಪ್ರತಿನಿಧಿಗಳೊಂದಿಗೆ ತಾಲಿಬಾನಿಗಳ ಜೊತೆ ಚರ್ಚೆ
ತಾಲಿಬಾನಿಗಳ ದೃಷ್ಟಿಯಲ್ಲಿ ಸಿಕ್ಖ ರು ಇವರು ‘ಕಾಫಿರ್’ ಆಗಿದ್ದಾರೆ. ಆದ್ದರಿಂದ ಅವರ ಆಶ್ವಾಸನೆಯ ಮೇಲೆ ವಿಶ್ವಾಸವಿಡುವುದು ಇದು ಆತ್ಮಘಾತಕವೇ ಆಗಿದೆ !
ಕಾಬುಲ್ (ಅಫ್ಘಾನಿಸ್ತಾನ) – ತಾಲಿಬಾನಿಗಳ ಅಧಿಕಾರ ಬಂದಮೇಲೆ ಅಫ್ಘಾನಿಸ್ತಾನದಲ್ಲಿನ ಸಿಕ್ಖ ಸಮುದಾಯದ ಪ್ರತಿನಿಧಿಗಳು ತಾಲಿಬಾನಿಗಳ ಪ್ರತಿನಿಧಿಗಳನ್ನು ಭೇಟಿಯಾದರು. ಈ ಸಭೆಯ ನಂತರ, ‘ತಾಲಿಬಾನಿಗಳು ನಮಗೆ ಶಾಂತಿ ಮತ್ತು ಸುರಕ್ಷತೆಯ ವಿಶ್ವಾಸವನ್ನು ಕೊಟ್ಟಿದ್ದಾರೆ. ‘ನೀವು ದೇಶಬಿಟ್ಟು ಹೋಗುವ ಅವಶ್ಯಕತೆ ಇಲ್ಲ. ನೀವು ಶಾಂತಿಯಿಂದ ಇಲ್ಲೇ ವಾಸ ಮಾಡಬಹುದು’, ಎಂದು ತಾಲಿಬಾನಿಗಳು ಹೇಳಿರುವುದಾಗಿ ಸಿಕ್ಖ ಸಮುದಾಯದ ಪ್ರತಿನಿಧಿಗಳು ಹೇಳಿದ್ದಾರೆ. ‘ತಾಲಿಬಾನಿಗಳು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಲು ಆರಂಭಿಸಿದ ನಂತರ ೨೮೦ ಸಿಕ್ಖರು ಮತ್ತು ೩೦ ರಿಂದ ೪೦ ಹಿಂದೂಗಳು ಕಾರತಿ ಪರವಾನ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ’, ಎಂದು ಅಫ್ಘಾನಿಸ್ತಾನದಲ್ಲಿನ ಸಿಕ್ಖ್ ರ ನಾಯಕ ಗುರುನಾಮ ಸಿಂಹ ಇವರು ತಿಳಿಸಿದ್ದಾರೆ.
After the meeting, representatives of the Sikh community said that they were assured of “peace and safety” by the Taliban.https://t.co/RKgFaCUQVt
— The Indian Express (@IndianExpress) August 16, 2021
ಗುರುನಾಮ ಸಿಂಹ ಇವರು, ತಾಲಿಬಾನಿಗಳು ನಮ್ಮ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಏನೇ ಸಮಸ್ಯೆ ಬಂದರೂ ಸಂಪರ್ಕ ಮಾಡುವಂತೆ ಅವರು ಸಂಪರ್ಕ ಸಂಖ್ಯೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು.