ಹೊಸ ದೆಹಲಿ – ಕರ್ಕರೋಗದ ರೋಗಿಗಳು ಅತಿಯಾಗಿ ನೆಲಗಡಲೆ ಸೇವಿಸಿದರೆ ಅವರ ಸಂಪೂರ್ಣ ಶರೀರದಲ್ಲಿ ಕರ್ಕರೋಗ ಹರಡುವ ಅಪಾಯ ಹೆಚ್ಚಾಗಬಹುದು, ಎಂದು ಇಂಗ್ಲೆಂಡಿನ ‘ಲಿವರ್‌ಪೂಲ್ ವಿಶ್ವವಿಧ್ಯಾಲಯದ ಸಂಶೋಧಕರಾದ ಲೂ-ಗ್ಯಾಂಗ್‌ಯೂರವರು ಹೇಳಿದ್ದಾರೆ. ‘ಈ ಸುದ್ಧಿಯು ಚಿಂತಾಜನಕವಾಗಿದೆ, ಎಂಬುದು ನಿಜ. ಆದ್ದರಿಂದ ಅಂತಹ ರೋಗಿಗಳು ಮೇಲಿಂದ ಮೇಲೆ ನೆಲಗಡೆಲ ಸೇವಿಸುವುದನ್ನು ತಪ್ಪಿಸಬೇಕು, ಎಂದು ಲೂ-ಗ್ಯಾಂಗ್‌ಯೂರವರು ತಿಳಿಸಿದರು.
‘ಕಾರ್ಸಿನೋಜೆನೆಸಿಸ್ ಎಂಬ ಮಾಸಿಕದಲ್ಲಿ ಪ್ರಸಿದ್ಧವಾದ ಸಂಶೋಧನೆಯ ಪ್ರಕಾರ ನೆಲಗಡಲೆಯನ್ನು ಸೇವಿಸಿದ ಬಳಿಕ ‘ಪೀನಟ್ ಎಗ್ಲೂಟಿನೀನ ಎಂಬ ಪ್ರೋಟೀನ್ ರಕ್ತದಲ್ಲಿ ಸೇರಿ ಸಂಪೂರ್ಣ ಶರೀರದಲ್ಲಿ ಹರಡುತ್ತದೆ. ಅನಂತರ ಅದು ರಕ್ತದ ಮೂಲಕ ಕರ್ಕರೋಗದ ಗಡ್ಡೆಯವರೆಗೂ ತಲುಪುತ್ತದೆ ಹಾಗೂ ಅವರ ಶರೀರದ ಬೇರೆ ಭಾಗಗಳಿಗೆ ಹರಡಲು ಒತ್ತಡ ನಿರ್ಮಾಣವಾಗುತ್ತದೆ. ಆದ್ದರಿಂದ ಆ ಗಡ್ಡೆ ರೋಗಿಯ ಶರೀರದ ಬೇರೆ ಭಾಗಕ್ಕೆ ಹರಡಲು ಪ್ರಯತ್ನಿಸುತ್ತದೆ.
ಲೂ-ಗ್ಯಾಂಗ್‌ಯೂ ರವರು ಅತಿಯಾಗಿ ನೆಲಗಡಲೆ ಸೇವಿಸುವ ಕರ್ಕರೋಗದ ರೋಗಿಗಳಲ್ಲಿ ಮೃತ್ಯು ಬರುವ ಸಾಧ್ಯತೆ ಎಷ್ಟು ಹೆಚ್ಚಾಗುತ್ತದೆ ಎಂಬ ಬಗ್ಗೆ ತಿಳಿಯಲಿಲ್ಲ ಎಂದು ಹೇಳಿದರು.
ಸಂಶೋಧಕರ ಅಭಿಪ್ರಾಯದಂತೆ, ಕರ್ಕರೋಗಿಗಳೇನಾದರೂ ಒಂದು ದಿನದಲ್ಲಿ ೨೫೦ ಗ್ರಾಮ್ ನೆಲಗಡಲೆ ಸೇವಿಸಿದರೆ ಅವರಿಗೆ ಹೆಚ್ಚು ಪ್ರಮಾಣದಲ್ಲಿ ಅಪಾಯ ಕಂಡು ಬರುತ್ತದೆ. ಆದ್ದರಿಂದ ಇಂತಹ ಅಪಾಯದಿಂದ ಕಾಪಾಡಲು ವ್ಯಕ್ತಿಯು ಇಡೀ ದಿನದಲ್ಲಿ ೨೮ ಗ್ರಾಮ್‌ಗಿಂತ ಹೆಚ್ಚು ನೆಲಗಡಲೆ ಸೇವಿಸಬಾರದು. ಒಂದು ನೆಲಗಡಲೆಯಲ್ಲಿ ಅದರ ತೂಕದ ಶೇಕಡ ೦.೧೫ ಪ್ರೋಟೀನ್ ಇರುತ್ತದೆ.