ಬಾಂಗ್ಲಾದೇಶದಲ್ಲಿ ಶಿವಮಂದಿರದಲ್ಲಿ ಶಿವನ ೨ ಮೂರ್ತಿಗಳನ್ನು ಧ್ವಂಸಗೊಳಿಸಿದ ಮತಾಂಧ ಯುವಕ !

ಮತಾಂಧನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಹಿಂದೂಗಳು !

ಬಾಂಗ್ಲಾದೇಶ ಇಸ್ಲಾಮಿ ರಾಷ್ಟ್ರವಾಗಿರುವುದರಿಂದ ಅಲ್ಲಿ ಇಂತಹ ಘಟನೆ ನಡೆಯುತ್ತವೆ, ಆದರೆ ತಥಾಕಥಿತ ಜಾತ್ಯಾತೀತವಾದಿ ಭಾರತದಲ್ಲಿಯೂ ಅಲ್ಪಸಂಖ್ಯಾತ ಮತಾಂಧರಿಂದ ಈ ರೀತಿಯ ವಿಧ್ವಂಸಕ ಕೃತ್ಯಗಳು ನಡೆಯುತ್ತವೆ, ಇದು ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ.

ಈ ಮೇಲಿನ ದೇವತೆಗಳ ಭಗ್ನ ಗೊಳಿಸಿದ ಮೂರ್ತಿಗಳನ್ನು ಪ್ರಕಟಿಸುವ ಉದ್ದಶ ಯಾರ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ

ನೌಖಾಲಿ (ಬಾಂಗ್ಲಾದೇಶ) – ಮೈಜಡಿ ಮಾಸ್ಟರಪಾರಾ ಪ್ರದೇಶದ ಶಿವಮಂದಿರದ ಭಗವಾನ ಶಿವನ ಎರಡು ಮೂರ್ತಿಗಳನ್ನು ಭಗ್ನ ಮಾಡಿರುವ ಶಕೀಲ್‌ಉದ್ದಿನ್ ಎಂಬ ೧೮ ವರ್ಷದ ಮತಾಂಧನನ್ನು ಘಟನಾ ಸ್ಥಳದಲ್ಲೇ ಇಲ್ಲಿಯ ಹಿಂದುಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದರು. ‘ಶಕೀಲ್‌ಉದ್ದಿನ್ ಇವನು ಮೂರ್ತಿಗಳನ್ನು ಭಗ್ನ ಮಾಡಿರುವ ಆರೋಪವನ್ನು ಒಪ್ಪಿಕೊಂಡಿದ್ದಾನೆ’, ಎಂದು ಪೊಲೀಸರು ಹೇಳಿದ್ದಾರೆ. (ಈಗ ಆತನಿಗೆ ಕಠಿಣ ಶಿಕ್ಷೆಯಾಗಲು ಬಾಂಗ್ಲಾದೇಶದ ಪೊಲೀಸರು ಕ್ರಮ ತೆಗೆದುಕೊಳ್ಳುವರೊ ಅಥವಾ ನಿರಪರಾಧಿ ಎಂದು ಸಾಬೀತು ಮಾಡುವ ಪ್ರಯತ್ನ ಮಾಡುವರೋ ?’ ಇಂತಹ ಪ್ರಶ್ನೆಗಳು ಹಿಂದೂಗಳ ಮನಸ್ಸಿನಲ್ಲಿ ಖಂಡಿತವಾಗಿಯೂ ಬರಲಿದೆ – ಸಂಪಾದಕೀಯ)