ಬಾಂಗ್ಲಾದೇಶದಿಂದಲೂ ತಾಲಿಬಾನ್ ಸರಕಾರಕ್ಕೆ ‘ಸ್ನೇಹಪರ’ ಬೆಂಬಲ !

  • ಇಸ್ಲಾಮಿಕ್ ಸ್ಟೇಟ್‌ಗೆ ಯಾವ ರೀತಿ ಇಸ್ಲಾಮಿ ದೇಶಗಳು ವಿರೋಧ ಮಾಡಿರಲಿಲ್ಲ, ಹಾಗೆಯೇ ಅವು ತಾಲಿಬಾನ್‌ಗೂ ವಿರೋಧ ಮಾಡದೇ ಬಹಿರಂಗವಾಗಿ ಬೆಂಬಲ ನೀಡುತ್ತಿವೆ. ಇದನ್ನು ಭಾರತದಲ್ಲಿರುವ ಢೋಂಗಿ ಜಾತ್ಯತೀತವಾದಿಗಳು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಈ ಸ್ಥಿತಿ ಬರಬಾರದೆಂದು ರಾಷ್ಟ್ರನಿಷ್ಠರಾಗಬೇಕು ! – ಸಂಪಾದಕರು

  • ಭಾರತದ ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಎರಡೂ ಕಡೆಯ ಇಸ್ಲಾಮಿಕ್ ದೇಶಗಳು ಮತ್ತು ಉತ್ತರದಲ್ಲಿ ಚೀನಾ ಇವು ತಾಲಿಬಾನವನ್ನು ಬೆಂಬಲಿಸುತ್ತಿದೆ, ಇದು ಭಾರತಕ್ಕೆ ಅಪಾಯಕಾರಿ ! – ಸಂಪಾದಕರು

ಢಾಕಾ (ಬಾಂಗ್ಲಾದೇಶ) – ಅಫ್ಘಾನಿಸ್ತಾನದಲ್ಲಿನ ತಾಲಿಬಾನಿ ಸರಕಾರ ಇದು ಜನತೆಯ ಸರಕಾರವಾಗಿದೆ. (ತಾಲಿಬಾನಿನ ಭಯದಿಂದ ಅಲ್ಲಿಯ ಜನ ಅಫ್ಘಾನಿಸ್ತಾನದಿಂದ ಕಾಲ್ಕೀಳುತ್ತಿದ್ದಾರೆ ಇದು ಅಲ್ಲಿಯ ಚಿತ್ರಣವಾಗಿದೆ, ಹೀಗಿರುವಾಗಲೂ ‘ಅದು ಜನತೆಯ ಸರಕಾರ ಇರುವುದು’, ಹೀಗೆ ಹೇಳುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು) ಆದ್ದರಿಂದ ಬಾಂಗ್ಲಾದೇಶವು ತಾಲಿಬಾನ್ ಸರಕಾರವನ್ನು ಸ್ವೀಕರಿಸುವುದು, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೋಮೆನ್ ಹೇಳಿದರು.
ಮೋಮೆನ್ ತಮ್ಮ ಮಾತನ್ನು ಮುಂದುವರೆಸುತ್ತಾ, ನೂತನವಾಗಿ ಯಾವುದೇ ಸರಕಾರ ಬಂದರೂ, ನಮಗೆ ಇದರಿಂದ ವ್ಯತ್ಯಾಸವಾಗುವುದಿಲ್ಲ. ಒಂದು ವೇಳೆ ತಾಲಿಬಾನರೇ ಸರಕಾರ ರಚಿಸಿದರೆ, ನಮ್ಮ ಬಾಗಿಲು ಅವರಿಗೆ ತೆರೆದಿರುವುದು. ನಮಗೆ ಪ್ರಜಾಪ್ರಭುತ್ವ ಸರಕಾರದ ಮೇಲೆ ವಿಶ್ವಾಸವಿದೆ. ಎಲ್ಲಾ ದೇಶಗಳ ಸರಕಾರದ ಜೊತೆ ಬಾಂಗ್ಲಾದೇಶದ ಸ್ನೇಹಪರ ಸಂಬಂಧವಿದೆ. ಆದ್ದರಿಂದ ತಾಲಿಬಾನರನ್ನು ಸಹ ಬೆಂಬಲಿಸಲು ನಾವು ಸಿದ್ಧರಿದ್ದೇವೆ. ಅಫ್ಘಾನಿಸ್ತಾನದ ಅಭಿವೃದ್ಧಿಯಾಗಬೇಕು, ಇದೇ ನಮ್ಮ ಇಚ್ಛೆಯಾಗಿದೆ. ಆದ್ದರಿಂದ ನಾವು ಅವರೆಡೆ ಸ್ನೇಹದ ಭಾವನೆಯಿಂದ ನೋಡುತ್ತೇವೆ.