‘ಅಲಿಘಡ’ ಹೆಸರನ್ನು ‘ಹರಿಗಡ’ ವನ್ನಾಗಿಡಬೇಕೆಂದು ಉತ್ತರಪ್ರದೇಶ ನಾಗರಿಕರಿಂದ ಸರಕಾರದ ಬಳಿ ಬೇಡಿಕೆ

ಇಲ್ಲಿಯ ನಾಗರಿಕರು ನಗರದ ಹೆಸರನ್ನು ‘ಅಲಿಗಡ’ದಿಂದ ‘ಹರಿಗಡ’ ಎಂದು ಬದಲಿಸುವಂತೆ ಉತ್ತರಪ್ರದೇಶದ ಬಿಜೆಪಿ ಸರಕಾರವನ್ನು ಒತ್ತಾಯಿಸಿದ್ದಾರೆ. ‘ಫಿರೋಜಾಬಾದ್’ ಜಿಲ್ಲೆಯ ಹೆಸರನ್ನು ‘ಚಂದ್ರನಗರ’ ಎಂದು ಬದಲಿಸಲು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.

ಹಿಂದೂ ಹೆಸರು ಹೇಳಿ ೫೧ ವರ್ಷದ ಮತಾಂಧನಿಂದ ೨೨ ವರ್ಷದ ಹಿಂದೂ ಯುವತಿಯೊಂದಿಗೆ ವಿವಾಹ !

ಇಲ್ಲಿಯ ೫೧ ವರ್ಷದ ಶೇಖ ಮಹಮ್ಮದ ಅಖ್ತರನು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ೨೨ ವರ್ಷದ ಹಿಂದೂ ಯುವತಿಯೊಂದಿಗೆ ವಿವಾಹವಾದನು. ವಿವಾಹದ ನಂತರ ಆಕೆಗೆ ಬುರಖಾ ಧರಿಸಲು ಮತ್ತು ನಮಾಜ ಪಠಣ ಮಾಡುವಂತೆ ಕಡ್ಡಾಯಗೊಳಿಸಿದ ಹಾಗೂ ಅದಕ್ಕಾಗಿ ಆಕೆಯ ಮೇಲೆ ದೌರ್ಜನ್ಯವೆಸಗಿದ.

ಮನೆಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ೨೫ ರೂಪಾಯಿ ಹೆಚ್ಚಳ !

ಸಬ್ಸಿಡಿ ಇಲ್ಲದಿರುವ ಮನೆಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ನ ಬೆಲೆಯನ್ನು ೨೫ ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯ ನಂತರ ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಮನೆ ಬಳಕೆಯ ೧೪.೨ ಕೆಜಿಯ ಎಲ್.ಪಿ.ಜಿ ಸಿಲಿಂಡರಿನ ಬೆಲೆ ೮೫೯.೫ ರೂಪಾಯಿ ಆಗಿದೆ.

ಪಾಕನಲ್ಲಿ ಶಿಯಾ ಮುಸಲ್ಮಾನರ ಮೊಹರಮ್ ನ ಮೆರವಣಿಗೆಯಲ್ಲಿ ಬಾಂಬ್ ಸ್ಫೋಟ : ೩ ಸಾವು, ಹಾಗೂ ೧೫ ಜನರಿಗೆ ಗಾಯ.

ಪಾಕ್‌ನ ಪಂಜಾಬ ಪ್ರಾಂತ್ಯದ ಬಹಾವನಗರದಲ್ಲಿ ಶಿಯಾ ಮುಸಲ್ಮಾನರು ಮೊಹರಮ್ ನಿಮಿತ್ತ ಮೆರವಣಿಗೆಯನ್ನು ನಡೆಸಿದ್ದರು, ಆ ಸಮಯದಲ್ಲಾದ ಬಾಂಬ್‌ಸ್ಫೋಟದಲ್ಲಿ ೩ ಮಂದಿ ಸಾವನ್ನಪ್ಪಿದ್ದು, ೧೫ ಮಂದಿ ಗಾಯಗೊಂಡಿದ್ದಾರೆ.

‘ಬ್ರಾಹ್ಮಣೇತರರನ್ನು ನೇಮಿಸುವಾಗ, ಹಿಂದಿನ ಪುರೋಹಿತರನ್ನು ತೆಗೆದುಹಾಕಲಾಗುವುದಿಲ್ಲ!’(ಅಂತೆ) – ಡಿಎಂಕೆ ಸರಕಾರ

ದ್ರಾವಿಡ ಮುನ್ನೇತ್ರ ಕಳಘಂ (ಡಿಎಂಕೆ) ಸರಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸುವ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ.

‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತಿನ ಆಯೋಜನೆ !

‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ (ಡಿಸ್‌ಮಾಂಟಲಿಂಗ್ ಗ್ಲೋಬಲ್ ಹಿಂದುತ್ವ) ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತನ್ನು ಆಯೋಜಿಸಲಾಗಿದೆ. ಜಗತ್ತಿನಲ್ಲಿನ ೪೦ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು ಈ ಪರಿಷತ್ತನ್ನು ಆಯೋಜಿಸಲು ಮುಂದಾಳತ್ವ ವಹಿಸಿವೆ.

‘ಯೂಟ್ಯೂಬ್’ನಿಂದಲೂ ತಾಲಿಬಾನ್ ಖಾತೆಗಳ ಮೇಲೆ ನಿಷೇಧ

ಫೇಸ್‌ಬುಕ್ ನಂತರ, ಈಗ ‘ಯೂಟ್ಯೂಬ್’ ಕೂಡ ತಾಲಿಬಾನ್ ಖಾತೆಗಳನ್ನು ನಿಷೇಧಿಸಿದೆ. (‘ಫೇಸ್‌ಬುಕ್’ ಮತ್ತು ‘ಯುಟ್ಯೂಬ್’ನಲ್ಲಿ ಇನ್ನೆಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿ ನಾಯಕರ ಖಾತೆಗಳಿವೆ ಎಂಬುದು ಘೋಷಿಸುವ ಮೂಲಕ ಜಗತ್ತಿಗೆ ತಿಳಿಸಬೇಕು.

ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿ ಮತ್ತು ಪ್ರಜೆಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ !

ತಾಲಿಬಾನರು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಮೇಲೆ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು.

ಬಾಂಗ್ಲಾದೇಶದಿಂದಲೂ ತಾಲಿಬಾನ್ ಸರಕಾರಕ್ಕೆ ‘ಸ್ನೇಹಪರ’ ಬೆಂಬಲ !

ಅಫ್ಘಾನಿಸ್ತಾನದಲ್ಲಿನ ತಾಲಿಬಾನಿ ಸರಕಾರ ಇದು ಜನತೆಯ ಸರಕಾರವಾಗಿದೆ. ಆದ್ದರಿಂದ ಬಾಂಗ್ಲಾದೇಶವು ತಾಲಿಬಾನ್ ಸರಕಾರವನ್ನು ಸ್ವೀಕರಿಸುವುದು, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೋಮೆನ್ ಹೇಳಿದರು.

ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ !

ವಿಶೇಷ ನ್ಯಾಯಾಲಯವು ಸುನಂದಾ ಪುಷ್ಕರ್ ಇವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್‌ಅನ್ನು ಖುಲಾಸೆಗೊಳಿಸಿದೆ. ೨೦೧೪ ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್ ಇವರ ಶವ ಪತ್ತೆಯಾಗಿತ್ತು.