‘ಅಲಿಘಡ’ ಹೆಸರನ್ನು ‘ಹರಿಗಡ’ ವನ್ನಾಗಿಡಬೇಕೆಂದು ಉತ್ತರಪ್ರದೇಶ ನಾಗರಿಕರಿಂದ ಸರಕಾರದ ಬಳಿ ಬೇಡಿಕೆ

ಸ್ವಾತಂತ್ರ್ಯದ ನಂತರ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಈ ಹೆಸರನ್ನು ಏಕೆ ಬದಲಾಯಿಸಿಲ್ಲ ಎಂದು ಹಿಂದೂಗಳು ಕಠೋರವಾಗಿ ವಿಚಾರಿಸಬೇಕು !

ಅಲಿಘಡ (ಉತ್ತರಪ್ರದೇಶ) – ಇಲ್ಲಿಯ ನಾಗರಿಕರು ನಗರದ ಹೆಸರನ್ನು ‘ಅಲಿಗಡ’ದಿಂದ ‘ಹರಿಗಡ’ ಎಂದು ಬದಲಿಸುವಂತೆ ಉತ್ತರಪ್ರದೇಶದ ಬಿಜೆಪಿ ಸರಕಾರವನ್ನು ಒತ್ತಾಯಿಸಿದ್ದಾರೆ. ‘ಫಿರೋಜಾಬಾದ್’ ಜಿಲ್ಲೆಯ ಹೆಸರನ್ನು ‘ಚಂದ್ರನಗರ’ ಎಂದು ಬದಲಿಸಲು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಈ ಮೊದಲು ಸರಕಾರವು ರಾಜ್ಯದ ನಗರ ಮತ್ತು ಜಿಲ್ಲೆಗಳಿಗೆ ಮೊಘಲರು ನೀಡಿದ ಹೆಸರನ್ನು ಬದಲಾಯಿಸಿತ್ತು. ಇದರಲ್ಲಿ ‘ಅಲಹಾಬಾದ್’ಗೆ ‘ಪ್ರಯಾಗರಾಜ’ ಎಂದು ನಾಮಕರಣ ಮಾಡುವುದು, ಸಹ ಒಳಗೊಂಡಿತ್ತು.