ಹಿಂದೂ ಹೆಸರು ಹೇಳಿ ೫೧ ವರ್ಷದ ಮತಾಂಧನಿಂದ ೨೨ ವರ್ಷದ ಹಿಂದೂ ಯುವತಿಯೊಂದಿಗೆ ವಿವಾಹ !

  • ವಿವಾಹದ ನಂತರ ಮತಾಂಧನಿಂದ ಪೀಡಿತ ಯುವತಿಯ ಮೇಲೆ ದೌರ್ಜನ್ಯ

  • ಪೊಲೀಸರಿಂದ ‘ಲವ್ ಜಿಹಾದ್’ ಕಾನೂನಿನ ಅಡಿಯಲ್ಲಿ ದೂರನ್ನು ನೊಂದಾಯಿಸಲು ಹಿಂದೇಟು

  • ಪೊಲೀಸರ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ಆಂದೋಲನ

  • ಗುಜರಾತ ರಾಜ್ಯದಲ್ಲಿ ‘ಲವ್ ಜಿಹಾದ್’ ಕಾನೂನು ಅಸ್ತಿತ್ವದಲ್ಲಿದ್ದರೂ ಮತಾಂಧರು ಅದಕ್ಕೆ ಹೆದರುವುದಿಲ್ಲ, ಇದರಿಂದ ಅವರ ಉದ್ಧಟತನವೇ ಕಂಡು ಬರುತ್ತದೆ. ಆದ್ದರಿಂದ ಈ ಕಾನೂನನ್ನು ಇನ್ನೂ ಕಠಿಣ ಮಾಡಿ ಅದರ ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸುವ ಅವಶ್ಯಕತೆಯಿದೆ ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಪೀಡಿತ ಹಿಂದೂ ಯುವತಿಯ ದೂರನ್ನು ‘ಲವ್ ಜಿಹಾದ್’ನ ಅಡಿಯಲ್ಲಿ ನೊಂದಾಯಿಸದ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರದ್ದೋ ?


ಸೂರತ್ (ಗುಜರಾತ) – ಇಲ್ಲಿಯ ೫೧ ವರ್ಷದ ಶೇಖ ಮಹಮ್ಮದ ಅಖ್ತರನು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ೨೨ ವರ್ಷದ ಹಿಂದೂ ಯುವತಿಯೊಂದಿಗೆ ವಿವಾಹವಾದನು. ವಿವಾಹದ ನಂತರ ಆಕೆಗೆ ಬುರಖಾ ಧರಿಸಲು ಮತ್ತು ನಮಾಜ ಪಠಣ ಮಾಡುವಂತೆ ಕಡ್ಡಾಯಗೊಳಿಸಿದ ಹಾಗೂ ಅದಕ್ಕಾಗಿ ಆಕೆಯ ಮೇಲೆ ದೌರ್ಜನ್ಯವೆಸಗಿದ. ಆಕೆಯ ಮೇಲೆ ಮತಾಂತರವಾಗುವಂತೆ ಒತ್ತಡ ಹೇರಿದನು. ಈ ಪ್ರಕರಣದ ಬಗ್ಗೆ ಆರಂಭದಲ್ಲಿ ‘ಲವ್ ಜಿಹಾದ್’ ಕಾನೂನಿನ ಅಡಿಯಲ್ಲಿ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ಹೀದೇಟು ಹಾಕಿದರು; ಆದರೆ ಹಿಂದೂ ಜಾಗರಣ ವೇದಿಕೆಯು ಆಂದೋಲನ ಮಾಡಿದ ನಂತರ ಪೊಲೀಸರು ಈ ಕಾನೂನಿನ ಅಡಿಯಲ್ಲಿ ದೂರನ್ನು ದಾಖಲಿಸಿದರು. (ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನ ಮಾಡದೇ ಇದ್ದಲ್ಲಿ, ಪೊಲೀಸರು ದೂರನ್ನು ನೊಂದಾಯಿಸಿಕೊಳ್ಳುತ್ತಿರಲಿಲ್ಲ ! – ಸಂಪಾದಕರು)

೧. ಮಾಹಿತಿ ಸಿಕ್ಕಿದ ಪ್ರಕಾರ ಒಂದು ಸಂಸ್ಥೆಯಲ್ಲಿ ಪೀಡಿತೆಗೆ ಅಖ್ತರನ ಪರಿಚಯವಾಯಿತು. ತದನಂತರ ಆತ ಮುಕೇಶ ಎಂದು ಸುಳ್ಳು ಹೆಸರನ್ನು ಹೇಳಿ ಆಕೆಯೊಂದಿಗೆ ಪರಿಚಯವನ್ನು ಹೆಚ್ಚಿಸಿಕೊಂಡನು. ಅದೇ ರೀತಿ ತಾನು ರೈಲ್ವೆಯಲ್ಲಿ ಕೆಲಸ ಮಾಡುತಿದ್ದೇನೆ ಎಂದು ಸುಳ್ಳು ಹೇಳಿದನು.

೨. ಕಾಲಾಂತರದಲ್ಲಿ ೨೦೧೯ ರಲ್ಲಿ ಇಬ್ಬರು ಹಿಂದೂ ಪದ್ದತಿಯಂತೆ ಮದುವೆಯಾದರು ಮತ್ತು ಅವರಿಗೆ ಒಂದು ಮಗು ಆಯಿತು. ಒಂದು ದಿನ ಅಖ್ತರನ ನಡುವಳಿಕೆಯಿಂದ ಪೀಡಿತ ಯುವತಿಗೆ ಸಂದೇಹ ಬಂತು. ಆದ್ದರಿಂದ ಆಕೆ ಆತನ ಗುರುತಿನ ಚೀಟಿಯನ್ನು ಪರಿಶೀಲಿಸಿದಳು ಆಗ ಆತ ಮುಸಲ್ಮಾನನಾಗಿದ್ದಾನೆ ಎಂಬುದು ಆಕೆಗೆ ಗಮನಕ್ಕೆ ಬಂದಿತು.

೩. ತನ್ನ ನಿಜವಾದ ಸ್ವರೂಪ ಬೆಳಕಿಗೆ ಬಂದನಂತರ ಅಖ್ತರ ಪೀಡಿತ ಯುವತಿಯೊಂದಿಗೆ ದೌರ್ಜನ್ಯ ಮಾಡಲು ಆರಂಭಿಸಿದನು, ಅದೇ ರೀತಿ ಮಗುವನ್ನೂ ಮತಾಂತರಗೊಳಿಸಲು ಒತ್ತಡ ಹಾಕತೊಡಗಿದನು.
ದೂರನ್ನು ನೊಂದಾಯಿಸಿಕೊಳ್ಳಲು ಪೊಲೀಸರಿಂದ ಹಿಂದೇಟು !

ದೂರನ್ನು ನೊಂದಾಯಿಸಲು ಪೊಲೀಸರಿಂದ ಹಿಂದೇಟು !

ಅಖ್ತರನ ನಿಜ ರೂಪ ತಿಳಿದ ನಂತರ ಪೀಡಿತೆಯು ಡಿಂಡೊಲಿ ಪೊಲೀಸರಲ್ಲಿ ಮೊರೆ ಹೋದಳು. ಆರಂಭದಲ್ಲಿ ಪೊಲೀಸರು ದೂರನ್ನು ನೊಂದಾಯಿಸಿಕೊಳ್ಳಲು ಹಿಂದೇಟು ಹಾಕಿದರು. ಪೀಡಿತೆಗೆ ‘ಲವ್ ಜಿಹಾದ್’ ಕಾನೂನಿನ ಅಡಿಯಲ್ಲಿ ದೂರನ್ನು ನೊಂದಾಯಿಸಬೇಕಿತ್ತು; ಆದರೆ ಪೊಲೀಸರು ವರದಕ್ಷಿಣೆಗಾಗಿ ಕಿರುಕುಳ ನೀಡಿರುವ ಪ್ರಕರಣದಲ್ಲಿ ನೊಂದಾಯಿಸಿದರು. ಆದ್ದರಿಂದ ಪೀಡಿತೆಯು ‘ಹಿಂದೂ ಜಾಗರಣ ವೇದಿಕೆ’ಯನ್ನು ಸಂಪರ್ಕಿಸಿದಳು. ವೇದಿಕೆಯು ಪೊಲೀಸರ ವಿರುದ್ಧ ೨೮ ಗಂಟೆ ಆಂದೋಲನ ಮಾಡಿತು. ಅನಂತರ ಪೊಲೀಸರು ‘ಲವ್ ಜಿಹಾದ್’ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದರು. (ಗುಜರಾತನಲ್ಲಿ ಹಿಂದುತ್ವನಿಷ್ಠ ಪಕ್ಷದ ಸರಕಾರ ಇದ್ದರೂ ಒಂದು ಹಿಂದುತ್ವನಿಷ್ಠ ಪಕ್ಷಕ್ಕೆ ೨೮ ಗಂಟೆ ಆಂದೋಲನ ಮಾಡಬೇಕಾಗುತ್ತದೆ. ಇದರಿಂದ ಅಲ್ಲಿಯ ಪೊಲೀಸರಲ್ಲಿ ‘ಲವ್ ಜಿಹಾದ್; ಬಗ್ಗೆ ಗಾಂಭೀರ್ಯವು ಎಷ್ಟು ಅಲ್ಪವಿದೆ, ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಪೊಲೀಸರನ್ನು ಕೂಡಲೇ ಅಮಾನತು ಗೊಳಿಸಿ ಅವರನ್ನು ಸೆರೆಮನೆಯಲ್ಲಿಡಬೇಕು ! – ಸಂಪಾದಕ)

ಪೊಲೀಸರು ಹೇಳಿದ ಪ್ರಕಾರ, ಆರೋಪಿಯು ಪೀಡಿತೆಗೆ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನೆಪ ಹೇಳಿ ಆಕೆಯ ತವರು ಮನೆಯವರ ಕಡೆಯಿಂದ ೧೪ ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾನೆ. ಅಖ್ತರನು ಈಗಾಗಲೇ ವಿವಾಹಿತನಾಗಿದ್ದು ಆತನಿಗೆ ೩೨ ವರ್ಷದ ಮಗಳೂ ಇದ್ದಾಳೆ, ನಗರ ಪೊಲೀಸ ಆಯುಕ್ತ ಅಜಯ ತೊಮರ ಇವರು ಈ ಪ್ರಕರಣದ ತನಿಖೆಯನ್ನು ಮಾಡುತ್ತಿದ್ದಾರೆ. ಅವರು, ಈ ಪ್ರಕರಣದಲ್ಲಿ ಪೊಲೀಸರ ನಿಲುವಿನ ಬಗ್ಗೆಯೂ ತನಿಖೆ ಮಾಡುವುದು ಅಗತ್ಯವಿದೆ ಎಂದು ಹೇಳಿದರು. (ಪೊಲೀಸ ಆಯುಕ್ತರು ತಮ್ಮ ಅಧಿಕಾರದ ಉಪಯೋಗಿಸಿ ದೂರನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ ! – ಸಂಪಾದಕ)