ತಮಿಳುನಾಡು ಸರಕಾರದಿಂದ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಾತಿಯ ಪ್ರಕರಣ
|
ಚೆನ್ನೈ (ತಮಿಳುನಾಡು) – ದ್ರಾವಿಡ ಮುನ್ನೇತ್ರ ಕಳಘಂ (ಡಿಎಂಕೆ) ಸರಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸುವ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ. ಈ ಬಗ್ಗೆ ಸ್ಟಾಲಿನ್ ಅವರು ವಿಧಾನಸಭೆಯಲ್ಲಿ, ಸಾಮಾಜಿಕ ನ್ಯಾಯ ನೀಡುವ ಉದ್ದೇಶದಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಎಲ್ಲಾ ಜಾತಿಯ ಹೊಸ ಅರ್ಚಕರ ನೇಮಕಾತಿಯ ಸಮಯದಲ್ಲಿ, ಪ್ರಸ್ತುತ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಯಾವುದೇ ಅರ್ಚಕರನ್ನು ತೆಗೆದುಹಾಕಲಾಗುವುದಿಲ್ಲ ಮತ್ತು ಒಂದು ವೇಳೆ ಹಾಗೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Row erupts after #TamilNadu govt appoints non-#Brahmins priests in temples, CM #MKStalin clarifieshttps://t.co/t7njg5hKqV
— DNA (@dna) August 18, 2021
೧. ಮುಖ್ಯಮಂತ್ರಿ ಸ್ಟಾಲಿನ್ ಇವರ ಮೊದಲು, ರಾಜ್ಯದ ದತ್ತಿ ಖಾತೆಯ (ಹಿಂದೂ ರಿಲಿಜಿಯಸ್ ಆಂಡ್ ಚಾರೆಟೇಬಲ್ ಎಂಡೋವಮೆಂಟ್) ಸಚಿವ ಪಿ.ಕೆ. ಸೇಕರ ಬಾಬು ಅವರು, ಬ್ರಾಹ್ಮಣ ಅರ್ಚಕರನ್ನು ಗುರಿಯಾಗಿಸಿಲ್ಲ. ನನ್ನ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಎಲ್ಲಾ ಜಾತಿಯ ಅರ್ಚಕರ ನೇಮಕಾತಿಯಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ಹೇಳಿದ್ದರು.
೨. ಕೆಲವು ಬ್ರಾಹ್ಮಣ ಅರ್ಚಕರು, ಆಗಸ್ಟ್ ೧೬ ರಂದು ನಮ್ಮ ಸೇವೆಯನ್ನು ಹಠಾತ್ತಾಗಿ ನಿಲ್ಲಿಸಲಾಯಿತು ಮತ್ತು ನಮ್ಮ ಸ್ಥಾನದಲ್ಲಿ ಇತರ ಅರ್ಚಕರನ್ನು ನೇಮಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ, ಪಿ.ಕೆ. ಸೆಖರ ಬಾಬು ಇವರು ಸ್ಪಷ್ಟೀಕರಣ ನೀಡುತ್ತಾ, ಕೆಲವು ಹಿಂದುತ್ವ ಶಕ್ತಿಗಳು ಜೀವನದಲ್ಲಿ ಇತರರು ಮುಂದುವರಿಯುವುದನ್ನು ಬಯಸುವುದಿಲ್ಲ ಎಂದು ಅನಿಸುತ್ತದೆ. ಅಂತಹವರು ಇಂತಹ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
೩. ಮಧುರೈನ ಮೀನಾಕ್ಷಿ ಅಮ್ಮನ್ ದೇವಸ್ಥಾನಗಳಲ್ಲಿ ಪಿ. ಮಹಾರಾಜನ್ ಮತ್ತು ಎಸ್. ಅರುಣ್ ಕುಮಾರ್ ನಂತಹ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಲಾಗಿದೆ. ಅವರು ೨೦೦೭ ರಲ್ಲಿ ಅರ್ಚಕರಾಗಲು ತರಬೇತಿ ಪಡೆದಿದ್ದರು.
೪. ತಮಿಳುನಾಡು ಸರಕಾರ ನೇಮಿಸಿದ ಅರ್ಚಕರಲ್ಲಿ ೨೪ ಮಂದಿ ರಾಜ್ಯ ಸರಕಾರದಿಂದ ಅರ್ಚಕರಾಗಲು ಆರಂಭಿಸಿದ್ದ ಕೇಂದ್ರದಿಂದ ತರಬೇತಿ ಪಡೆದಿದ್ದರೆ, ಇತರ ೩೪ ಮಂದಿ ಇತರ ಪಾಠಶಾಲೆಗಳಿಂದ ಅರ್ಚಕರಾಗಲು ತರಬೇತಿ ಪಡೆದಿದ್ದಾರೆ.
ವರ್ಣಗಳು ಜಾತಿಯನ್ನು ಆಧರಿಸಿಲ್ಲ ಆದರೆ ಗುಣಗಳ ಮೇಲಾಧಾರಿತವಾಗಿವೆ ! – ಡಾ. ಸುಬ್ರಹ್ಮಣ್ಯಂ ಸ್ವಾಮಿ
ಯಾರು ‘ಆಗಮ ಶಾಸ್ತ್ರ’ವನ್ನು ಅಧ್ಯಯನ ಮಾಡಿದ್ದಾರೆಯೋ ಅವರು ‘ಬ್ರಾಹ್ಮಣ’ನಾಗುತ್ತಾರೆ. ವರ್ಣದ ಪರಿಕಲ್ಪನೆಯನ್ನು ತಿಳಿಯಲು ಗೀತೆಯನ್ನು ಓದಿ. ಭಗವಾನ ಶ್ರೀಕೃಷ್ಣನು ಹೇಳಿರುವ ಪ್ರಕಾರ, ವರ್ಣವು ಜಾತಿಯನ್ನು ಆಧರಿಸಿರದೇ ಗುಣಗಳನ್ನು ಆಧರಿಸಿದೆ, ಎಂದು ಸುಬ್ರಹ್ಮಣ್ಯಂ ಸ್ವಾಮಿ ಟ್ವೀಟ್ ಮಾಡುತ್ತಾ ಈ ಬಗ್ಗೆ ಮಾತನಾಡಿದ್ದಾರೆ.