ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿ ಮತ್ತು ಪ್ರಜೆಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ !

ಗಾಂಧಿನಗರ (ಗುಜರಾತ) – ತಾಲಿಬಾನರು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಮೇಲೆ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು. ಭಾರತೀಯ ವಾಯುದಳದ ‘ಸಿ – ೧೭ ಗ್ಲೋಬ್‌ಮಾಸ್ಟರ’ ಈ ವಿಮಾನದಿಂದ ಎಲ್ಲರನ್ನು ಕರೆತರಲಾಗಿದೆ. ಇವರಲ್ಲಿ ರಾಯಭಾರಿ ಸಹಿತ ೧೨೦ ಜನರು ಒಳಗೊಂಡಿದ್ದಾರೆ.

ಈ ಮೊದಲು ಆಗಸ್ಟ್ ೧೬ ರಂದು ೧೫೦ ಭಾರತೀಯರನ್ನು ಮರಳಿ ಕರೆತರಲಾಗಿತ್ತು. ಇನ್ನು ಕೆಲವು ಭಾರತೀಯರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದು ಅವರ ಬಿಡುಗಡೆಗೆ ಇನ್ನೊಂದು ವಿಮಾನ ಕಾಬೂಲಿಗೆ ಕಳುಹಿಸಲಾಗುವುದು.