ಆಫಘಾನಿಸ್ತಾನದ ಪುನರ್ನಿರ್ಮಾಣಕ್ಕಾಗಿ ತಾಲಿಬಾನ್‌ನ ವತಿಯಿಂದ ಚೀನಾಗೆ ಆಮಂತ್ರಣ!

ಚೀನಾ ಒಂದು ದೊಡ್ಡ ಅರ್ಥವ್ಯವಸ್ಥೆ ಹಾಗೂ ಕ್ಷಮತೆಯಿರುವ ದೇಶವಾಗಿದೆ. ಚೀನಾವು ಅಫಘಾನಿಸ್ತಾನದಲ್ಲಿ ಶಾಂತತೆ ಹಾಗೂ ಹೆಚ್ಚಿಸಲು ರಚನಾತ್ಮಕ ಭೂಮಿಕೆಯನ್ನು ವಹಿಸಿದೆ. ನನಗೆ ಅನಿಸುತ್ತದೆ, ಚೀನಾವು ಅಪಘಾನಿಸ್ತಾನದ ಪುನರ್ವಸತಿ ಹಾಗೂ ಪುನರ್ನಿರ್ಮಾಣದಲ್ಲಿ ದೊಡ್ಡ ಭೂಮಿಕೆಯನ್ನು ವಹಿಸಿದೆ.

ಪ್ರಧಾನಿ ಮೋದಿಯವರಿಂದ ಆನ್‌ಲೈನ್ ಮೂಲಕ ಸೋಮನಾಥ ದೇವಾಲಯದ ನವೀಕರಣದ ಉದ್ಘಾಟನೆ

ಭಯೋತ್ಪಾದನೆಯಿಂದ ಶ್ರದ್ಧೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಸೋಮನಾಥ ದೇವಾಲಯವು ನಮ್ಮ ಶ್ರದ್ಧೆಯ ಸ್ಫೂರ್ತಿ ಸ್ಥಾನವಾಗಿದೆ. ಸೋಮನಾಥ ದೇವಾಲಯದ ಅಸ್ತಿತ್ವ ನಾಶಮಾಡಲು ಹಲವಾರು ಬಾರಿ ಪ್ರಯತ್ನಿಸಲಾಯಿತು. ಅದನ್ನು ಎಷ್ಟು ಬಾರಿ ಕೆಡವಲಾಗಿದೆಯೋ, ಅಷ್ಟೇ ಬಾರಿ ಅದನ್ನು ಪುನರ್ನಿರ್ಮಿಸಲಾಯಿತು.

ಖಲಿಸ್ತಾನಿ ಭಯೋತ್ಪಾದಕರಿಂದ ಪಂಜಾಬನಲ್ಲಿಯ ಧಾರ್ಮಿಕ ಸ್ಥಳಗಳ ಮೇಲೆ ಆಕ್ರಮಣ ನಡೆಸುವ ಹುನ್ನಾರ

ಪಾಕಿನ ಗುಪ್ತಚರ ದಳ ಐ.ಎಸ್.ಐ.ಯು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲಸಾ ಇಂಟರನ್ಯಾಷನಲ್‌ನೊಂದಿಗೆ ಕೈಜೋಡಿಸಿ ಪಂಜಾಬನಲ್ಲಿನ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ನಾಯಕರ ಮೇಲೆ ದಾಳಿ ಮಾಡುವ ಹುನ್ನಾರ ಮಾಡುತ್ತಿದೆ.

ತೀರ್ಥಹಳ್ಳಿಯ ಬಳಿ ಅಕ್ರಮ ಗೋಮಾಂಸ ಸಾಗಾಟ, ಇಬ್ಬರು ಬಂಧನ

ತಾಲೂಕಿನ ಆಗುಂಬೆ ಗಾಟಿಯ ಫಾರೆಸ್ಟ ಗೇಟ್ ಬಳಿ ೪೦೦ ಕೆಜಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಇರಫಾನ್ ಮತ್ತು ಮಹಮ್ಮದ ಈ ಮತಾಂಧರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಬ್ಬರು ಮಂಗಳೂರಿನ ನಿವಾಸಿಗಳಾಗಿದ್ದಾರೆ.

ತಾಲಿಬಾನ್ ನ್ನು ಸಮರ್ಥಿಸುವ ‘ಪೋಸ್ಟ್’ ಅಥವಾ ಹೇಳಿಕೆಗಳನ್ನು ನೀಡುವವರ ಮೇಲೆ ಕಾರ್ಯಾಚರಣೆ ಮಾಡಲಾಗುವುದು ! – ಮಧ್ಯಪ್ರದೇಶ ಸರಕಾರ

ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ.

ಭಾರತದ ಜೊತೆಗಿನ ವ್ಯಾಪಾರೀ ಸಂಬಂಧ ಮುರಿದ ತಾಲಿಬಾನ

ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ನಿಧಾನವಾಗಿ ತನ್ನ ಬಣ್ಣ ಬಯಲು ಮಾಡಲು ಆರಂಭಿಸಿದೆ. ತಾಲಿಬಾನವು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಮುರಿದಿದೆ, ಭಾರತದ ಜೊತೆ ಇರುವ ಎಲ್ಲಾ ರೀತಿಯ ಆಮದು-ರಫ್ತನ್ನು ಸಹ ನಿಲ್ಲಿಸಿದೆ

‘ಮರ್ಯಾದೆಯನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು !’(ಅಂತೆ) – ಟ್ವಿಟರ್

ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ

ಬಾಂಗ್ಲಾದೇಶದಲ್ಲಿ ಶಿವಮಂದಿರದಲ್ಲಿ ಶಿವನ ೨ ಮೂರ್ತಿಗಳನ್ನು ಧ್ವಂಸಗೊಳಿಸಿದ ಮತಾಂಧ ಯುವಕ !

ಮೈಜಡಿ ಮಾಸ್ಟರಪಾರಾ ಪ್ರದೇಶದ ಶಿವಮಂದಿರದ ಭಗವಾನ ಶಿವನ ಎರಡು ಮೂರ್ತಿಗಳನ್ನು ಭಗ್ನ ಮಾಡಿರುವ ಶಕೀಲ್‌ಉದ್ದಿನ್ ಎಂಬ ೧೮ ವರ್ಷದ ಮತಾಂಧನನ್ನು ಘಟನಾ ಸ್ಥಳದಲ್ಲೇ ಇಲ್ಲಿಯ ಹಿಂದುಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದರು.

ತಮಿಳುನಾಡಿನ ದೇವಸ್ಥಾನಗಳಲ್ಲಿ ಪೂಜಾರಿಗಳನ್ನು ಸರಕಾರವು ನೇಮಕಾತಿ ಮಾಡುವ ನಿರ್ಣಯದ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆನು ! – ಡಾ. ಸುಬ್ರಮಣ್ಯಂ ಸ್ವಾಮಿ

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ ಪ್ರಗತಿ ಸಂಘ) ಪಕ್ಷದಿಂದ ದೇವಸ್ಥಾನಗಳಲ್ಲಿನ ಪೂಜಾರಿಗಳನ್ನು ಸರಕಾರಿ ಮಟ್ಟದಲ್ಲಿ ನೇಮಕಾತಿಯನ್ನು ಮಾಡುವ ಪ್ರಯತ್ನಗಳಾಗುತ್ತಿವೆ. ಇದನ್ನು ಭಾಜಪದ ಹಿರಿಯ ನೇತಾರ ಹಾಗೂ ಸಂಸದರಾದ ಡಾ. ಸುಬ್ರಮಣ್ಯಂ ಸ್ವಾಮಿ ಇವರು ವಿರೋಧಿಸಿದ್ದಾರೆ.

ಸ್ವಾತಂತ್ರ್ಯ ಬಂತು; ಆದರೆ ಸುರಾಜ್ಯ(ಹಿಂದೂ ರಾಷ್ಟ್ರ) ತರಲು ನಮಗೆ ಸಂಘರ್ಷ ಮಾಡಬೇಕಾಗಲಿದೆ ! – ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಹಿಂದೂಗಳ ದೇವಸ್ಥಾನಗಳು ಸರಕಾರದಿಂದ ಮುಕ್ತ ಆಗಿಲ್ಲ. ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಮಹಾಭಾರತ, ರಾಮಾಯಣ ಹಾಗೂ ಭಗವತ್‌ಗೀತೆ ಕಲಿಸುವ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ, ಲೂಟಿ ಹಾಗೂ ದೌರ್ಜನ್ಯ ನಡೆಯುತ್ತಿದೆ.