ಭಾರತದ ಕರ್ನಾಟಕದಲ್ಲಿ ಓಮಿಕ್ರಾನ್‌ನ ೨ ರೋಗಿಗಳು ಪತ್ತೆ ! – ಕೇಂದ್ರ ಸರಕಾರದ ಮಾಹಿತಿ

ಭಾರತದಲ್ಲಿ ಕರೋನಾದ ಓಮಿಕ್ರಾನ್‌ನ ೨ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇಬ್ಬರೂ ರೋಗಿಗಳು ಕರ್ನಾಟಕ ರಾಜ್ಯದವರಾಗಿದ್ದಾರೆ. ಇವರಿಬ್ಬರೂ ಪುರುಷರಾಗಿದ್ದು ಒಬ್ಬರು ೪೬ ವರ್ಷ ಮತ್ತು ಇನ್ನೊಬ್ಬರು ೬೬ ವರ್ಷ ವಯಸ್ಸಿನವರಾಗಿದ್ದಾರೆ.

ಜಾಲೋರ (ರಾಜಸ್ಥಾನ) ಇಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ದೇವಸ್ಥಾನದ ವೃದ್ಧ ಅರ್ಚಕರ ಹತ್ಯೆ

ಜಾಲೋರ ಜಿಲ್ಲೆಯ ಧೂಂಬಡಿಯ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ೭೦ ವರ್ಷದ ಅರ್ಚಕರಾದ ನೈನದಾಸ ವೈಷ್ಣವ ಇವರನ್ನು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.

ಅಸ್ಸಾಂನಲ್ಲಿ ಮತಾಂತರಗೊಂಡ ಕ್ರೈಸ್ತರು ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದಲ್ಲಿ ಕಿತ್ತು ತೆಗೆದಿದ್ದ ಶಿವಲಿಂಗ ಮತ್ತು ತ್ರಿಶೂಲವನ್ನು ಪುನಃ ಸ್ಥಾಪಿಸಿದ ಹಿಂದೂಗಳು !

ಅಸ್ಸಾಂನಲ್ಲಿಯ ಕಛಾರ್ ಜಿಲ್ಲೆಯ ಕಟಿಗೋರಾದಲ್ಲಿ ಮಹಾದೇವ ಟಿಲಾ ಇಲ್ಲಿಯ ಶಿವಲಿಂಗ ಮತ್ತು ತ್ರಿಶೂಲನ್ನು ಕ್ರೈಸ್ತರು ಕಿತ್ತು ತೆಗೆದಿದ್ದರು ಹಾಗೂ ಅವರು ಅಲ್ಲಿ ಆಲದ ವಿಶಾಲವಾದ ಮರವನ್ನು ಕಡಿದಿದ್ದರು.

೨೦೨೧ ರಲ್ಲಿ ದೇಶದಲ್ಲಿ ೫ ಸಾವಿರದ ೫೭೯ ರೈತರ ಆತ್ಮಹತ್ಯೆ

೨೦೨೦ ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ೫ ಸಾವಿರದ ೫೭೯ ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಕೆಂದ್ರಿಯ ಕೃಷಿ ಸಚಿವ ನರೇಂದ್ರ ತೋಮರ ಇವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು.

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನ ಹತ್ಯೆ ಪ್ರಕರಣದ ೯ ಆರೋಪಿಗಳು ನಿರಪರಾಧಿಯೆಂದು ಬಿಡುಗಡೆ !

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರವೀಣ ಪೂಜಾರಿಯವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾದ ೯ ಮತಾಂಧರನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ.

ಕಾಂಚೀಪುರಂ (ತಮಿಳುನಾಡು) ಇಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಚರ್ಚ್‌ಅನ್ನು ಧ್ವಂಸ ಮಾಡಿ ! – ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ

ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡು ರಾಜ್ಯದ ಕಾಂಚಿಪುರಂ ಜಿಲ್ಲಾಧಿಕಾರಿಗೆ ಮುಂದಿನ ೪ ವಾರಗಳಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಚರ್ಚ್‌ಅನ್ನು ಕೆಡಹುವಂತೆ ಆದೇಶ ನೀಡಿದೆ.

ಚಿಕಿತ್ಸೆಯ ಸಮಯದಲ್ಲಿ ರೋಗಿ ಮೃತಪಟ್ಟರೆ ವೈದ್ಯರನ್ನು ತಪ್ಪಿತಸ್ಥ ಎಂದು ತಿಳಿಯಲಾಗದು ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಚಿಕಿತ್ಸೆಯ ಸಮಯದಲ್ಲಿ ರೋಗಿಯು ಮೃತಪಟ್ಟರೆ ಅದಕ್ಕಾಗಿ ವೈದ್ಯರನ್ನು ತಪ್ಪಿತಸ್ಥರು ಎಂದು ಹೇಳಲಾಗದು, ಎಂಬ ಮಹತ್ವಪೂರ್ಣ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ‘ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ಅವನ ಆಯುಷ್ಯದ ಬಗ್ಗೆ ಯಾವುದೇ ವೈದ್ಯರು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರು ಕೇವಲ ತಮ್ಮ ವತಿಯಿಂದ ಅತ್ಯುತ್ತಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಬಹುದು’, ಎಂದು ನ್ಯಾಯಾಲಯವು ಈ ಸಮಯದಲ್ಲಿ ಹೇಳಿದೆ. ಮುಂಬಯಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಇದರ ಒಂದು ಪ್ರಕರಣದ ಅರ್ಜಿಯನ್ನು ಆಲಿಸುವಾಗ ‘ರಾಷ್ಟ್ರೀಯ … Read more

‘ಟ್ವಿಟರ್’ನಲ್ಲಿ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡಲು ಸಾಧ್ಯವಿಲ್ಲ ! – ‘ಟ್ವಿಟರ್’ನ ಹೊಸ ನಿಯಮ

‘ಟ್ವಿಟರ್’ ಸಂಸ್ಥೆಯು ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ. ಅದಕ್ಕನುಸಾರ ಈಗ ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡಲು ಸಾಧ್ಯವಿಲ್ಲ.

ರೈತರ ಮೃತ್ಯುವಿನ ಯಾವುದೇ ನೋಂದಣಿ ಇಲ್ಲದ ಕಾರಣ ನಷ್ಟ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ! – ಕೇಂದ್ರೀಯ ಕೃಷಿ ಸಚಿವಾಲಯದಿಂದ ಸ್ಪಷ್ಟೀಕರಣ

ಕೃಷಿ ವಿಷಯದ ಕಾನೂನು ಹಿಂಪಡೆಯುವ ಆಂದೋಲನದಲ್ಲಿ ರೈತರ ಮೃತ್ಯುವಿನ ಪ್ರಕರಣದಲ್ಲಿ ಅವರ ಕುಟುಂಬದವರಿಗೆ ನಷ್ಟ ಪರಿಹಾರ ನೀಡಬೇಕು, ಈ ಒತ್ತಾಯದ ಬಗ್ಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಿದೆ.

‘ಶ್ರೀ ಶೈಲಂ ಭ್ರ್ರಮರಾಂಬಿಕ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಇತರ ಧರ್ಮದವರಿಗೆ ಅಂಗಡಿ ತೆರೆಯಲು ಸಾಧ್ಯವಿಲ್ಲ !

ಆಂಧ್ರಪ್ರದೇಶದ ಶ್ರೀಶೈಲಂ ಅಲ್ಲಿಯ ‘ಶ್ರೀಶೈಲ ಭ್ರ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಅನ್ಯಧರ್ಮೀಯರ ಅಂಗಡಿ ಖಾಲಿ ಮಾಡಲು ಮತ್ತು ಇನ್ನು ಮುಂದೆ ನಡೆಯುವ ಸಾರ್ವಜನಿಕ ಹರಾಜಿನಲ್ಲಿ ಈ ಸ್ಥಳ ಬೇರೆ ಧರ್ಮಿಯರಿಗೆ ನೀಡಬಾರದು, ಎಂದು ಆಂಧ್ರಪ್ರದೇಶದ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟ ನಿರ್ಣಯ ನೀಡಿದೆ.