ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನ ಹತ್ಯೆ ಪ್ರಕರಣದ ೯ ಆರೋಪಿಗಳು ನಿರಪರಾಧಿಯೆಂದು ಬಿಡುಗಡೆ !

  • ಈ ಆರೋಪಿಗಳು ಹಿಂದೂ ಕಾರ್ಯಕರ್ತನ ಹತ್ಯೆ ಮಾಡಿಲ್ಲ ಎಂದಾದರೆ ಹತ್ಯೆ ಮಾಡಿದವರ‍್ಯಾರು ? ಕಾರ್ಯಕರ್ತನ ಕುಟುಂಬದವರಿಗೆ ನ್ಯಾಯ ದೊರೆಯುವುದೇ ?
  • ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂ ಕಾರ್ಯಕರ್ತರ ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ!

ಮಡಿಕೇರಿ (ಕರ್ನಾಟಕ) – ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರವೀಣ ಪೂಜಾರಿಯವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾದ ೯ ಮತಾಂಧರನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ. ತುಫೈಲ, ನಯಾಜ, ಆಫರೀನ, ಮಹಮ್ಮದ ಮುಸ್ತಫಾ, ಇಲಿಯಾಸ, ಇರಾಫಾನ ಅಹಮದ, ಮುಜೀಬ್ ರಹಮಾನ, ಶರೀಫ ಮತ್ತು ಹರೀಸ ಇವು ಅವರ ಹೆಸರುಗಳಾಗಿವೆ. ’ಆರೋಪಿಗಳನ್ನು ಅಪರಾಧಿಗಳೆಂದು ಸಾಬೀತುಪಡಿಸಲು ಆಪಾದಕರ ಪಕ್ಷವು ಸೋತಿದೆ. ಆದುದರಿಂದ ಎಲ್ಲರನ್ನೂ ನಿರಪರಾಧಿಯೆಂದು ಬಿಡುಗಡೆ ಮಾಡಲಾಗಿದೆ. ಸತ್ಯದ ವಿಜಯವಾಗಿದೆ. ಸುಳ್ಳು ಆರೋಪದ ಅಡಿಯಲ್ಲಿ ೯ ಜನರನ್ನು ಬಂಧಿಸಲಾಗಿತ್ತು. ನ್ಯಾಯಾಲಯದ ನಿರ್ಣಯವು ಸಮಾಧಾನಕರವಾಗಿದೆ’ ಎಂದು ಆರೋಪಿಗಳ ನ್ಯಾಯವಾದಿ ಟಿ. ಎಚ್. ಆಬೂಬಕರ ರವರು ಹೇಳಿದ್ದಾರೆ. (ಪೊಲೀಸರು ಆರೋಪಿಗಳನ್ನು ಅಪರಾಧಿಗಳೆಂದು ಸಾಬೀತುಪಡಿಸಲು ಸೋತರೆ ರಾಜ್ಯ ಸರಕಾರವು ಮೇಲಿನ ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ಪುನಃ ಪ್ರಯತ್ನಿಸಬೇಕು ಮತ್ತು ಕಾರ್ಯಕರ್ತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ! – ಸಂಪಾದಕರು)

೧೪ ಆಗಸ್ಟ ೨೦೧೬ ರಂದು ’ಅಖಂಡ ಭಾರತ ಸಂಕಲ್ಪ ಯಾತ್ರೆ’ಯ ಒಂದು ಭಾಗವೆಂದು ತೆಗೆಯಲಾದ ಪಂಜಿನ ಮೆರವಣಿಗೆಯಲ್ಲಿ ಸಹಭಾಗಿಯಾಗಿ ಹಿಂದಿರುಗುತ್ತಿರುವಾಗ ಗುಡ್ಡೆಹೊಸೂರು ಬಳಿ ಪ್ರವೀಣ ಇವರನ್ನು ಹತ್ಯೆ ಗೈಯ್ಯಲಾಗಿತ್ತು. ಪೊಲೀಸರು ಆಗಸ್ಟ ೨೪, ೨೦೧೬ ರಂದು ಮೇಲಿನ ೯ ಜನರನ್ನು ಬಂಧಿಸಿದ್ದರು.