ಚಿಕಿತ್ಸೆಯ ಸಮಯದಲ್ಲಿ ರೋಗಿ ಮೃತಪಟ್ಟರೆ ವೈದ್ಯರನ್ನು ತಪ್ಪಿತಸ್ಥ ಎಂದು ತಿಳಿಯಲಾಗದು ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಚಿಕಿತ್ಸೆಯ ಸಮಯದಲ್ಲಿ ರೋಗಿಯು ಮೃತಪಟ್ಟರೆ ಅದಕ್ಕಾಗಿ ವೈದ್ಯರನ್ನು ತಪ್ಪಿತಸ್ಥರು ಎಂದು ಹೇಳಲಾಗದು, ಎಂಬ ಮಹತ್ವಪೂರ್ಣ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ‘ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ಅವನ ಆಯುಷ್ಯದ ಬಗ್ಗೆ ಯಾವುದೇ ವೈದ್ಯರು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರು ಕೇವಲ ತಮ್ಮ ವತಿಯಿಂದ ಅತ್ಯುತ್ತಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಬಹುದು’, ಎಂದು ನ್ಯಾಯಾಲಯವು ಈ ಸಮಯದಲ್ಲಿ ಹೇಳಿದೆ. ಮುಂಬಯಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಇದರ ಒಂದು ಪ್ರಕರಣದ ಅರ್ಜಿಯನ್ನು ಆಲಿಸುವಾಗ ‘ರಾಷ್ಟ್ರೀಯ ಗ್ರಾಹಕ ಕುಂದುಕೊರತೆ ಪರಿಹಾರ ಆಯೋಗ’ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ಈ ಆದೇಶದಲ್ಲಿ ವೈದ್ಯರ ಬೇಜವಾಬ್ದಾರಿತನದಿಂದಾಗಿ ರೋಗಿಯು ಮೃತಪಟ್ಟಿದ್ದರಿಂದ ರೋಗಿಯ ಸಂಬಂಧಿಕರಿಗೆ ೧೪ ಲಕ್ಷ ೧೮ ಸಾವಿರ ರೂಪಾಯಿಯ ನಷ್ಟ ಪರಿಹಾರ ನೀಡಬೇಕೆಂದು ಹೇಳಲಾಗಿತ್ತು.

ಪ್ರಸ್ತುತ ರೋಗಿಯ ಯಾವುದೇ ಒಳಿತು-ಕೆಡುಕಾದರೂ ಅದರ ಎಲ್ಲಾ ದೋಷ ಸಂಬಂಧಪಟ್ಟ ವೈದ್ಯರ ಮೇಲೆ ಹೇರುವ ಮಾನಸಿಕತೆ ನಿರ್ಮಾಣವಾಗಿದೆ. ಅನೇಕ ಪ್ರಕರಣಗಳಲ್ಲಿ ರೋಗಿಯ ಸಂಬಂಧಿಕರು ರೋಗಿಯ ಸಾವು ಆಗಿರುವುದು ಸ್ವೀಕರಿಸಲು ಸಿದ್ಧವಿರುವುದಿಲ್ಲ. ಕೊರೋನಾದ ಸಂಕ್ರಮಣ ಸಮಯದಲ್ಲಿ ಹಗಲು ರಾತ್ರಿ ರೋಗಿಗಳ ಸೇವೆ ಮಾಡಿರುವ ವೈದ್ಯರ ಮೇಲೆ ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ವಿಷಯದಲ್ಲಿ ನ್ಯಾಯಾಲಯವು ಖೇದ ವ್ಯಕ್ತಪಡಿಸಿತು.